ರಾಜ್ಯ ಟೋಟಲ್ ಲಾಕ್ ಡೌನ್ ಗೆ ಕ್ಷಣ ಗಣನೆ | ” ಮಹತ್ವದ ನಿರ್ಧಾರ ಇಂದು ಸಂಜೆಯೊಳಗೆ ” – ಸಿ ಎಂ ಯಡಿಯೂರಪ್ಪ

ಬೆಂಗಳೂರು, ಮಾ.23 : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರವನ್ನು ಇಂದು ಸಂಜೆಯೊಳಗೆ ಮಾಡಲಾಗುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬಹುತೇಕ ಟೋಟಲ್ ಲಾಕ್ ಡೌನ್ ಮಾಡುವುದು ಖಚಿತ ಎನ್ನಲಾಗಿದೆ.


Ad Widget

Ad Widget

ತಜ್ಞ ವೈದ್ಯರು ನೀಡಿದ ವರದಿಯನ್ನು ಆಧರಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಕೊರೊನಾ ಸೊಂಕಿತರ ಸಂಪರ್ಕದಲ್ಲಿರುವ ಪತ್ತೆ ಹಚ್ಚಿ ಕೊರಂಟೈನ್ ನಲ್ಲಿ ಇಡುವುದು ಸವಾಲಿನ ಕೆಲಸವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಜನರು ಮನೆಯಲ್ಲಿಯೇ ಇರುವಂತೆ ಸಿ ಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಆದರೆ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಿದ್ರೆ ಮಾತ್ರ ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಧ್ಯವೆನ್ನುವ ಒತ್ತಡ ಕೇಳಿಬಂದಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಟೋಟಲ್ ಲಾಕ್ ಡೌನ್ ಗೆ ಒಪ್ಪಿರಲಿಲ್ಲ. ಕಾರಣ ಇದರಿಂದ ಬಡವರಿಗೆ ತೊಂದರೆ ಆಗಬಾರದು ಎಂದು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಮಾರ್ಚ್ 31ರ ವರೆಗೆ ಕರ್ನಾಟಕವನ್ನು ಲಾಕ್ ಡೌನ್ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.


Ad Widget

ನಿನ್ನೆ ರಾಜ್ಯ ಸರಕಾರ ಕೊರೊನಾ ವೈರಸ್ ಸಿಂಕಿತರು ದೃಢಪಟ್ಟಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಬೆಳಗಾವಿ, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ, ಕಲಬುರಗಿ, ಕೊಡಗು ಸೇರಿದಂತೆ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿತ್ತು.

ಜನರು ಕೂಡ ರಾಜ್ಯದೆಲ್ಲೆಡೆ ಕಂಪ್ಲೀಟ್ ಲಾಕ್ ಡೌನ್ ಗೆ ತಯಾರಾಗುತ್ತಿದ್ದಾರೆ. ಭರ್ಜರಿ ದಿನಸಿ ಖರೀದಿ ಎಲ್ಲೆಡೆ ನಡೆಸಿದೆ. ದೊಡ್ಡ ಬ್ಯಾಗುಗಳಲ್ಲಿ ಸಾಮಾನು ಒಯ್ಯುತ್ತಿ ದ್ದಾರೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: