ದ.ಕ. ಮೊದಲ ಕೊರೋನ ಸೋಂಕಿತ ಗುಣಮುಖ | ನಾಳೆ ಆಸ್ಪತ್ರೆಯಿಂದ ಬಿಡುಗಡೆ
ಮಂಗಳೂರು, ಎ.5 : ಕೋರೋನಾ ಸಂಬಂಧಿತ ಕೆಟ್ಟ ಸುದ್ದಿಗಳ ಮದ್ಯೆ ಒಂದು ಒಳ್ಳೆಯ ಸುದ್ದಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದ್ದ ಮೊದಲ ಕೊರೋನ ಸೋಂಕಿತ ಗುಣಮುಖವಾಗಿದ್ದು, ನಾಳೆ ಎ.6 ರಂದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ.
ಈ ಮೂಲಕ ಜಿಲ್ಲೆಯ ಜನತೆಯಲ್ಲಿ ಮೋಡಗಟ್ಟಿದ ಆತಂಕದ ನಡುವೆಯೂ ಸಣ್ಣ ರಿಲೀಫ್.
ಮಾರ್ಚ್ 19 ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈನಿಂದ ಬಂದಿದ್ದ 22 ವರ್ಷದ ಭಟ್ಕಳ ಮೂಲದ ಈ ವ್ಯಕ್ತಿ. ಆ ವ್ಯಕ್ತಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಜಿಲ್ಲಾಡಳಿತ ಆತನ ತಪಾಸಣೆ ನಡೆಸಿತ್ತು.
ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಆತನಲ್ಲಿ ಕೊರೋನ ಸೋಂಕು ಲಕ್ಷಣಗಳು ಕಂಡುಬಂದಿತ್ತು. ತಕ್ಷಣ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಹುಟ್ಟೂರು ಭಟ್ಕಳಕ್ಕೆ ಹೋಗಲು ಬಿಟ್ಟಿರಲಿಲ್ಲ. ಈಗ ಆ ವ್ಯಕ್ತಿ ಚಿಕಿತ್ಸೆ ಪಡೆದು ಗುಣಮುಖನಾಗಿ ನಾಳೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ತನ್ನ ಹುಟ್ಟೂರಿಗೆ ಮರಳಲಿದ್ದಾನೆ.
ದಕ್ಷಿಣ ಕನ್ನಡದ ಮೊದಲ ರೋಗಿಯನ್ನು ಗುಣ ಮಾಡಿದ್ದಾರೆ ನಮ್ಮ ಹೆಮ್ಮೆಯ ವೈದ್ಯರುಗಳು… ನರ್ಸುಗಳು ಅಂಬುಲೆನ್ಸ್ ಡ್ರೈವರ್ಗಳು…… ಶ್ರಮಿಸಿದ್ದಾರೆ ಒಟ್ಟು ಆಡಳಿತ ವ್ಯವಸ್ಥೆಗೆ ಶುಭಾಶಯಗಳು.