ಮಾ.25ರಂದು ನಡೆಯಲಿದ್ದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಬೊಳ್ವಾರು ಶಾಖಾ ಉದ್ಘಾಟನೆ ಮುಂದೂಡಿಕೆ


Ad Widget

ಪುತ್ತೂರು : ಪುತ್ತೂರು ಆದರ್ಶವಿವಿದೋದ್ದೇಶ ಸಹಕಾರ ಸಂಘದ ಬೊಳುವಾರು ಶಾಖೆಯ ಉದ್ಘಾಟನಾ ಸಮಾರಂಭವು ಮಾ.25ರಂದು ನಡೆಸುವುದೆಂದು ನಿರ್ಧರಿಸಲಾಗಿತ್ತು.ಆದರೆ ಕೊರೊನಾ ಭೀತಿಯ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗಿದ್ದು,ಜತೆಗೆ ಮಾ.31ರವರೆಗೆ ಸೆಕ್ಷನ್ 144 ಜಾರಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.


ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಜಿಲ್ಲಾದ್ಯಾಂತ ಒಟ್ಟು 11 ಶಾಖೆಗಳನ್ನು ಹೊಂದಿದ್ದು,12ನೇ ಶಾಖೆಯಾಗಿ ಪುತ್ತೂರಿನ ಬೊಳುವಾರಿನ ಮಹಾವೀರ ಆಸ್ಪತ್ರೆಯ ಎದುರುಗಡೆ ಇರುವ ಮಹಾವೀರ್ ಮಾಲ್‌ನಲ್ಲಿ ಮಾ.25ರಂದು ಉದ್ಘಾಟನೆಯಾಗಬೇಕಿತ್ತು.


Ad Widget

ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಆದರ್ಶವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು,ಉಪಾಧ್ಯಕ್ಷ ಎನ್.ಸುಂದರ ರೈ, ಮಹಾಪ್ರಬಂಧಕ ವಸಂತ್ ಜಾಲಾಡಿ,ಶಾಖಾ ವ್ಯವಸ್ಥಾಪಕಿ ದಯಾಕಾಂತಿ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Ad Widget
error: Content is protected !!
Scroll to Top
%d bloggers like this: