ಸವಣೂರು | ಹೋಂ ಕ್ವಾರಂಟೈನ್ಗೆ ಸೂಚಿಸಿದವರ ಮನೆಗೆ ಇಲಾಖೆ ಭೇಟಿ, ಮನೆಯಲ್ಲಿರದೇ ಇರುವುದು ಪತ್ತೆ
ಇದು ಯಾವ ಥರದ ಸರಕಾರ ? ಯಾಕೆ ಹೊಂ ಕ್ವಾರಂಟೈನ್ ಜನರ ಮೇಲೆ ಇಷ್ಟು ಮಟ್ಟದ ತಾಳ್ಮೆ ಎಂದು ಅರ್ಥ ಆಗುತ್ತಿಲ್ಲ. ದೇಶವೆಲ್ಲ ಹೊತ್ತಿ ಉರಿಯುತ್ತಿದೆ. ಹೋಂ ಕ್ವಾರಂಟೈನ್ ವ್ಯಕ್ತಿಗಳು ಊರೂರು ಬೀದಿನಾಯಿಯಂತೆ ಬಲಿ ಬರ್ತಾ ಇದ್ದಾರೆ. ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅವರ ಹಿಂದೆ ಭಿಕ್ಷುಕರ ಥರ ಓಡಾಡುವುದೇ ಆಗಿದೆ. ಸ್ಟಾಪ್ ದಿಸ್ ಬ್ಲಡಿ ಪ್ರೋಸೆಸ್. ಮಾತು ಕೇಳದೆ ಸೋಂಕು ಹರಡುವ ಇಂತಹಾ ವ್ಯಕ್ತಿಗಳನ್ನು ಸರಕಾರ ಕನಿಕರ ತೋರದೆ ಶೂಟ್ ಮಾಡಿ. ಇಲ್ಲಾಂದ್ರೆ ನಾಯಿಯನ್ನು ಕಟ್ಟಿ ಹಾಕಿದ ಥರ ಸಂಕೋಲೆ ಬಿಗಿದು ಹಾಕಿ. ಸುಮ್ಮನೆ ಅವರಿಂದಾಗಿ ಸೋಂಕು ಹತ್ತಿಸಿಕೊಂಡು ಸಾಯರು ನಾವು ರೆಡಿ ಇಲ್ಲ. ನೀವು ಆಕ್ಷನ್ ತೆಗೆದುಕೊಳ್ಳದೆ ಹೋದರೆ, ಜನ ರೊಚ್ಚಿಗೇಳುವ ದಿನ ದೂರವಿಲ್ಲ. ಪ್ಲೀಸ್ ಆಕ್ಟ್ !!
ಓದುಗರೇ, ನಿಮ್ಮತಾಲೂಕಿನ ಜನಪ್ರತಿನಿಧಿಗಳ ಫೋನ್ ನಂಬರ್ ಕಲೆಕ್ಟ್ ಮಾಡಿಕೊಂಡು ದಯವಿಟ್ಟು ಅವರಿಗೆ ಕರೆ ಮಾಡಿ ಅವರನ್ನು ಒತ್ತಾಯಿಸಿ. ಹೋಂ ಕ್ವಾರಂಟೈನ್ ವ್ಯಕ್ತಿಗಳಿಂದಾಗಿ ನಮ್ಮ ಪ್ರಾಣವನ್ನು ಪಣಕ್ಕೆ ಇಡುವುದು ಬೇಡ. ನಿಮ್ಮ ನಿಮ್ಮ ಊರಿನಿಂದ ಹೋಂ ಸ್ಟೇ ವ್ಯಕ್ತಿಯನ್ನು ಬೇರೆಡೆ ಸಾಗಿಸುವಂತೆ ಒತ್ತಾಯಿಸಿ.
ಕಡಬ : ವಿದೇಶದಿಂದ ಬಂದು ಹೋಂ ಕ್ವಾರಂಟೈನ್ ಗೆ ಸೂಚಿಸಿದ ವ್ಯಕ್ತಿಯೋರ್ವರು ಮನೆಯಲ್ಲಿ ಇರದೇ ಇರುವುದು ಕೊರೋನಾ ತಡೆ ತಂಡದ ಗಮನಕ್ಕೆ ಬಂದ ಕುರಿತು ಸವಣೂರು ಗ್ರಾ.ಪಂ.ವ್ಯಾಪ್ತಿಯ ಸವಣೂರು ಗ್ರಾಮದ ಆರೇಲ್ತಡಿಯಿಂದ ವರದಿಯಾಗಿದೆ.
ಇಲ್ಲಿನ ವ್ಯಕ್ತಿಯೋರ್ವರು ಕೆಲದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದು, 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಅವರಿಗೆ ಸೂಚಿಸಲಾಗಿತ್ತು. ಅಲ್ಲದೆ ಜಿಲ್ಲಾಡಳಿತ ಕೂಡ ಪಟ್ಟಿ ಬಿಡುಗಡೆ ಮಾಡಿತ್ತು. ಅದರಂತೆ ಮಾ.30 ರಂದು ಆರೋಗ್ಯ ಇಲಾಖೆ, ಕಂದಾಯ ಇಲಾಖೆ,ಗ್ರಾ.ಪಂ.ನ ತಂಡ ಬೇಟಿ ನೀಡಿದ ವೇಳೆ ಆ ವ್ಯಕ್ತಿ ಮನೆಯಲ್ಲಿ ಇರದೇ ಇರುವುದು ಗೊತ್ತಾಗಿದೆ.
ಈ ಕುರಿತು ಮನೆಯವರಲ್ಲಿ ವಿಚಾರಿಸಿದಾಗ ಹೊರಹೋಗಿರುವ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಆ ವ್ಯಕ್ತಿಯನ್ನು ಮನೆಗೆ ಬರುವಂತೆ ಸೂಚಿಸಲಾಗಿ, ಆ ವ್ಯಕ್ತಿಗೆ ಮನೆಯಲ್ಲಿರುವಂತೆ ತಿಳಿಸಲಾಯಿತು. ಈ ವೇಳೆ ಆ ವ್ಯಕ್ತಿ ಸಕಾರಾತ್ಮಕವಾಗಿ ಸ್ಪಂದಿಸದೇ ಉಡಾಫೆ ವರ್ತನೆ ತೋರಿದರೆನ್ನಲಾಗಿದೆ.
ಬಳಿಕ ಬೆಳ್ಳಾರೆ ಪೊಲೀಸ್ ಠಾಣಾ ಎಸೈ ಹಾಗೂ ಸಿಬಂದಿಗಳು ಸ್ಥಳಕ್ಕೆ ಬಂದು ಆ ವ್ಯಕ್ತಿಯ ಮನೆಯವರಿಗೆ ಹೋಂ ಕ್ವಾರಂಟೈನ್ ನಲ್ಲಿರಿಸುವ ಜವಾಬ್ದಾರಿ ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ, ಲೆಕ್ಕ ಸಹಾಯಕ ಎ.ಮನ್ಮಥ, ಆರೋಗ್ಯ ಸಹಾಯಕಿ ವಾಗೀಶ್ವರಿ, ಕಂದಾಯ ಇಲಾಖೆಯ ದಯಾನಂದ, ಆಶಾ ಕಾರ್ಯಕರ್ತೆಯರಾದ ಅನಿತಾ, ಸುಮತಿ, ಗೀತಾ, ಪೊಲೀಸ್ ಸಿಬಂದಿ ನವೀನ್ ಇದ್ದರು.