ಆದಿಚುಂಚನಗಿರಿ ಶ್ರೀಗಳಿಗೆ ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ

Share the Article

ಸವಣೂರು : ಎ. 3 ರಿಂದ 8 ರತನಕ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಕಾರ‍್ಯಕ್ರಮದ ಅಮಂತ್ರಣ ಪತ್ರವನ್ನು ಮಾ.೧೫ರಂದು ಆದಿಚುಂಚನಗಿರಿ ಶ್ರೀ ಡಾ|ನಿರ್ಮಲಾನಂದ ಸ್ವಾಮೀಜಿಯವರಿಗೆ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಪುತ್ತ್ತೂರು ಎವಿಜಿ ಎಸೋಸಿಯೇಟ್ಸ್‌ನ ಎ.ವಿ ನಾರಾಯಣ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ್ ಬರೆಪ್ಪಾಡಿ, ಜತೆ ಕಾರ್ಯದರ್ಶಿ ಭರತ್ ಕುಮಾರ್ ನಡುಮನೆ, ಕಾರ್ಯಾಲಯ ಸಮಿತಿ ಸದಸ್ಯ ನಾಗೇಶ್ ಕೆಡೆಂಜಿ ಸ್ವಾಮೀಜಿಯವರನ್ನು ಆದಿಚುಂಚನಗಿರಿ ಮಠದಲ್ಲಿ ಭೇಟಿಯಾಗಿ, ಕಾರ‍್ಯಕ್ರಮಕ್ಕೆ ಆಹ್ವಾನಿಸಿದರು.

ಎ.4 ರಂದು ಬೆಳಿಗ್ಗೆ ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ‍್ಯಕ್ರಮಕ್ಕೆ ಆಗಮಿಸಿ, ಆಶೀರ್ವಚನವನ್ನು ನೀಡಲಿದ್ದಾರೆ.

Leave A Reply

Your email address will not be published.