ಎಲ್ಲೆಡೆ ಮೊಳಗಿತು ಶಂಖನಾದ, ಚಪ್ಪಾಳೆ, ಗಂಟೆ | ದೇಶಕ್ಕೆ ದೇಶವೇ ಒಂದಾಗಿದೆ

0 4

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದಂತೆ, ಭಾರತವನ್ನು ಸುರಕ್ಷಿತ ಮತ್ತು ಆರೋಗ್ಯವಾಗಿಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಇಂದು ಸಂಜೆ 5 ಗಂಟೆಗೆ ಚಪ್ಪಾಳೆ ಹೊಡೆಯುವ ಮೂಲಕ ದೇಶದೆಲ್ಲೆಡೆ ಕೃತಜ್ಞತೆ ಸಲ್ಲಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ *ಶ್ರೀ ನಳಿನ್ ಕುಮಾರ್ ಕಟೀಲ್* ರವರು ಅವರ ಧರ್ಮಪತ್ನಿ ಹಾಗೂ ಮಕ್ಕಳ ಜೊತೆ ಸೇರಿ ತಮ್ಮ ಸ್ವಗೃಹದಲ್ಲಿ ಕೃತಜ್ಞತೆ ಸಲ್ಲಿಸಿದರು.

ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಆರಕ್ಷಕರಿಗೆ, ಸ್ವಚ್ಛತಾ ಕರ್ಮಚಾರಿಗಳಿಗೆ, ಸ್ವಯಂಸೇವಕರಿಗೆ, ಮಾಧ್ಯಮದ ಬಂಧುಗಳಿಗೆ, ಚೆಂಡೆವಾದನದ ಮೂಲಕ ಧನ್ಯವಾದ ಸಮರ್ಪಿಸಿದ ಲಕ್ಷ್ಮೀ ದೇವಿ ಬೆಟ್ಟದ ಮಕ್ಕಳು

ಸವಣೂರು ಕೆ. ಸೀತಾರಾಮ ರೈ ಅವರ ಮನೆಯಲ್ಲಿ

ನರಿಮೊಗರು : ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಇಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಸಂಚಾಲಕರಾದ ಶ್ರೀ ಭಾಸ್ಕರ ಆಚಾರ್ ಹಿಂದಾರ್ ಇವರ ಮಾರ್ಗದರ್ಶನದಲ್ಲಿ ಶಂಖನಾದ, ಜಾಗಟೆ , ಬ್ಯಾಂಡ್ , ವಾದ್ಯ ಘೋಷಗಳೊಂದಿಗೆ ,ಚಪ್ಪಾಳೆ ತಟ್ಟುವ ಮೂಲಕ ಜಾಗತಿಕವಾಗಿ ಹರಡುತ್ತಿರುವ ಕೊರೋನಾ ಸಾಂಕ್ರಮಿಕ ರೋಗವನ್ನು ಹಿಮ್ಮೆಟ್ಟಿಸಿ ನಮ್ಮನ್ನು ಕಾಯುತ್ತಿರುವ ಯೋಧರಿಗೆ, ಪೋಲೀಸರಿಗೆ, ವೈದ್ಯರಿಗೆ-ದಾದಿಯರಿಗೆ, ದೇಶ ಹಾಗೂ ಇಡೀ ಜಗತ್ತಿನ ಆರೋಗ್ಯ ಕ್ಕಾಗಿ ಶ್ರಮಿಸುತ್ತಿರುವ ಸಮಸ್ತ ಆರೋಗ್ಯಕರ ಮನಸ್ಸುಗಳಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಜಯಮಾಲಾ ವಿ.ಎನ್ , ವಸತಿ ನಿಲಯದ ಮೇಲ್ವಿಚಾರಕರಾದ ಹರೀಶ್, ಮುರಳೀಕೃಷ್ಣ, ಕಿಶನ್ ರಾಜ್ ರೈ, ಯಶಸ್ವಿನಿ ಹಾಗು ಶ್ವೇತ ಉಪಸ್ಥಿತರಿದ್ದರು.

ಆದರ್ಶ ಆಸ್ಪತ್ರೆ ಪುತ್ತೂರು
ಚೈತನ್ಯ ಮಿತ್ರ ವೃಂದ ಪಡೀಲು
ಶಾಂತಿಮೊಗರು ಸುಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಕುದ್ಮಾರು
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಪುತ್ತೂರು ಶಾಸಕ ಸಂಜೀವ ಮಠಂದೂರು ಮನೆಯಲ್ಲಿ

ಗುರುವಾಯನಕೆರೆ ಶ್ರೀ ಸುಂದರ ಗೌಡ ಮತ್ತು ದಮಯಂತಿ ದಂಪತಿಗಳ ಮನೆಯಲ್ಲಿ

ಕೋಡಿಬೈಲು ಸವಣೂರು
ಪುತ್ತೂರು ವಿ.ಹಿಂ.ಪ
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಹಾಗೂ ಮನೆಯವರು
ನರಿಮೊಗರು ಸಾಂದೀಪನಿ ಶಿಕ್ಷಣ ಸಂಸ್ಥೆ
ಶಿಕ್ಷಕಿ ವೇದಾವತಿ ಮುಕ್ವೆ ಹಾಗೂ ಮನೆಯವರು
ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ ಹಾಗೂ ಮನೆಯವರು
Leave A Reply