ಅಸಂಘಟಿತ ಕಾರ್ಮಿಕರ ಭೋಜನ ವ್ಯವಸ್ಥೆಗೆ ಹತ್ತು ಸಾವಿರ ರೂಗಳ ಧನಸಹಾಯ ನೀಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ

ಸುಳ್ಯ : ಅಸಂಘಟಿತ ಕಾರ್ಮಿಕರ ಭೋಜನ ವ್ಯವಸ್ಥೆಗೆ ಡಿಸಿಸಿ ವತಿಯಿಂದ 10ಸಾವಿರ ರೂಗಳ ಚೆಕ್ ವಿತರಣೆ ನಡೆದಿದೆ.

ಇಂದು ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ನಂತರ ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಆಯೋಜಿಸಲಾಗಿರುವ ಅಸಂಘಟಿತ ಕಾರ್ಮಿಕರ ಭೋಜನ ವ್ಯವಸ್ಥೆಯನ್ನು ಪರಿಶೀಲಿಸಿದ ಕಾಂಗ್ರೆಸ್ಸಿನ ಮುಖಂಡರುಗಳು ಸಂಘಟಕರ ಈ ಕಾರ್ಯಕ್ರಮಕ್ಕೆ ಪಕ್ಷದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಬಡ ಕೂಲಿಕಾರ್ಮಿಕರ ಹಸಿವು ದಣಿಸುವ ಈ ಒಂದು ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಂತ ಎಲ್ಲಾ ಸಂಘಟನೆಯ ನೇತಾರರಿಗೆ ಪಕ್ಷದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ವತಿಯಿಂದ ಹತ್ತು ಸಾವಿರ ರೂಪಾಯಿಗಳನ್ನು ಘೋಷಿಸಿದ ಸಚಿವ ಯು ಟಿ ಖಾದರ್ ಆ ಮೊತ್ತವನ್ನು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ಮೇಸ್ತ್ರಿ ಜಯನಗರರವರಿಗೆ ಹಸ್ತಾಂತರಿಸಲಾಯಿತು.

Leave A Reply

Your email address will not be published.