ಸರ್ಕಾರ & ಕ್ವಾರಂಟೈನ್ ಗೆ ಭಯ ಬೇಡ, ಅದು ಎಲ್ಲರ ಒಳ್ಳೆಯದಕ್ಕೆ । ಮುಸ್ಲಿಂ ಮೌಲ್ವಿ ಇಮಾಮ್ ಉಮರ್ ಇಲ್ಯಾಸಿ

ನವದೆಹಲಿ : ಸರ್ಕಾರ ಹಾಗೂ ಕ್ವಾರಂಟೈನ್ ಗೆ ಯಾವುದೇ ಕಾರಣಕ್ಕೂ ಭೀತಿಗೊಳಗಾಗದಿರಿ. ಸರ್ಕಾರದಿಂದ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಬೇಡ. ಎಂದು ಮುಸ್ಲಿಂ ಮೌಲ್ವಿಯೊಬ್ಬರು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ತಿಳಿಸಿದ್ದಾರೆ. ಈ ಮೂಲಕ ದೇಶದ ಹಲವೆಡೆ ದಾರಿ ತಪ್ಪುತ್ತಿರುವ ಮುಸ್ಲಿಂ ಸಮುದಾಯಕ್ಕೆ ಅವರು ಬುದ್ಧಿಮಾತು ಹೇಳಿದ್ದಾರೆ. ನಿಜಕ್ಕು ಇದು ಒಳ್ಳೆಯ ಮತ್ತು ಆಶಾದಾಯಕ ಬೆಳವಣಿಗೆ.

ಹೋಂ ಕ್ವಾರಂಟೈನ್ ಗೆ ಒಳಗಾದರೆ, ಅದು ನಿಮಗೆ ಶಿಕ್ಷೆ ನೀಡಿದಂತಲ್ಲ. ಇದು ನಿಮ್ಮ ಹಾಗೂ ಇತರರ ಸುರಕ್ಷತೆಯ ಪ್ರಶ್ನೆಯಾಗಿದೆ. ಕ್ವಾರಂಟೈನ್ ನಲ್ಲಿದ್ದವರು ಜೈಲಿನಲ್ಲಿ ಶಿಕ್ಷೆ ಅನುಭವಿಸಿದಂತೆ ಎಂದು ಯಾಕೆ ತಿಳಿಯಬೇಕು ? ಇದು ಕೇವಲ ಸುರಕ್ಷತೆಯ ವಿಚಾರವಾಗಿದೆ. ವ್ಯಕ್ತಿಯ ಜೀವ ಹಾಗೂ ಜೀವನವನ್ನು ಕಾಪಾಡುವುದು ಅತ್ಯಂತ ಪವಿತ್ರವಾದ ಕೆಲಸವೆಂದು ಇಸ್ಲಾಂ ಹೇಳುತ್ತದೆ. ರೋಗವನ್ನು ಧರ್ಮ ಅಥವಾ ಜಾತಿಗೆ ತಾಳೆ ಹಾಕದಿರಿ ಮುಸ್ಲಿಂ ಮೌಲ್ವಿ ಇಮಾಮ್ ಉಮರ್ ಇಲ್ಯಾಸಿ ಅವರು ಹೇಳಿದ್ದಾರೆ.

ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ಬಚ್ಚಿಟ್ಟುಕೊಳ್ಳಬಾರದು. ಸರ್ಕಾರದ ಬಗ್ಗ ಭಯ ಪಡುವುದು ಬೇಡ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಮುಸ್ಲಿಂ ಸಹೋದರರು ಹಾಗೂ ಮಸೀದಿ ನಿರ್ವಹಣಾ ಸಮಿತಿ ಸದಸ್ಯರೆಲ್ಲರೂ ಹೊರಗೆ ಬಂದು, ಸರ್ಕಾರಕ್ಕೆ ಮಾಹಿತಿ ನೀಡಬೇಕಿದೆ. ಸರ್ಕಾರದ ಬಗ್ಗೆ ಭೀತಿಗೊಳಗಾಗಬೇಡಿ ಎಂದು ಅವರು ಹೇಳಿದರು.

ಲಾಕ್’ಡೌನ್ ಅನ್ನು ಪ್ರತಿ ಪ್ರಜೆಯೂ ಗೌರವಿಸಬೇಕು. ಲಾಕ್’ಡೌನ್ ನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಈ ರೋಗಕ್ಕೆ ಇದನ್ನು ಬಿಟ್ಟರೆ, ಬೇರೆ ಯಾವುದೇ ಮದ್ದಿಲ್ಲ, ಚಿಕಿತ್ಸೆಯಿಲ್ಲ ಎಂದವರು ಕರೆ ನೀಡಿದ್ದಾರೆ. ಅವರ ಈ ಕರೆ ಸಮಯೋಚಿತವಾಗಿ ದೆ.

Leave A Reply

Your email address will not be published.