ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಮತ್ತೆ ಮಳೆ, ಆಲಿ ಕಲ್ಲು ಮಳೆ
ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಮತ್ತೆ ಮಳೆ. ಗಿಡಗಳಿಗೆ ಎರಡು ಮೂರು ದಿನ ನೀರು ಹಾಕುವ ಅಗತ್ಯವಿಲ್ಲ ದಂತೆ ಜೋರಾಗೇ ಮಳೆ ಬಿದ್ದಿದೆ.
ನಾರಾವಿ ದಕ್ಷಿಣ ಕನ್ನಡದ ಮಳೆಯ ತವರೂರು. ಅಲ್ಲಿಯೇ ಮೊದಲು ನೀರಾವಿ ತಣಿದು ಮಳೆ ಮೂಡುವುದು.
ಕಳೆದ ಸಲದಂತೆ ಈ ಬಾರಿ ಕೂಡಾ ಗಾಳಿ ಸಿಡಿಲು ಸಹಿತ ಮಳೆ ಮತ್ತು ಸ್ವಲ್ಪ ಡಿಫರೆಂಟ್ ಇರಲಿ ಅಂತ ಜತೆಗೆ ಆಲಿ ಕಲ್ಲು ಬೇರೆ ಬಿದ್ದಿದೆ.
ಮನೆಯಲ್ಲೇ ಇರುವ ಮಂದಿಯ ಮೈ ಮನಸ್ಸುಗಳು ತಂಪು ಮಾಡಿಕೊಂಡಿವೆ.