ಕೆಲ ಮುಸ್ಲಿಂ ಜನರಿಂದ ಕೊರೋನಾ ವಿರುದ್ದ ಹೋರಾಡುವ ವೈದ್ಯ- ಸಿಬ್ಬಂದಿಗಳ ಮೇಲೆ ದೇಶದ ಹಲವೆಡೆ ಹಲ್ಲೆ

ಬೆಂಗಳೂರಿನ ಬ್ಯಾಟರಾಯನಪುರದ ಸಾದಿಕ್ ನಗರದಿಂದ ಮೀರ್ ಸಾಧಕರು ಹೋಂ ಕ್ವಾರಂಟೈನ್ ಗೆ ಬಂದ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲು ಕಸಿದುಕೊಂಡಿದ್ದಾರೆ ಮತ್ತು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕೊರೋನಾ ವ್ಯಾಧಿಗಿಂತ ದೊಡ್ಡ ವ್ಯಾಧಿಗಳಾಗಿರುವ ಈ ಸಾದಿಕ್ ನಗರದ ಪುಂಡರ ಈ ನಡೆ ಅಕ್ಷಮ್ಯ ಅಪರಾಧ.

ದೇಶದಲ್ಲಿ ಕೊರೋನಾ ವೇಗವಾಗಿ ಹಬ್ಬುತ್ತಿದೆ. ಒಂದು ಕಡೆ ಅಲ್ಲಿ ದೆಹಲಿಗೆ ಹೋಗಿ ಬಂದ ಇಂತವರೇ ದೇಶದುದ್ದಕ್ಕೂ ಕೊರೋನಾದ ವಿಷ ಬೀಜಗಳನ್ನು ಬಿತ್ತುತ್ತಿದ್ದಾರೆ. ಇಲ್ಲಿ, ಹೋಂ ಕ್ವಾರಂಟೈನ್ ಅನ್ನು ಸರಕಾರದ ಆದೇಶದಂತೆ ಭೇಟಿಯಾಗಲು ಹೋದ ಆಶಾ ಕಾರ್ಯಕರ್ತೆಯರಿಗೆ ಅವಾಚ್ಯವಾಗಿ ನಿಂದಿಸಲಾಗುತ್ತಿದೆ. ಅಷ್ಟಕ್ಕೂ ಅವರು ಹೋದದ್ದು ಅಲ್ಲಿ ಹೋಂ ಕ್ವಾರಂಟೈನ್ ನವರ ಸುರಕ್ಷತೆಗೆ ಮತ್ತು ಅವರ ಸುತ್ತಲಿನ ಜನರ ಸುರಕ್ಷತೆಗೆ. ಅದಕ್ಕೂ ಅಡ್ಡಿ ಪಡಿಸುತ್ತಾರೆಂದರೆ, ಅವರಿಗೆ ಏನೆಂದು ಕರೆಯೋಣ?

ಇನ್ನೊಂದೆಡೆ ಮಧ್ಯಪ್ರದೇಶದಲ್ಲಿ ಇದಕ್ಕಿಂತಲೂ ಘೋರ ಘಟನೆ ನಡೆದಿದ್ದು, ಆ ಘಟನೆಯಲ್ಲಿ ಇಬ್ಬರು ಮಹಿಳಾ ವೈದ್ಯರು ಗಾಯಗೊಂಡಿದ್ದಾರೆ. ಇಂದೋರ್‌ನ ಟಾಟಪಟ್ಟಿ ಬಖಾಲ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೂವರು ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಐವರ ತಂಡ ನಿರ್ದಿಷ್ಟ ವ್ಯಕ್ತಿಯ ಪರೀಕ್ಷೆಗಾಗಿ ಸ್ಥಳಕ್ಕೆ ತೆರಳಿತ್ತು. ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ವೈದ್ಯರು ವ್ಯಕ್ತಿಯ ಹುಡುಕಾಟದಲ್ಲಿದ್ದರು.
ಶಂಕಿತ ಸೋಂಕು ತಗಲಿರಬಹುದಾದ ವ್ಯಕ್ತಿಯ ಬಗ್ಗೆ ವಿಚಾರಿಸುವಾಗ ಜನರು ಭಾರೀ ಸಂಖ್ಯೆಯಲ್ಲಿ ಸೇರಿದರು. ವಿರೋಧ ವ್ಯಕ್ತಪಡಿಸುತ್ತಾ, ಸುಮಾರು ನೂರು ಜನ ಸೇರಿಕೊಂಡು ಕಲ್ಲು ತೂರಾಟ ನಡೆಸಿದರು. ಆಗ ಸಮೀಪ ಇದ್ದ ಪೊಲೀಸ್ ಸಿಬ್ಬಂದಿ ಅವರನ್ನು ರಕ್ಷಿಸಿದರು.

ಇಂತಹುದೇ ಮತ್ತೊಂದು ಘಟನೆ ಕೆಲ ದಿನಗಳ ಹಿಂದೆ ಹೈದೆರಾಬಾದಿನ ರಾಜೀವ್ ಗಾಂಧೀ ಹಾಸ್ಪಿಟಲ್ ನಲ್ಲಿ ನಡೆದಿದೆ. ಅಲ್ಲಿ, ಕೊರೋನಾ ವೈರಸ್ ಪೀಡಿತ ವ್ಯಕ್ತಿ ಮರಣಿಸಿದ ಪರಿಣಾಮ ವೈದ್ಯರ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿತ್ತು.

ಮೊನ್ನೆ ಪುತ್ತೂರು ತಾಲೂಕಿನ ಸವಣೂರಿನಿಂದಲೂ ಆಶಾ ಕಾರ್ಯಕರ್ತೆಯರು ವಿಚಾರಿಸಲು ಮನೆಗೆ ಹೋದಾಗ ಮನೆಯವರಿಂದ ಅಸಹಕಾರ, ಉಡಾಫೆ ಮಾತು ಕೇಳಿಬಂದಿತ್ತು. ಅಲ್ಲದೆ, ಆ ವ್ಯಕ್ತಿ ಮನೆಯಲ್ಲಿ ಇರಲಿಲ್ಲ. ಅಲ್ಲದೆ ದಕ್ಷಿಣ ಕನ್ನಡದಲ್ಲೇ ಹಲವು ಜನ ಕೊರೋನಾ ವೈರಸ್ ಸಂಬಂಧ ಹೋಂ ಕ್ವಾರಂಟೈನ್ ನಲ್ಲಿ ಇರುವವರು ಮಾತು ಕೇಳದೆ ಸಾಮೂಹಿಕ ಸೋಂಕು ಹರಡಲು ಕಾರಣರಾಗುವ ಸನ್ನಿವೇಶ ಸೃಷ್ಟಿಸುತ್ತಿದ್ದಾರೆ.

ಈ ಎಲ್ಲಾ ಘಟನೆಗಳಿಗೂ ಒಂದಕ್ಕೊಂದು ಸಂಬಂಧವಿದೆ. ಅವರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ! ಈಗ ಹಲ್ಲೆ ಮಾಡಿದವರೆಲ್ಲರೂ ಮುಸ್ಲಿಮರೇ ಆದುದರಿಂದ, ಒಳ್ಳೆಯ ಮನಸ್ಸಿನ ಜಾಗೃತ ಮುಸ್ಲಿಮರಿಗೂ ಈಗ ಕಳಂಕ ತಪ್ಪಿದ್ದಲ್ಲ.
ನಮ್ಮ ಮುಸ್ಲಿಂ ಧರ್ಮಗುರುಗಳು ಏನು ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಈ ಕೂಡಲೇ ಅವರು ತಮ್ಮ ಸಮುದಾಯಕ್ಕೆ ಅಗತ್ಯವಿರುವ ಮಾಹಿತಿ ನೀಡಬೇಕು. ಕೊರೋನಾ ವೈರಸ್ ಒಂದೊಮ್ಮೆ ವ್ಯಾಪ್ತಿ ಹೆಚ್ಚಿಸಿಕೊಂಡರೆ, ಯಾರ ಕೈಗೂ ಸಿಗದಂತೆ ಹರಡಬಲ್ಲುದು ಎಂಬುದನ್ನು ಅವರು ತಮ್ಮ ಅನುಯಾಯಿಗಳಿಗೆ ಅರ್ಥ ಮಾಡಿಸಬೇಕು.

ಇವತ್ತಿಗೂ ಕೆಲವು ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಅಲ್ಲಲ್ಲಿ ಬರುತ್ತಿವೆ. ಅದರಲ್ಲಿ ಹೇಳಿದಂತೆ, CAA, NRC ಹತ್ತಿಕ್ಕಲು ಮೋದಿ ಸರಕಾರ ಸುಮ್ಮನೆ ಕೊರೋನಾ ವೈರಸ್ ಅಂತ ಹರಡುತ್ತಿದೆ ಎನ್ನುತ್ತಿದ್ದಾರೆ. ಹೀಗಾದರೆ ದೇಶದ ಜನ ಉಳಿಯುತ್ತಾರಾ ?

https://www.ndtv.com/video/news/news/attacks-on-doctors-healthcare-workers-rise-amid-covid-19-pandemic-544505

Leave A Reply

Your email address will not be published.