ಮೊಬೈಲ್‌ OTPಯ ಮೂಲಕ ಪಾಣಾಜೆ ಶಾಲೆಯಲ್ಲಿ ಪ್ರಾರಂಭಗೊಂಡಿದೆ ಪಡಿತರ ವಿತರಣೆ

ಪುತ್ತೂರು : ರಾಜ್ಯದಲ್ಲಿ ಕೋವಿಡ್-19 ಲಾಕ್ ಡೌನ್ ಇರುವುದರಿಂದ ಎಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರವನ್ನು ಪಾಣಾಜೆ ಗ್ರಾಮದಲ್ಲಿ ಎ.2 ರಂದು ಬೆಳಿಗ್ಗೆ ಗಂಟೆ 9.30 ನಂತರ ದ.ಕ.ಜಿ.ಪ.ಮಾ.ಹಿ. ಪ್ರಾಥಮಿಕ ಶಾಲೆಯಲ್ಲಿ ಗ್ರಾಹಕರ ಮೊಬೈಲ್ ಗೆ ಬರುವ ಒ.ಟಿ.ಪಿ. ನಂಬರ್ ಸಹಾಯದಿಂದ ವಿತರಣೆ ಮಾಡಲಾಯಿತು. ಗ್ರಾಹಕರು ಕೊರೊನಾ ವೈರಸ್ ಬಗ್ಗೆ ಜಾಗೃತರಾಗಿ ಸರತಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ‌ಜೊತೆಯಲ್ಲಿ ಮಾಸ್ಕ್ ನ್ನು ಧರಿಸಿ ಪಡಿತರವನ್ನು ಪಡೆದುಕೊಂಡರು.

ವಿಶೇಷವಾಗಿ ಪಡಿತರವನ್ನು ವಿತರಿಸುವ ಸಂದರ್ಭದಲ್ಲಿ 2 ಕಂಪ್ಯೂಟರ್ ವ್ಯವಸ್ಥೆಯನ್ನು ಮಾಡುವ ಮೂಲಕ ಶೀಘ್ರವಾಗಿ ಪಡಿತರ ಹಂಚಿಕೆಗೆ ‌ಅನುವು ಮಾಡಿ ಈ ಮೂಲಕ ಜನಸಂದಣಿಯನ್ನು ನಿಯಂತ್ರಿಸುವುದಕ್ಕೆ ಸಹಾಯವಾಯಿತು.

ಈ ಜನಪರ ವ್ಯವಸ್ಥೆಗೆ ಗ್ರಾಮ ಪಂಚಾಯತ್, ಕೃಷಿಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ, ಪಶು ವೈದ್ಯಕೀಯ ಆಸ್ಪತ್ರೆ, ಪ್ರಾಥಮಿಕ ‌ಆರೋಗ್ಯ ಕೇಂದ್ರ , ಪ್ರಾಥಮಿಕ ಶಾಲೆ, ಸಂಪ್ಯ ಪೋಲಿಸ್ ಠಾಣೆ ಈ ಎಲ್ಲಾ ಸಂಸ್ಥೆಗಳು ಸಹಕಾರ ನೀಡಿದವು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಮಂಜುನಾಥ ಉಪಸ್ಥಿತರಿದ್ದರು.

Leave A Reply

Your email address will not be published.