ಕೊರೋನಾದ ಕಪ್ಪು ಕತ್ತಲೆಯಿಂದ ಹೊರಬಂದು ನಿಚ್ಚಳ ಬೆಳಕಿನತ್ತ ಒಂದು ಹೆಜ್ಜೆ | ದೀಪ ಪ್ರಜ್ವಲಿಸಲಿ !

‌ದೀಪವೆಂಬುದು ಬೆಳಕಿನ ಸಾಧನ,ಭಾರತೀಯ ಸನಾತನ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷವಾದ ಮಹತ್ವವಿದೆ.ಬೆಳಕಿನಲ್ಲಿ ಭಗವಂತನನ್ನ ಕಾಣುವ ನಂಬಿಕೆ ಅಗಾಧವಾದದ್ದು.

ಸನ್ಮಾರ್ಗದಲ್ಲಿ ದೇವರ ಸ್ಮರಣೆಯೆಂದರೆ ಅದು ದೀಪ ಬೆಳಗಿಸುವುದರಿಂದ ಮಾತ್ರ ಸಾಧ್ಯ. ಹಣತೆ ಎಂಬುದು ಸಣ್ಣ ವಸ್ತುವಾದರು ಅದರ ಬೆಳಕಿನಿಂದ ಇಡೀ ಜಗತ್ತನ್ನೇ ಬೆಳಗಿಸುವ ಶಕ್ತಿಯಿದೆ. ಪರಮ ಪವಿತ್ರವಾದ ಜ್ಯೋತಿಯನ್ನ ಬ್ರಹ್ಮನಿಗೆ, ಜನಾರ್ಧನನಿಗೆ ಹೋಲಿಸುವ ಶ್ಲೋಕಗಳು ಇಂದಿಗೂ ಜೀವಂತವಾಗಿದೆ. ಶ್ರದ್ದೆ ಮತ್ತು ಭಕ್ತಿಯಿಂದ ಜ್ಯೋತಿ ಬೆಳಗಿಸಿದರೆ ತಾವು ಮಾಡಿದ ಪಾಪಗಳೆಲ್ಲ ಕಳೆಯುತ್ತವೆ ಎಂಬ ನಂಬಿಕೆ ಜನರದ್ದು. ಹಿಂದಿನ ಕಾಲದಲ್ಲಿ ದೇವಸ್ಥಾನದ ಗೋಪುರದ ತುದಿಯಲ್ಲಿ ದಿನನಿತ್ಯ ದೀಪ ಬೆಳಗಿಸಿ ಊರಿನ ಜನರರಲ್ಲಿದ್ದ ಭಯ ಮತ್ತು ಕೆಟ್ಟ ಯೋಚನೆಗಳನ್ನ ಹೋಗಲಾಡಿಸುತ್ತಿತು.

ದೀಪ ಅಥವಾ ಬೆಳಕು ಯಾವುದೇ ಧರ್ಮಕ್ಕೆ ಸೀಮಿತವಾದದ್ದಲ್ಲ. ಅದೇ ರೀತಿ ಆ ಜ್ಯೋತಿ ಎಂದಿಗೂ ಭೇಧ-ಭಾವ ಮಾಡದೆ ಜಗತ್ತಿನ ಕತ್ತಲೆಯನ್ನ ಸರಿದೂಡುತ್ತದೆ. ಮನೆಯಲ್ಲಿ ದಿನನಿತ್ಯ ಪರಮಾತ್ಮನನ್ನ ಸ್ಮರಿಸಿ ಭಕ್ತಿಯಿಂದ ದೀಪ ಬೆಳಗಿಸುವುದರಿಂದ ಭಯದ ವಾತಾವರಣವಿಲ್ಲದೆ ನೆಮ್ಮದಿ,ಶಾಂತಿ,ಆರೋಗ್ಯ,ಸಂಪತ್ತು ನೆಲೆಯಾಗುತ್ತದೆ. ಪ್ರತೀದಿನ ಬೆಳಗ್ಗೆ ದೀಪ ಉರಿಸುವುದರಿಂದ ನಮ್ಮಲ್ಲಿ ಹೊಸ ಚೈತನ್ಯ ಸೃಷ್ಟಿಯಾಗಿ ದಿನವಿಡೀ ಉತ್ಸಾಹದ ಕಾಲ ನಮ್ಮದಾಗಿರುತ್ತದೆ. ಎಳ್ಳೆಣ್ಣೆ ಮತ್ತು ತುಪ್ಪದಿಂದ ದೀಪ ಉರಿಸಿದರೆ ವಾತಾವರಣದಲ್ಲಿನ ಬ್ಯಾಕ್ಟಿಯಗಳನ್ನ ನಾಶಪಡಿಸುವ ವಿಶೇಷ ಗುಣವಿದೆ ಎಂಬುದನ್ನ ವಿಜ್ಞಾವವೇ ಒಪ್ಪಿಕೊಂಡಿದೆ. ದೀಪವೆಂದರೆ ಕತ್ತಲಿನಿಂದ ಬೆಳಕಿನೆಡೆಗೆ ಎಂದು ಮಾತ್ರವಲ್ಲದೆ ಶುಭ ಆರಂಭಗಳಿಗೂ ದೀಪದ ಬೆಳಕೇ ಮುನ್ನುಡಿ.

ಪ್ರಸ್ತುತ ಎಂದಲ್ಲದೆ ರಾಜಾಢಳಿತ ಕಾಲದಲ್ಲಿಯೂ ಯಾವುದೇ ಕಾರ್ಯಕ್ರಮವನ್ನ ಆರಂಭಿಸುವ ಮೊದಲು ದೀಪ ಬೆಳಗಿಸುವುದು ಮತ್ತು ಭಗವಂತನ ಸ್ಮರಣೆ ಸಾಂಪ್ರದಾಯವಾಗಿತ್ತು.ರಾಜರುಗಳು ಯುದ್ದಕ್ಕೆ ತೆರಳುವ ಮುನ್ನ ತಮ್ಮ ತಾಯಿ ಅಥವಾ ಪತ್ನಿ ದೀಪದ ಆರತಿಯನ್ನ ಮಾಡುತ್ತಿದ್ದುದು ಕದನಕ್ಕೆ ಸ್ಪೂರ್ತಿಯನ್ನ ನೀಡುತ್ತಿತ್ತು. ಅಷ್ಟಲ್ಲದೆ ವಿಜಯದ ಸಂಕೇತವನ್ನು ಕೂಡ ದೀಪ ಬೆಳಗಿಸುವುದರ ಮೂಲಕ ಸಂಭ್ರಮಿಸಲಾಗುತ್ತಿತ್ತು. ಇದರಿಂದ “ದೀಪ ಶೌರ್ಯದ ಸಂಕೇತ” ಮತ್ತು “ಸಂಭ್ರಮದ ಸಂಕೇತ” ಎಂಬುದನ್ನ ಅರಿಯಬಹುದು. ಯಾವುದೇ ಶುಭಕಾರ್ಯಕ್ರಮಗಳು ವಿಘ್ನವಿಲ್ಲದೆ ಸುಸೂತ್ರವಾಗಿ ನೆರವೇರಬೇಕೆಂದು ವಿಘ್ನೇಶ್ವರನಲ್ಲಿ ದೀಪ ಬೆಳಗಿಸುವುದರ ಮೂಲಕ ಪ್ರಾರ್ಥಿಸಿ ಆರಂಭಿಸಲಾಗುತ್ತದೆ.

ಶಾಂತಿ ಮಂತ್ರದಲ್ಲಿ ಉಲ್ಲೇಖಿಸಿದಂತೆ:
‌”ಅಸತೊಮ ಸದ್ಗಮಯ
‌ ತಮಸೋಮಾ ಜೋತಿರ್ಗಮಯ
‌ಮೃತ್ಯೋರ್ಮ ಅಮೃತಂಗಮಯ
‌ ಓಂ ಶಾಂತಿಃ ಶಾಂತಿಃ ಶಾಂತಿಃ” ಅರ್ಥಾತ್ ಅಸತ್ಯದಿಂದ ಸತ್ಯದ ಕಡೆಗೆ ಸನ್ಮಾರ್ಗದಲ್ಲಿ ನಡೆಯೋಣ. ಕತ್ತಲೆಯಿಂದ, ಅಜ್ಞಾನದಿಂದ,ಕೆಟ್ಟಯೋಚನೆಯಿಂದ ಹೊರಬಂದು ಸತ್ಯದ ಹಾದಿ ಬೆಳಕಿನೆಡೆಗೆ ಸಾಗೋಣ. ಮೃತ್ಯುವಿನಿಂದ ಮತ್ತು ನರಕದಿಂದ ದೂರ ಉಳಿದು ಅಮೃತಶೀಲರಾಗೋಣ. ಜಗತ್ತಿಗೆ ಒಳಿತಾಗಲಿ.ಶಾಂತಿ ನೆಲೆಯೂರಲಿ ಎಂಬ ಸಂದೇಶವನ್ನೂ ಸಾರುತ್ತದೆ. ಬೆಳಕು ಭಕ್ತಿಯೊಂದಿಗೆ ಜ್ಞಾನ ಮತ್ತು ಅಮರತ್ವದ ಸಂಕೇತವೂ ಆಗಿದೆ.

ಹುಟ್ಟಿನಿಂದ ವಿನಾಶದವರೆಗೂ ಆರಂಭದಿಂದ ಅಂತ್ಯದವರೆಗೂ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ. ಈ ಜಗತ್ತಿಗೆ ಸೂರ್ಯ- ಚಂದ್ರರ ಬೆಳಕಿಲ್ಲದಿದ್ದರೆ ಎಲ್ಲವೂ ಶೂನ್ಯದಂತಿರುತ್ತಿತ್ತು. ಜಗತ್ತಿಗೆ ಬೆಳಕು ನೀಡುವ ಸೂರ್ಯ-ಚಂದ್ರನನ್ನ ಕಣ್ಣಿಗೆ ಕಾಣುವ ದೇವರು ಎಂದು ಪೂಜಿಸುವುದು ಇದೇ ಕಾರಣಕ್ಕೆ. ಬೆಳಕಿನ ಬಣ್ಣವು ಕೆಂಪು, ಕೇಸರಿ, ಕಪ್ಪು, ಹಳದಿ ನಾನಾ ರೀತಿಯಿಂದ ಗುರುತಿಸಲ್ಪಟ್ಟಿದ್ದು ಮೇಲ್ಮುಖವಾಗಿ ಕೇಸರಿ ಬಣ್ಣವು ರಾರಾಜಿಸುವಂತೆ ಕಾಣುತ್ತದೆ. ಬೆಳಕಿನ ಪ್ರತಿಯೊಂದು ಬಣ್ಣಕ್ಕೂ ಒಂದೊಂದು ವಿಶೇಷ ಅರ್ಥವನ್ನ ಕಲ್ಪಿಸಿ ಕೊಡಲಾಗಿದೆ.

ಪ್ರಸ್ತುತ ಕಾಲಮಾನದಲ್ಲಿ ಲೋಕಕ್ಕೆ ಕಂಠಕವಾಗಿರುವ ಕೊರೋನಾ ಮಹಾಮಾರಿಯ ವಿರುದ್ದದ ಯುದ್ಧದಲ್ಲಿ ಭಾರತ ಮೊದಲನೇ ದಿನ ಶಂಖ, ಜಾಗಟೆಯನ್ನ ಬಡಿಯುವ ಮೂಲಕ ಯುದ್ಧಕ್ಕೆ ಸಿದ್ಧನಿದ್ದೇನೆ ಎಂಬ ಸ್ಪಷ್ಟ ಸಂದೇಶವನ್ನ ಜಗತ್ತಿಗೆ ನೀಡಿದೆ. ಇದೇ ಏಪ್ರಿಲ್ 5 ರಂದು ಈ ದೇಶದ ನಾಯಕನ ನುಡಿಯಂತೆ ಪ್ರಜೆಗಳೆಲ್ಲ ತಮ್ಮ ಮನೆಗಳಲ್ಲಿ 9 ಗಂಟೆಗೆ ಸರಿಯಾಗಿ 9 ನಿಮಿಷಗಳ ಕಾಲ ವಿದ್ಯುತ್ ಆರಿಸಿ ದೀಪ ಬೆಳಗಿಸಬೇಕು ಎಂಬ ಮನವಿ ರವಾನೆಯಾಗಿದೆ. ಬಹುಶಃ ನಾವು ಕೊರೋನ ವಿರುದ್ದದ ಯುದ್ಧದಲ್ಲಿ ಬಹುಪಾಲು ಜಯಿಸಿದ್ದೇವೆಯೇನೆಂಬ ಮುನ್ಸೂಚನೆಯು ಆಗಿದ್ದಿರಬಹುದು. ಕತ್ತಲಿನಂತಿದ್ದ ನಮ್ಮೆಲ್ಲ ಕುಟುಂಬಗಳು ಎಚ್ಚೆತ್ತು ಬೆಳಕಿನೆಡೆಗೆ ಸಾಗಲಿ ಎಂಬ ಸಂದೇಶವು ಆಗಿರಬಹುದು. ಅಥವಾ ಜ್ಯೋತಿಸ್ವರೂಪಿಯಾದ ಭಗವಂತನೇ ಈ ಕಂಠಕವನ್ನ ದೂರಗೊಳಿಸು ಎಂದು ಪ್ರಾರ್ಥಿಸುವ ಪರಿಯೂ ಇರಬಹುದು.

ಏನೇ ಇರಲಿ ದೇಶದ ಸರ್ಕಾರ ಜನರಿಗಾಗಿ- ಜನರ ಒಳಿತಿಗಾಗಿ ಬಹಳಷ್ಟು ಶ್ರಮಿಸಿರುವುದು ನಮಗೆಲ್ಲ ತಿಳಿದಿದೆ. ಅದೇರೀತಿ ಸನ್ಮಾನ್ಯ ಪ್ರಾಧಾನಮಂತ್ರಿಗಳ ಮಾತಿನಂತೆ ರಾಷ್ಟ್ರಾದ್ಯಂತ ದೀಪ ಬೆಳಗಿಸಿ ಭಾರತವನ್ನ ಬೆಳಗಿಸೋಣ,ಕತ್ತಲೆಯನ್ನ ಸರಿಸೋಣ,ಸರಕಾರದ ಆದೇಶವನ್ನ ಪಾಲಿಸೋಣ,ಕಾಣದ ಶಕ್ತಿಯನ್ನ ಅರಿಯದ ರೀತಿಯಲ್ಲಿ ಓಡಿಸೋಣ.

ಲೇ : ಪೃಥ್ವಿಶ್ ಧರ್ಮಸ್ಥಳ

Leave A Reply

Your email address will not be published.