Day: March 22, 2020

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ | ಕಾನೂನು ಕ್ರಮದ ಎಚ್ಚರಿಕೆ

ಕೊರೊನಾ ವೈರಸ್ ಹರಡುವುದು ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಜಿಲ್ಲಾಡಳಿತದ ಜೊತೆ ಎಲ್ಲರೂ ಕೈ ಜೋಡಿಸಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇಂತಹ ವಿಡಿಯೋ ವೈರಲ್ ಮಾಡುವ ಮೂಲಕ ಜನರನ್ನು ಇನ್ನಷ್ಟು ಆತಂಕಕ್ಕೆ ಹಾಗೂ ಭಯಕ್ಕೆ ತಳ್ಳುವ ಸಾಧ್ಯತೆ ಇದೆ. ರೋಗಿಯು ವೆನ್ ಲಾಕ್ ಆಸ್ಪತ್ರೆ ಬೆಡ್ ನಲ್ಲಿ ನರಳಾಡುತ್ತಿರುವ ಎನ್ನಲಾಗುವ ಎರಡು ವೀಡಿಯೋ ದೃಶ್ಯಾವಳಿ ಗಳು ಸಾಮಾಜಿಕ ಜಾಲತಾಣಗಳಲ್ಲಿ …

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ | ಕಾನೂನು ಕ್ರಮದ ಎಚ್ಚರಿಕೆ Read More »

ದ.ಕ | ಇಂದಿನಿಂದಲೇ ಸೆಕ್ಷನ್ 144 ಜಾರಿ | ಕೊರೊನಾ ನಿರ್ಮೂಲನೆಗೆ ಸಿದ್ದವಾದ ಜಿಲ್ಲಾಡಳಿತ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮೊದಲ ಕೊರೋನಾ ಸೋಂಕಿತ ಪತ್ತೆ ಅಗುವುದರೊಂಡಿಗೆ ಜಿಲ್ಲಾಡಳಿತ ಕಠಿಣ ನಿರ್ಧಾರಕ್ಕೆ ಬಂದಿದೆ. ದಕ್ಷಿಣ ಕನ್ನಡದಾದ್ಯಂತ ಸೆಕ್ಷನ್ 144 ಜಾರಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ಆದೇಶ ಮಾ.22ರ ಮಧ್ಯ ರಾತ್ರಿ 12 ಗಂಟೆಯಿಂದ ಮಾ.31 ಈವರೆಗೆ ಜನರು ಮನೆಬಿಟ್ಟು ಹೊರಬರದಂತೆ ಕರ್ಫ್ಯೂ ಜಾರಿಯಾಗಿದೆ. ಇದರೊಂದಿಗೆ ಕೊರೋನಾ ದ ಮೇಲೆ ಮಹಾಯುದ್ಧ ಘೋಷಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಈ ನಿರ್ಧಾರವನ್ನು ಘೋಷಿಸಿದ್ದಾರೆ. ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ …

ದ.ಕ | ಇಂದಿನಿಂದಲೇ ಸೆಕ್ಷನ್ 144 ಜಾರಿ | ಕೊರೊನಾ ನಿರ್ಮೂಲನೆಗೆ ಸಿದ್ದವಾದ ಜಿಲ್ಲಾಡಳಿತ Read More »

ಎಲ್ಲೆಡೆ ಮೊಳಗಿತು ಶಂಖನಾದ, ಚಪ್ಪಾಳೆ, ಗಂಟೆ | ದೇಶಕ್ಕೆ ದೇಶವೇ ಒಂದಾಗಿದೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದಂತೆ, ಭಾರತವನ್ನು ಸುರಕ್ಷಿತ ಮತ್ತು ಆರೋಗ್ಯವಾಗಿಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಇಂದು ಸಂಜೆ 5 ಗಂಟೆಗೆ ಚಪ್ಪಾಳೆ ಹೊಡೆಯುವ ಮೂಲಕ ದೇಶದೆಲ್ಲೆಡೆ ಕೃತಜ್ಞತೆ ಸಲ್ಲಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಆರಕ್ಷಕರಿಗೆ, ಸ್ವಚ್ಛತಾ ಕರ್ಮಚಾರಿಗಳಿಗೆ, ಸ್ವಯಂಸೇವಕರಿಗೆ, ಮಾಧ್ಯಮದ ಬಂಧುಗಳಿಗೆ, ಚೆಂಡೆವಾದನದ ಮೂಲಕ ಧನ್ಯವಾದ ಸಮರ್ಪಿಸಿದ ಲಕ್ಷ್ಮೀ ದೇವಿ ಬೆಟ್ಟದ ಮಕ್ಕಳು ಸವಣೂರು ಕೆ. ಸೀತಾರಾಮ ರೈ ಅವರ …

ಎಲ್ಲೆಡೆ ಮೊಳಗಿತು ಶಂಖನಾದ, ಚಪ್ಪಾಳೆ, ಗಂಟೆ | ದೇಶಕ್ಕೆ ದೇಶವೇ ಒಂದಾಗಿದೆ Read More »

Breaking News | ದಕ್ಷಿಣ ಕನ್ನಡಕ್ಕೆ ವಕ್ಕರಿಸಿದೆ ಮಹಾ ಮಾರಿ | ಓರ್ವನಿಗೆ ಕೊರೊನಾ ಪಾಸಿಟಿವ್ ದೃಢ

ದಕ್ಷಿಣ ಕನ್ನಡದಿಂದ ಮೊದಲ ಕೊರೋನಾ ಪತ್ತೆಯಾಗಿದೆ. ಎಲ್ಲೋ ದೂರದಲ್ಲಿ ಕಾಡುತ್ತಿದ್ದ ಮಹಾಮಾರಿ ನಮ್ಮ ಮಗ್ಗುಲಿಗೆ ಬಂದು ಬಿದ್ದಿದೆ. ಸೋಂಕಿತ ವ್ಯಕ್ತಿ ದುಬಾಯಿಯಲ್ಲಿದ್ದ. ದುಬಾಯಿಯಿಂದ ಈ ವ್ಯಕ್ತಿ ಮಾರ್ಚ್ 19 ರಂದು ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದ. 22 ವರ್ಷ ಆತ ಭಟ್ಕಳ ಮೂಲದವನು. ಸೋಂಕಿತ ವ್ಯಕ್ತಿಯನ್ನು ಆ ದಿನವೇ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದುದರಿಂದ ಇನ್ನಷ್ಟು ಜನರಿಗೆ ಸೋಂಕು ತಗಲುವುದನ್ನು ತಪ್ಪಿಸಿದ್ದಾರೆ. ಆತ ಮಂಗಳೂರಿನಿಂದ ಬಂದ ಕೂಡಲೇ ಆತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇವತ್ತು ಅದರ ರಿಪೋರ್ಟ್ ಬಂದಿದ್ದು …

Breaking News | ದಕ್ಷಿಣ ಕನ್ನಡಕ್ಕೆ ವಕ್ಕರಿಸಿದೆ ಮಹಾ ಮಾರಿ | ಓರ್ವನಿಗೆ ಕೊರೊನಾ ಪಾಸಿಟಿವ್ ದೃಢ Read More »

ಕೊರೋನಾ ಭೀತಿ : ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ

ರಾಜ್ಯಾದ್ಯಂತ ಕೊರೋನಾ ವೈರಸ್​ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮಾ. 27 ರಂದು ನಡೆಯಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಅದರ ಬಳಿಕ 9 ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದರಿಂದ ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು . ಬೆಳಿಗ್ಗೆ ತಾನೇ ಸಿ ಎಂ ಯಡಿಯೂರಪ್ಪನವರು SSLC ಪರೀಕ್ಷೆ ಮುಂದುವರೆಯುತ್ತದೆ. ಪಿಯುಸಿ ಪರೀಕ್ಷೆ ಯಥಾಪ್ರಕಾರ ಎಂದಿದ್ದರು. …

ಕೊರೋನಾ ಭೀತಿ : ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ Read More »

ಕೊರೋನಾ ವೈರಸ್ ಗೆ ಭಾಷೆ ಬರುತ್ತಾ ? । ಇಲ್ಲೊಬ್ಬರ ಪ್ರಕಾರ ” ಹೌದು ” !

ಪ್ರೀತಿಯ ಕೊರೋನಾ, ಹೇಗಿದ್ದರೂ ಬಂದಿದ್ದೀಯ. ಮೋದಿ ವಿರೋಧಿಗಳನ್ನು ಬಂದು ಭೇಟಿ ಆಗಿ ಹೋಗು. ಇಲ್ಲದಿದ್ದರೆ ಅವರೆಲ್ಲರೂ ಸಾಕ್ಷಿ ಕೇಳುತ್ತಾರೆ – ಎಂಬ ಡಾ. ಸುರೇಶ ಪುತ್ತೂರಾಯರ ಸಂದೇಶವು ಫಾರ್ವರ್ಡ್ ಆಗಿ ರವಾನೆಯಾಗಿ ನನಗೆ ಬಂದಿದೆ. ಈ ರೀತಿಯ ಸಂದೇಶವು ಪ್ರಚೋದನೆಯಾಗಿದೆ -ನರಿಮೊಗರು ಗ್ರಾಮದ ಪುರುಷರಕಟ್ಟೆ ಪಿ.ಬಿ.ಕೆ ಇಬ್ರಾಹಿಂ ಅವರು ಮುಂದುವರಿದು, ಈ ಆರೋಪಿ ಪುತ್ತೂರಿನಲ್ಲಿ ವೈದ್ಯರಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲರಾಗಿದ್ದಾರೆ. ಅವರ ಈ ಸಂದೇಶ ಓದಿಕೊಂಡು ಅದರಿಂದ ಪ್ರಚೋದನೆಗೊಂಡು ಕೋಮುಗಲಭೆ ಉಂಟಾಗುವ ಸಾಧ್ಯತೆ ಇದೆ – …

ಕೊರೋನಾ ವೈರಸ್ ಗೆ ಭಾಷೆ ಬರುತ್ತಾ ? । ಇಲ್ಲೊಬ್ಬರ ಪ್ರಕಾರ ” ಹೌದು ” ! Read More »

ದೇಶದ ಎಲ್ಲ ಪ್ರಮುಖ ದೇಗುಲಗಳು ಶಟರ್ ಇಳಿಸಿ ಕೂತಿವೆ । ಧರ್ಮಸ್ಥಳದಲ್ಲಿ ಇನ್ನೂ ಜನ ದೇವರ ದರ್ಶನ ನಡೆಯುತ್ತಿದೆ !

ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಇಲಾಖೆಗಳಿಗೆ ಸೇರಿದ ದೇವಸ್ಥಾನಗಳಲ್ಲಿ ದರ್ಶನದಿಂದ ಹಿಡಿದು ಯಾವುದೇ ಸೇವಾ ಕಾರ್ಯಕ್ರಮವಿರುವುದಿಲ್ಲ. ಎಲ್ಲವನ್ನೂ ನಿಷೇಧಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದ್ದು ನಿಮಗೆ ತಿಳಿದೇ ಇದೆ. ಈ ಆದೇಶ ಮಾರ್ಚ್ 20 ನೆಯ ತಾರೀಕಿನಿಂದಲೇ ಜಾರಿಯಲ್ಲಿದೆ. ಮುಂದಿನ ಆದೇಶ ಬರುವವರೆಗೆ ಈ ಆದೇಶ ಮುಂದುವರೆಯುತ್ತದೆ. ಅದರಂತೆ ಕುಕ್ಕೆ ಶ್ರೀ ಸುಬ್ರಮಣ್ಯ, ಪುತ್ತೂರು ಮಹಾಲಿಂಗೇಶ್ವರ, ಸೌತಡ್ಕ ಮಹಾಗಣಪತಿ, ಕಟೀಲು ಮುಂತಾದ ದೇಗುಲಗಳು ಶಟರ್ ಕೆಳಗೆಳೆದಿವೆ. ಕೇವಲ ಪೂಜಾರಿಗಳು ಮಾತ್ರ ಒಳಗೆ ಹೋಗಿ ದೇವರ ದೈನಂದಿನ ಪೂಜೆ …

ದೇಶದ ಎಲ್ಲ ಪ್ರಮುಖ ದೇಗುಲಗಳು ಶಟರ್ ಇಳಿಸಿ ಕೂತಿವೆ । ಧರ್ಮಸ್ಥಳದಲ್ಲಿ ಇನ್ನೂ ಜನ ದೇವರ ದರ್ಶನ ನಡೆಯುತ್ತಿದೆ ! Read More »

ಕೊರೊನಾ ಭೀತಿ | ದ.ಕ.ಸೇರಿದಂತೆ 9 ಜಿಲ್ಲೆ ಲಾಕ್ ಡೌನ್

ಕೊರೊನಾ ಸೋಂಕು ತಡೆಯಲು ಮಾರ್ಚ್ 31ವರೆಗೆ 9 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಸ್ಥಿತಿ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು( ದ.ಕ), ಕಲಬುರಗಿ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ ಜಿಲ್ಲೆಗಳನ್ನು ಮಾರ್ಚ್ 31ರವರೆಗೆ ಮುಚ್ಚಿ ಇಂದು ಆದೇಶ ಹೊರಡಿಸಲಾಗಿದೆ. ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ವ್ಯವಸ್ಥೆ ಗಳನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಕೊರೊನಾ ಭೀತಿ| ಮಾ.31ರ ತನಕ ಶಿಕ್ಷಕರಿಗೂ ರಜೆ| ಸರ್ಕಾರದ ಆದೇಶ

ಕೊರೊನಾ ತಡೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಿದೆ. ಆದರೆ ಶಿಕ್ಷಕರು ಶಾಲೆಗೆ ಹೋಗುವಂತೆ ಸೂಚಿಸಿತ್ತು.ಇಂದು ಈ ಕುರಿತಂತೆ ಸರಕಾರ ಆದೇಶ ಹೊರಡಿಸಿದ್ದು,ಶಿಕ್ಷಕರಿಗೂ ಮಾ.31ರ ತನಕ ರಜೆ ನೀಡಿ ಆದೇಶ ನೀಡಿದೆ.

ಕೈಕಾರ ಶ್ರೀನಿವಾಸ ಕಲ್ಯಾಣೋತ್ಸವ : ಇಂದು,ನಾಳೆ CTV ಯಲ್ಲಿ ಮರುಪ್ರಸಾರ

ದಿನಾಂಕ 14-03-2020ರಂದು ಕೈಕಾರ ದ ಶಾಲಾ ಕ್ರೀಡಾಂಗಣ ” ಶೇಷಾದ್ರಿ ” ಯಲ್ಲಿ ಜರಗಿದ ” *ಶ್ರೀ ಶ್ರೀ ನಿವಾಸ ಕಲ್ಯಾಣೋತ್ಸವ* ” ಕಾರ್ಯಕ್ರಮ ಮರುಪ್ರಸಾರ ಇಂದು ಮಾ.22ರ ಸಂಜೆ 7-00 ಗಂಟೆಗೆ ಮತ್ತು ನಾಳೆ ಮಾ.23ರ ಸೋಮವಾರ ಸಂಜೆ 7-00 ಗಂಟೆಗೆ *ಕೇಬಲ್ ಟಿವಿ ಪುತ್ತೂರು C TV* ಯಲ್ಲಿ ಪ್ರಸಾರವಾಗಲಿದೆ ಕೇಬಲ್ ಟಿವಿ ಚಾನೆಲ್ ನಂ – 255

error: Content is protected !!
Scroll to Top