ಕುಂಡಡ್ಕ | ಮೊಗೇರ ದೈವಸ್ಥಾನ, ಕೊರಗಜ್ಜ, ಪರಿವಾರ ದೈವಗಳ ಪ್ರತಿಷ್ಠೆ, ನೇಮೋತ್ಸವ ಮುಂದೂಡಿಕೆ

Share the Article

ಸುಳ್ಯ : ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯ ಇದರ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮವು ಎ.7 ಮತ್ತು 8 ರಂದು ನಡೆಸಲು ಉದ್ದೇಶಿಸಲಾಗಿತ್ತು.

ಆದರೆ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮಿತಿಯ ಪೂರ್ವಸಿದ್ಧತಾ ಸಭೆ ದೈವಸ್ಥಾನ ವಠಾರದಲ್ಲಿ ನಡೆದು ಪ್ರತಿಷ್ಠಾ ಮತ್ತು ನೇಮೋತ್ಸವ ಮುಂದೂಡಲು ತೀರ್ಮಾನಿಸಲಾಗಿದೆ.

ಕಾರ್ಯಕ್ರಮದ ಪ್ರಯುಕ್ತ ಹೊರ ತಂದಿರುವ ಲಕ್ಕಿಡಿಪ್ ಕೂಪನ್ ಡ್ರಾ ದಿನಾಂಕವನ್ನು ಮುಂದೂಡಲಾಗಿದೆ ಎಂದು ದೈವಸ್ಥಾನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ‌ ಪ್ರಕಟನೆ ತಿಳಿಸಿದೆ.

Leave A Reply