ಇಂದು ಸಂಜೆಯಿಂದಲೇ ದಕ್ಷಿಣ ಕನ್ನಡದಲ್ಲಿ ಹಾಲು ಖರೀದಿ ಪುನರಾರಂಭ
ಮಾ.30 : ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಹಾಲು ಖರೀದಿ ಸ್ಥಗಿತವಾಗಿತ್ತು. ಆದರೆ ಇವತ್ತು ಸಂಜೆಯಿಂದ ಹಾಲು ಖರೀದಿಯನ್ನು ಪುನರಾರಂಭಿಸಲಾಗುವುದೆಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ತಿಳಿಸಿದೆ.
ಮಾರ್ಚ್ 28 ರಂದು ರವಿರಾಜ ಹೆಗ್ಡೆ, ಅಧ್ಯಕ್ಷರು ದ.ಕ.ಹಾಲು ಒಕ್ಕೂಟ ಹಾಲು ಖರೀದಿ ಪುನರಾರಂಭಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.
ಮೊನ್ನೆ ನಿಲ್ಲಿಸಿದ್ದ ಹಾಲು ಖರೀದಿಯನ್ನು ಇವತ್ತು ಪುನರ್ ಪ್ರಾರಂಭಿಸಲಾಗುವುದು ಎಂದು ಹಾಲು ಒಕ್ಕೂಟ ತಿಳಿಸಿದೆ.
ಈ ಹಿಂದೆ ನಾಳೆಯಿಂದ ಹಾಲು ಖರೀದಿ ಮಾಡಲಾಗುವುದೆಂದು ಹೇಳಲಾಗಿತ್ತು. ಆದರೆ ಹಾಲಿಗೆ ಬೇಡಿಕೆ ಅತಿಯಾದ ಕಾರಣದಿಂದ ಮತ್ತು ಹಾಲು ಅಗತ್ಯ ಜೀವನಾವಶ್ಯಕ ವಸ್ತು ಆದುದರಿಂದ ಇವತ್ತಿನಿಂದಲೇ ಹಾಲು ಖರೀದಿಗೆ ಆದೇಶ ನೀಡಲಾಗಿದೆ.