of your HTML document.

ಕೊರೊನಾ ವೈರಸ್ ಮುಂಜಾಗೃತೆ | ಮಾ.24 ರ ಪಾಲ್ತಾಡು ಒತ್ತೆಕೋಲ ಮುಂದೂಡಿಕೆ

ಪುತ್ತೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.24ರಂದು ನಡೆಯಲಿದ್ದ 252ನೇ ವರ್ಷದ ಐತಿಹಾಸಿಕ ಒತ್ತೆಕೋಲವನ್ನು ಕೊರೊನಾ ವೈರಸ್ ನ‌ ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಮುಂದೂಡಲಾಗಿದೆ.

ಈ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಸಂತೆ ವ್ಯಾಪಾರ ನಡೆಸದೇ ಒತ್ತೆಕೋಲ ನಡೆಸುವುದೆಂದು ತೀರ್ಮಾನಿಸಲಾಗಿತ್ತು.

ಆದರೆ ಮಾ.21ರಂದು ನಡೆದ ಸಮಿತಿ ಸಭೆಯಲ್ಲಿ ಒತ್ತೆಕೋಲವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ ತಿಳಿಸಿದ್ದಾರೆ.

ಅನೈತಿಕ ಅನಿತಾಳ ವಿಚಿತ್ರ ಕಥೆ ಕೇಳಿ

Leave A Reply

Your email address will not be published.