ಉಜಿರೆಯ ಎಸ್ ಡಿ ಎಂ ಆಸ್ಪತ್ರೆಯ ವೈದ್ಯರಾಗಿದ್ದ ಡಾಕ್ಟರ್ ಪ್ರಭಾಶ್ ವಿಧಿವಶ

ಉಜಿರೆ : ಕಳೆದ ಮೂರು ದಶಕಗಳಿಂದ ಉಜಿರೆಯ ಎಸ್ ಡಿ ಎಂ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದುಕೊಂಡು ಸುತ್ತಮುತ್ತಲ ತಾಲೂಕುಗಳ ಲಕ್ಷಾಂತರ ಜನರಿಗೆ ಶುಶ್ರೂಷೆ ಮಾಡಿದ್ದ ವೈದ್ಯ ಡಾಕ್ಟರ್ ಪ್ರಭಾಶ್ ಅವರು ವಿಧಿವಶರಾಗಿದ್ದಾರೆ.

ಅವರಿಗೆ 63 ವರ್ಷ ವಯಸ್ಸಾಗಿತ್ತು. ಕಳೆದೊಂದು ವರ್ಷದಿಂದ ಅವರು ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ನಿನ್ನೆ ಭಾನುವಾರದ ಮಧ್ಯರಾತ್ರಿ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ತೀವ್ರಸ್ವರೂಪದ ಹೃದಯಾಘಾತದಿಂದ ಅವರು ನಿಧನ ಹೊಂದಿದರು.

Leave A Reply

Your email address will not be published.