ದ.ಕ | ಇಂದಿನಿಂದಲೇ ಸೆಕ್ಷನ್ 144 ಜಾರಿ | ಕೊರೊನಾ ನಿರ್ಮೂಲನೆಗೆ ಸಿದ್ದವಾದ ಜಿಲ್ಲಾಡಳಿತ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮೊದಲ ಕೊರೋನಾ ಸೋಂಕಿತ ಪತ್ತೆ ಅಗುವುದರೊಂಡಿಗೆ ಜಿಲ್ಲಾಡಳಿತ ಕಠಿಣ ನಿರ್ಧಾರಕ್ಕೆ ಬಂದಿದೆ. ದಕ್ಷಿಣ ಕನ್ನಡದಾದ್ಯಂತ ಸೆಕ್ಷನ್ 144 ಜಾರಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ.


Ad Widget

Ad Widget

ಈ ಆದೇಶ ಮಾ.22ರ ಮಧ್ಯ ರಾತ್ರಿ 12 ಗಂಟೆಯಿಂದ ಮಾ.31 ಈವರೆಗೆ ಜನರು ಮನೆಬಿಟ್ಟು ಹೊರಬರದಂತೆ ಕರ್ಫ್ಯೂ ಜಾರಿಯಾಗಿದೆ. ಇದರೊಂದಿಗೆ ಕೊರೋನಾ ದ ಮೇಲೆ ಮಹಾಯುದ್ಧ ಘೋಷಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಈ ನಿರ್ಧಾರವನ್ನು ಘೋಷಿಸಿದ್ದಾರೆ.


Ad Widget

ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರಿಗೆ ಜಿಲ್ಲಾಡಳಿತದ ಸೂಚನೆ ತುರ್ತು ಮತ್ತು ಅಗತ್ಯ ಕೆಲಸ ಹೊರತುಪಡಿಸಿ ಸಾರ್ವಜನಿಕರು ಮನೆಯಿಂದ ಹೊರಬರುವುದಕ್ಕೆ ನಿರ್ಬಂಧ ಇರುತ್ತದೆ.

ಮನೆಯಲ್ಲೂ ಜನ ಸೇರುವ ಕಾರ್ಯಕ್ರಮ ಮಾಡಲು ನಿರ್ಬಂಧ ಸಭೆ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆಗಳಿಗೆ ನಿಷೇಧ.

Ad Widget

Ad Widget

Ad Widget

ಎಲ್ಲಾ ಅಂಗಡಿ, ವಾಣಿಜ್ಯ ಸಂಕೀರ್ಣ, ವರ್ಕ್ ಶಾಪ್, ಅವಶ್ಯಕವಲ್ಲದ ಗೋದಾಮು ಮುಚ್ಚುವುದು ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ.

ವೈನ್ ಶಾಪ್ ಬಂದ್ ಮಾಡುವಂತೆ ಒತ್ತಾಯ

ಬಾರ್ ಮತ್ತು ರೆಸ್ಟೋರೆಂಟ್, ಹೊಟೇಲ್ ಸೇರಿದಂತೆ ಇತರ ಸೇವೆಗಳನ್ನು ನಡೆಸದಂತೆ ಸೂಚಿಸಿದ್ದಾರೆ. ಆದರೆ ವೈನ್ ಶಾಪ್ ಮುಚ್ಚಲು ಆದೇಶ ಇಲ್ಲ ಎನ್ನಲಾಗಿದೆ.

ವೈನ್ ಶಾಪ್ ಮುಂದೆಯೂ ನೂರಾರು ಜನ ಗುಂಪು ಸೇರುತ್ತಾರೆ. ಈ ನಿಟ್ಟಿನಲ್ಲಿ ವೈನ್ ಶಾಪ್ ಮುಚ್ಚುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.

ಅಕ್ರಮ ಮದ್ಯ ಮಾರಾಟ ?

ಬಾರ್ ಮುಚ್ಚಿರುವುದರಿಂದ ಕೆಲವೆಡೆ ವೈನ್ ಶಾಪ್ ಗಳಿಂದ ಮದ್ಯ ತಂದು ಹೆಚ್ಚು ಮೊತ್ತಕ್ಕೆ ಅಕ್ರಮವಾಗಿ ಮಾರಾಟ ಮಾಡುವ ಕುರಿತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹ ಕೇಳಿಬಂದಿದೆ.

error: Content is protected !!
Scroll to Top
%d bloggers like this: