ಸುಬ್ರಮಣ್ಯದ ಯುವತಿಯಲ್ಲಿ ಜ್ವರ, ಕೆಮ್ಮು | ಮಹಾರಾಷ್ಟ್ರದಿಂದ ಬಂದ ಹುಡುಗಿ | ಪರೀಕ್ಷೆಗಾಗಿ ಮಂಗಳೂರಿಗೆ ದೌಡು

ಸುಬ್ರಹ್ಮಣ್ಯ, ಮಾ.23 :  ಮಹಾರಾಷ್ಟ್ರದಲ್ಲಿ ಕರ್ತವ್ಯದಲ್ಲಿದ್ದ ಯುವತಿಯೋರ್ವಳು ತನ್ನ ಹುಟ್ಟೂರಾದ ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರೂ, ಆಕೆಯ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಯುವತಿ ತನ್ನ ಊರು ಸುಬ್ರಮಣ್ಯಕ್ಕೆ ಬರುವಾಗಲೇ ಜ್ವರ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದಾಳೆ. ಜತೆಗೆ ಕೆಮ್ಮು ಕೂಡ ಇದ್ದು ಆಕೆಗೆ ಕೋರೋನಾ ಸೋಂಕು ಇರಬಹುದೆಂಬ ಕಾರಣದಿಂದಾಗಿ ಆಕೆಯನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ.

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವುದು ಒಂದು ಕಾರಣವಾದರೆ, ಯುವತಿ ಮಹಾರಾಷ್ಟ್ರ ದಲ್ಲಿ ವಾಸವಿದ್ದ ಪರಿಸರದಲ್ಲಿ ಕೊರೋನಾ ಭೀತಿ ಹೆಚ್ಚಾಗಿತ್ತು
ಅಲ್ಲದೆ ಆಕೆ ಅಲ್ಲಿಂದ ರೈಲು ಮತ್ತು ಬಸ್ಸಿನಲ್ಲಿ ಬಂದ ಕಾರಣದಿಂದ ಮತ್ತು ಆಕೆಯಲ್ಲಿ ರೋಗಲಕ್ಷಣ ಗೋಚರಿಸಿದ ಹಿನ್ನೆಲೆಯಲ್ಲಿ ಆ ಯುವತಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ವೈದ್ಯಾಧಿಕಾರಿಗಳು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರೋಗಲಕ್ಷಣ ಗೋಚರಿಸಿದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಡ್ಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೆ ಆಕೆ ಸಂಪರ್ಕಕ್ಕೆ ಬಂದ ಮನೆಯವರನ್ನು ಯಾರೊಂದಿಗೂ ಬೇರೆಯದಂತೆ ಇರುವಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.

Leave A Reply

Your email address will not be published.