ಅನಗತ್ಯ ರಸ್ತೆಗೆ ಇಳಿದರೆ ಕಾನೂನು ಕ್ರಮ |ಹಾಲು ಡೈರಿ, ಆಸ್ಪತ್ರೆ ಬಿಟ್ಟು ಎಲ್ಲಾ ಸಂಪೂರ್ಣ ಬಂದ್
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ಯಾರೂ ಪೇಟೆಗೆ ಕಾಲಿಡದಂತೆ ಪೊಲೀಸರು ತಡೆಯುತ್ತಿದ್ದಾರೆ. ಆಸ್ಪತ್ರೆ, ಹಾಲು ಡೈರಿಯನ್ನು ಬಿಟ್ಟು ಉಳಿದೆಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದ್ದು, ಅನಗತ್ಯವಾಗಿ ಕಡಬ ಪೇಟೆಗೆ ಆಗಮಿಸಿದ್ದವರನ್ನು ತರಾಟೆಗೆ ತೆಗೆದುಕೊಂಡ ಪೊಲೀಸರು ಹಿಂದಕ್ಕೆ ಕಳುಹಿಸುವುದು ಕಂಡುಬಂತು.
ಈತನ್ಮದ್ಯೆ ಮಂಗಳೂರು ಮಾರ್ಕೆಟ್ ನಲ್ಲಿ ಬೆಳಿಗ್ಗೆ5.30ಯಿಂದಲೆ ವ್ಯಾಪಾರ ನಡೆಸುತ್ತಿದ್ದುದು ಕಂಡು ಬಂದಿದೆ.ರಸ್ತೆ ಬದಿಗಳಲ್ಲೂ ತರಕಾರಿ ವ್ಯಾಪಾರ ಜೋರಾಗಿತ್ತು.ಈ ಕುರಿತು ಮನಪಾ ಆಯುಕ್ತರು ಪ್ರತಿಕ್ರಿಯೆ ನೀಡಿ,ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸಿದವರ ಅಂಗಡಿ ಪರವಾನಿಗೆ ಕ್ಯಾನ್ಸಲ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಪೂರ್ಣ ಬಂದ್ ಮಾಡಲಾಗಿರುವುದರಿಂದ ಯಾರೂ ಮನೆಯಿಂದ ಹೊರಬಾರದೆ ಸಂಯಮ ಪಾಲಿಸಬೇಕು. ರಸ್ತೆಯಲ್ಲಿ ತಿರುಗಾಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.