ಸುಳ್ಯಕ್ಕೆ ಕಾಂಗ್ರೆಸ್ ನಾಯಕರುಗಳ ಭೇಟಿ
ಕರೋನವೈರಸ್ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಜಿಲ್ಲೆಯಾದ್ಯಂತ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದುಈ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರುಗಳು ಸುಳ್ಯಕ್ಕೆ ಭೇಟಿ ಏಪ್ರಿಲ್ 6 ರಂದು ನೀಡಿದರು.
ಕೃಷಿಕರೇ ಹೆಚ್ಚಾಗಿರುವ ಸುಳ್ಯ ಕ್ಷೇತ್ರದಲ್ಲಿ ಕೃಷಿಕರ ಹಿತದೃಷ್ಟಿಯಿಂದ ಕೃಷಿಕರು ಬೆಳೆದಂತಹ ಅಡಿಕೆ ರಬ್ಬರ್ ಕೊಕ್ಕೊ ಗೇರುಬೀಜ ಮುಂತಾದ ಕೃಷಿ ಉತ್ಪನ್ನಗಳನ್ನು ಕ್ಯಾಂಪ್ಕೋ, ಮಾಸ್ ಮೂಲಕ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಸರ್ಕಾರದ ಗಮನಕ್ಕೆ ತರುವ ಕಾರ್ಯವೂ ಸಮಿತಿ ವತಿಯಿಂದ ನಡೆಯಲಿದ್ದು,ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಾದ ಎಪಿಎಲ್ ಕಾರ್ಡುದಾರರಿಗೆ ಅಕ್ಕಿಯನ್ನು ವಿತರಿಸದೆ ಇರುವುದು ಪಡಿತರ ಚೀಟಿ ಇಲ್ಲದವರು ಬಡವರನ್ನು ಗುರುತಿಸಿ ಅವರಿಗೆ ಸರಕಾರದ ವತಿಯಿಂದ ಅಕ್ಕಿ ಸಾಮಗ್ರಿಗಳನ್ನು ನೀಡದಿರುವ ಬಗ್ಗೆ ಮಾಹಿತಿ ಸಂಗ್ರಹ ಸ್ಥಳೀಯ ನಾಯಕರಿಂದ ಐಬಿ ಬಂಗಲೆಯಲ್ಲಿ ನಡೆಯಿತು.
ಇವೆಲ್ಲದರ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಉದ್ದೇಶ ದಿಂದ ಸುಳ್ಯ ಬೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಸಮಿತಿಯ ಅಧ್ಯಕ್ಷ ಜೆ ಆರ್ ಲೋಬೋ ಈ ಸಂದರ್ಭದಲ್ಲಿ ವಿವರಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿಮಂಗಳೂರು , ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಇವರೊಂದಿಗೆ ಉಪಸ್ಥಿತರಿದ್ದರು. ಸಮಾಲೋಚನಾ ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ, ಕೆಪಿಸಿಸಿ ಮಾಜಿ ಸದಸ್ಯರು ಡಾ.ರಘು, ಜಿಲ್ಲಾಪಂಚಾಯತ್ ಸದಸ್ಯರುಗಳಾದ ಪುರುಷೋತ್ತಮ ಗೌಡ ,ಪಿ ಪಿ ವರ್ಗಿಸ್ ,ತೋಮಸ್ ನೆಲ್ಯಾಡಿ ,ದಲಿತ ಸಮಿತಿ ಮುಖಂಡರಾದ ಕೃಷ್ಣಪ್ಪ ,ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಧನಂಜಯ ಅಡ್ಪಂಗಾಯ, ಪಿ ಎ ಮಹಮ್ಮದ್, ಕೆ ಎಂ ಮುಸ್ತಫ ಜನತಾ, ಎಸ್ ಸಂಸುದ್ದಿನ್, ನ ಪಂ ಸದಸ್ಯರುಗಳಾದ ಎಂ ವೆಂಕಪ್ಪಗೌಡ, ಶರೀಫ್ ಕಂಠಿ, ದೀರಾಕ್ರಾಸ್ತ ,ರಿಯಾಸ್ ಕಟ್ಟೇಕರ್, ಬ್ಲಾಕ್ ಕಾಂಗ್ರೆಸ್ ಪಕ್ಷದ ವಕ್ತಾರರಾದ ನಂದರಾಜ್ ಶಂಕೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೋಕೋ, ಶಾಫಿ ಕುತ್ತ ಮಟ್ಟೆ,ಮೊದಲಾದವರು ಉಪಸ್ಥಿತರಿದ್ದರು.