ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಮತ್ತೆ ಮಳೆ, ಆಲಿ ಕಲ್ಲು ಮಳೆ

ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ  ಮತ್ತೆ ಮಳೆ. ಗಿಡಗಳಿಗೆ ಎರಡು ಮೂರು ದಿನ ನೀರು ಹಾಕುವ ಅಗತ್ಯವಿಲ್ಲ ದಂತೆ ಜೋರಾಗೇ ಮಳೆ ಬಿದ್ದಿದೆ.


ಇಂದು ನಾಲ್ಕು ಗಂಟೆಗೆ ನಾರಾವಿಯಲ್ಲಿ ಮತ್ತೊಂದು ಬಾರಿ ಮಳೆ ಬಿದ್ದಿದೆ. ಕಳೆದ ಸಲ ಹದಿನೈದು ದಿನದ ಹಿಂದೆ ಮಳೆ ಬಿದ್ದಾಗ ಜೋರು ಸಿಡಿಲು ಗಾಳಿಯೊಂದಿಗೆ ಭಾರೀ ಮಳೆ ಸುರಿದಿತ್ತು. ಬೇರೆಲ್ಲೂ ಮಳೆ ಬಾರದೆ ಜನ ಹೊಟ್ಟೆ ಕಿಚ್ಚು ಪಟ್ಟಿದ್ದರು. ಈಗ ಮತ್ತೆ ಜೋರು ಮಳೆ.

ನಾರಾವಿ ದಕ್ಷಿಣ ಕನ್ನಡದ ಮಳೆಯ ತವರೂರು. ಅಲ್ಲಿಯೇ ಮೊದಲು ನೀರಾವಿ ತಣಿದು ಮಳೆ ಮೂಡುವುದು.
ಕಳೆದ ಸಲದಂತೆ ಈ ಬಾರಿ ಕೂಡಾ ಗಾಳಿ ಸಿಡಿಲು ಸಹಿತ ಮಳೆ ಮತ್ತು ಸ್ವಲ್ಪ ಡಿಫರೆಂಟ್ ಇರಲಿ ಅಂತ ಜತೆಗೆ ಆಲಿ ಕಲ್ಲು ಬೇರೆ ಬಿದ್ದಿದೆ.

ಮನೆಯಲ್ಲೇ ಇರುವ ಮಂದಿಯ ಮೈ ಮನಸ್ಸುಗಳು ತಂಪು ಮಾಡಿಕೊಂಡಿವೆ.

Leave A Reply

Your email address will not be published.