ಒಂದು ಕಡೆ ಕರೋನ ಹೆಮ್ಮಾರಿ ಕಾಟ….ಇನ್ನೊಂದು ಕಡೆ ದಿನಬಳಕೆಯ ವಸ್ತುಗಳು ದುಬಾರಿ
ಒಂದು ಕಡೆ ಕರೋನ ಹೆಮ್ಮಾರಿ ಕಾಟ….ಇನ್ನೊಂದು ಕಡೆ ದಿನಬಳಕೆಯ ವಸ್ತುಗಳು ದುಬಾರಿ ಮಧ್ಯಮ ಕುಟುಂಬ ಜನರಪಾಡು ಕೂಗು ಕೇಳಿ… ಜಗತ್ತಿನಾದ್ಯಂತ ಕರೋನ ವೈರಸ್ ಮಾತುಕತೆ ಯಾವುದೇ ಸುದ್ದಿ ತಗೆದರು ಟಿವಿ ನ್ಯೂಸ್, ಸುದ್ದಿ ಪತ್ರಿಕೆಗಳು ನಿತ್ಯ ಅಷ್ಟು ಸೋಂಕಿತರು ಶಂಕಿತರು..ಅಂಕಿ ಆಂಶಗಳ ಚಿತ್ರಣ ಇದರ ಮಧ್ಯದಲ್ಲಿ ಬಡವರ ಪಾಡು ಕೇಳುವವರು ಇಲ್ಲದಂತೆ ಆಗಿದೆ…ದಿನದುಡಿದರೆ ಮನೆ ಓಲೆ ಹಚ್ಚುವ ಪರಿಸ್ಥಿತಿ ಗಂಭಿರವಾಗಿದೆ….ಕರೋನ ಸಮಸ್ಯೆ ಎಲ್ಲರೂ ಒಗ್ಗೂಡಿ ಅದರ ವಿರುದ್ಧ ಹೋರಾಡುವದು ಅವಶ್ಯಕತೆ ಇದೆ.. ಅದರೆ ಕೆಲವು ಕಿರಾಣಿ ,ಕಾಯಿಪಲ್ಯ,ವ,ದಿನಬಳಕೆ ವಸ್ತುಗಳ ವ್ಯಾಪರಸ್ಥರು ಇದರ ದುರ್ಬಳಕೆ ಮಾಡಿಕೊಂಡ ನಿಗದಿತ ಬೆಲೆಗಿಂತ ಜಾಸ್ತಿ ಬೆಲೆಗೆ ಮಾರಾಟ ಮಾಡುವುತ್ತಿದ್ದಾರೆ .
ಅಹಾರ ಇಲಾಖೆ ಮಾನದಂಡಕ್ಕೆ ಮೀರಿ ಅಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಬೇಕು ಎಲ್ಲಾ ದಿನಬಳಕೆ ಅಂಗಡಿ ಆಯಾ ವಸ್ತುಗಳ ಇಂದಿನ ಬೆಲೆಯನ್ನು ಗ್ರಾಹಕನಿಗೆ ಕಾಣುವಂತೆ ಹಾಕಬೇಕು.
ಉದಾಹರಣೆಗೆ ಜೋಳ ದ ಬೆಲೆ ಕೆ.ಜಿ ೨೦ ರೂ ಅದೇ ರೀತಿ ಇನ್ನೂ ಉಳಿದ ಕಿರಾಣಿ ಸಾಮಾನುಗಳ,ಕಾಯಿಪಲ್ಯ ಇನ್ನಿತರ ಉಳಿದ ಬೆಲೆಗಳನ್ನು ಕಾಣುವಂತೆ ಪ್ರದರ್ಶಿಸಿದರೆ ಸಾಮಾನ್ಯ ಜನರಿಗೆ ಹೋರೆ ತಪ್ಪಿಸಬಹುದಾಗಿದೆ… ಇಲ್ಲಾವಾದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಮೋದಲೆ ದುಡಿಮೆ ಇಲ್ಲದ ಪರಿಸ್ಥಿತಿ ಬೆಲೆ ಏರಿಕೆ ಹಾಗೂ ನಿಗದಿ ಬೆಲೆಗಿಂತ ಜಾಸ್ತಿ ಮಾರುವವರ ವಿರುದ್ಧ ಕ್ರಮಕೈಗೂಳ್ಳಿ…ಹಾಗೆ ಎಲ್ಲಾ ಜನರು ಸರಕಾರದ ನಿಯಮಗಳನ್ನು ಪಾಲಿಸಿ ಕರೋನ ಮಹಾಮಾರಿಯನ್ನು ಹೋಡೆದೋಡಿಸಲು ಸಹಕಾರಿಯಾಗೋಣ ಎಲ್ಲರೂ ಮನೆಯಲ್ಲಿ ಇದ್ದು ನಮ್ಮ ಮನೆ ಮತ್ತು ದೇಶ ಕಾಯೋಣ.
-ಚನ್ನಾರಡ್ಡಿ. ಬಸವರಾಜ.ಗೂಳರಡ್ಡಿ ವಕೀಲರು ,ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಗದಗ 9164470005