ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ | ಕಾನೂನು ಕ್ರಮದ ಎಚ್ಚರಿಕೆ
ಕೊರೊನಾ ವೈರಸ್ ಹರಡುವುದು ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಜಿಲ್ಲಾಡಳಿತದ ಜೊತೆ ಎಲ್ಲರೂ ಕೈ ಜೋಡಿಸಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ಮಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇಂತಹ ವಿಡಿಯೋ ವೈರಲ್ ಮಾಡುವ ಮೂಲಕ ಜನರನ್ನು ಇನ್ನಷ್ಟು ಆತಂಕಕ್ಕೆ ಹಾಗೂ ಭಯಕ್ಕೆ ತಳ್ಳುವ ಸಾಧ್ಯತೆ ಇದೆ.
ರೋಗಿಯು ವೆನ್ ಲಾಕ್ ಆಸ್ಪತ್ರೆ ಬೆಡ್ ನಲ್ಲಿ ನರಳಾಡುತ್ತಿರುವ ಎನ್ನಲಾಗುವ ಎರಡು ವೀಡಿಯೋ ದೃಶ್ಯಾವಳಿ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದು, ಇದು ವೆನ್ ಲಾಕ್ ಆಸ್ಪತ್ರೆಯ ದೃಶ್ಯವಲ್ಲ. ಅಲ್ಲದೇ ವೆನ್ ಲಾಕ್ ನಲ್ಲಿ ನೀಲಿಬಣ್ಣದ ಹಾಸಿಗೆ ಬಳಸಲಾಗುತ್ತಿಲ್ಲ ಎಂದು ವೆನ್ ಲಾಕ್ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಈ ರೀತಿ ವದಂತಿ, ಅಪಪ್ರಚಾರ ಮಾಡುವುದರ ಬಗ್ಗೆ ವೆನ್ ಲಾಕ್ ಅಧೀಕ್ಷಕರು ಪೊಲೀಸ್ ದೂರು ನೀಡಲಾಗುವುದು ಎಂದಿದ್ದಾರೆ.