ಜೀವ ಜಲ ಉಳಿಸಿ| ನೀರನ್ನು ಮಿತವಾಗಿ ಬಳಸಿ
ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಯು ಅವಲಂಬಿತವಾಗಿರುವುದು ನೀರನ್ನು. ನೀರು ಎಲ್ಲರಿಗೂ, ಎಲ್ಲಾ ಕಾಲದಲ್ಲೂ ಬೇಕಾದ ಅತ್ಯಗತ್ಯ ಮೂಲವಾಗಿದೆ. ದೈವದತ್ತವಾದ ನೀರು ಮಳೆಯ ರೂಪದಲ್ಲಿ ಇಳೆಗೆ ಸಿಗುವುದು. ನಾವು ಮೊದಲಿಗೆ ಜಲದ ಅಗತ್ಯತೆ ಬಗ್ಗೆ ವಿವೇಚಿಸಬೇಕಾಗಿದೆ.
ದಿನದಿಂದದಿನಕ್ಕೆ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಇಂದು ಜಲ ಸಂಪತ್ತು ಕಡಿಮೆಯಾಗಿದೆ.ಅರಣ್ಯಗಳ ನಾಶದಿಂದಾಗಿ ಒಂದೆಡೆ ಮಳೆ ಕಡಿಮೆಯಾಗಿ ಜಲಕ್ಷಾಮ ಉಂಟಾಗುತ್ತದೆ. ಇನ್ನೊಂದೆಡೆ ಭೂ ಕುಸಿತದಿಂದ , ಅಂತರ್ಜಲ ನಾಶವಾಗುತ್ತಿದೆ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೊಡ್ಡ ದೊಡ್ಡ ನದಿಗಳಿಗೆ ಅಣೆಕಟ್ಟನ್ನು ಕಟ್ಟಿ ಜಲಸಂರಕ್ಷಣೆಯ ಕಾರ್ಯವನ್ನು ಸರ್ಕಾರ ಕೈಗೊಂಡಿದೆ.ಆದರೆ ಇಂದು ಕೆಲವು ನದಿಗಳಿಗೆ ಮಾತ್ರ ಈ ಕಾರ್ಯ ಸೀಮಿತವಾಗಿದೆ.
ಮನೆಮನೆಗೂ, ಹೂವಿನಕೆರೆ ಕಟ್ಟೆಗೆ, ಇದನ್ನು ಅಳವಡಿಸಿ ನೀರನ್ನು ಸಂರಕ್ಷಿಸಬೇಕು. ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಇಂಗುಗುಂಡಿ, ಸಮತಲ ಬದು, ಸಮತಲ ಅಗಳು, ತುಂಡು ಅಗಳು ಗಳು ನೀರಿನ ಅಗತ್ಯತೆಯನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನೀರಿನ ಸಂರಕ್ಷಣೆ ಮಾಡದಿದ್ದಲ್ಲಿ ನೀರಿನ ಕೊರತೆಗಳು ಉಂಟಾಗುತ್ತದೆ. ಹೀಗೆ ಉಂಟಾದಾಗ ಕೆಲವು ರೋಗರುಜಿನಗಳು ಹೆಚ್ಚಾಗುತ್ತವೆ. ನಾವು ಇಂದು ಅನಗತ್ಯವಾಗಿ ನೀರನ್ನು ಉಪಯೋಗಿಸುತ್ತಿದ್ದೇವೆ. ನೀರು ಒಂದು ಅಮೂಲ್ಯವಾದ ದ್ರವ. ದೇವಲೋಕದಲ್ಲಿ ಅಮೃತಕ್ಕೆ ಎಷ್ಟು ಮಹತ್ವ ಇದೆಯೋ ಭೂಮಿಯಲ್ಲಿ ನೀರಿಗೆ ಅಷ್ಟೇ ಮಹತ್ವವಿದೆ.ಮೂರನೇ ಮಹಾಯುದ್ಧವಾದರೆ ಅದು ನೀರಿಗಾಗಿ ಮಾತ್ರ.
ನೀರು ತನ್ನಲ್ಲಿ ಹೆಚ್ಚಿನ ವಸ್ತುಗಳನ್ನು ಕರಗಿಸಿ ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ನೀರಿಗೆ ಸಾರ್ವತ್ರಿಕ ದ್ರಾವಕ ಎಂದು ಕರೆಯುತ್ತೇವೆ.ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 18ರಷ್ಟು ಜನರು ಭಾರತದಲ್ಲಿದ್ದಾರೆ. ಹಾಗಾಗಿ ನೀರಿನ ಬಳಕೆ ಭಾರತದಲ್ಲಿ ಬಹಳಷ್ಟಿದೆ. ಇದು ಮಾತ್ರವಲ್ಲದೆ ಭಾರತ ಕೃಷಿ ಪ್ರಧಾನ ರಾಷ್ಟ್ರವೂ ಹೌದು. ಹೀಗಾಗಿ ನೀರು ಕೃಷಿಗೂ ಅತ್ಯಮೂಲ್ಯವಾಗಿದೆ.
ನೀರಿನ ಅಭಾವವನ್ನು ತಡೆಗಟ್ಟುವ ಕಡೆ ನಾವು ಗಮನಹರಿಸಬೇಕು. ಇಲ್ಲದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯ. ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದು ಮಾರ್ಗವೆಂದರೆ ‘ ನೀರಿನ ಸಂರಕ್ಷಣೆ’ .
ಲಭ್ಯವಿರುವ ನೀರನ್ನು ಜಾಗರೂಕತೆಯಿಂದ, ಮಿತವ್ಯಯದಿಂದ ಬಳಸಿ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ.ಜೀವಸಂಕುಲದ ಉಗಮ, ಅಸ್ತಿತ್ವ ಮತ್ತು ಬೆಳವಣಿಗೆಗೆ ನೀರು ಕಾರಣವಾಗಿದೆ. ಮಾನವನಿಗೆ ಇಷ್ಟೆಲ್ಲ ಸಹಕಾರಿಯಾಗಿರುವ ನೀರು ದಿನದಿಂದ ದಿನಕ್ಕೆ ಮಲಿನವಾಗುತ್ತ ಹೋಗುತ್ತಿದೆ. ಇದರಿಂದಾಗಿ ಮಾನವನಿಗೆ ಮತ್ತು ಜಲಚರ ಜೀವಿಗಳಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾಗಿ ನೀರನ್ನು ಮಲಿನ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
-ಸಂದೀಪ್.ಎಸ್. ಮಂಚಿಕಟ್ಟೆ ,ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.
ventolin 200 mcg: Buy Albuterol inhaler online – buy ventolin inhalers online
ventolin cost australia
furosemide 100 mg: cheap lasix – buy lasix online