Narco Cat: ಜೈಲಿಗೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕು ಬಂಧನ

Narco Cat: ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಸ್ಟಾರಿಕಾದಲ್ಲಿ ಈ ಘಟನೆ ನಡೆದಿದ್ದು, ಬೆಕ್ಕಿನ ದೇಹಕ್ಕೆ ಮಾದಕವಸ್ತುಗಳನ್ನು ಕಟ್ಟಿ, ಜೈಲಿನೊಳಗೆ ಬಿಡಲಾಗಿತ್ತು. ಕೋಸ್ಟರಿಕಾ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬೆಕ್ಕನ್ನು ಬಳಸುವುದಕ್ಕೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಕೋಸ್ಟರಿಕಾದ ಪೊಕೊಸಿ ಸೆರೆಮನಯೆ ಕಾವಲುಗಾರಿಗೆ ಹಸಿರು ಪೊದೆಯ ಮಧ್ಯೆ ಏನೋ ಚಲಿಸುತ್ತಿರುವುದು ಕಂಡಿದ್ದು, ಹತ್ತಿರ ಹೋಗಿ ನೋಡಿದಾಗ ಕಪ್ಪು ಬಿಳಿ ಬಣ್ಣದ ಬೆಕ್ಕಿನ ದೇಹಕ್ಕೆ ಬಿಗಿಯಾಗಿ ಮುಚ್ಚಿದ ಎರಡು ಪೊಟ್ಟಣಗಳು ಇರುವುದನ್ನು ಗಮನಿಸಿದ್ದಾರೆ.
View this post on Instagram
ಬೆಕ್ಕಿನ ಮರಿಯ ಬೆನ್ನಿಗೆ 235 ಗ್ರಾಂ ಗಾಂಜಾ ಬಂಡಲ್‌ಗಳು, 68 ಗ್ರಾಂ ಕ್ರ್ಯಾಕ್ ಪೇಸ್ಟ್ ಮತ್ತು ಸ್ವಲ್ಪ ಪ್ರಮಾಣದ ರೋಲಿಂಗ್ ಪೇಪರ್‌ಗಳನ್ನು ಕಟ್ಟಲಾಗಿತ್ತು. ಕೂಡಲೇ ಪೊಲೀಸರು ಈ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಕ್ಕಿನ ಬಳಿ ಇದ್ದ ಮಾದಕವಸ್ತುಗಳನ್ನು ಪೊಲೀಸರು ಹಾಗೂ ಜೈಲಿನ ಸಿಬ್ಬಂದಿ ವಶಕ್ಕೆ ಪಡೆದು, ಬೆಕ್ಕಿನ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಮಾದಕವ್ಯಸನಿಗಳು, ಮಾದಕವಸ್ತುಗಳ ಕಳ್ಳಸಾಗಣೆ ಪೆಡ್ಲರ್‌ಗಳು ಬೆಕ್ಕಿಗೆ ಈ ಬಗ್ಗೆ ತರಬೇತಿ ನೀಡುತ್ತಾರೆ. ಅದರ ಪರಿಣಾಮದಿಂದ ಈ ಕುಕೃತ್ಯ ನಡೆಯುತ್ತದೆ. ಬೆಕ್ಕು ಪುಟ್ಟ ಮರಿ ಇದ್ದಾಗಲೇ ಬೆಕ್ಕು ನಾಯಿ ಸೇರಿ ಹಲವು ಪ್ರಾಣಿಗಳಿಗೆ ತರಬೇತಿ ನೀಡಿದರೆ ಅದು ಯಾವ ರೀತಿ ತರಬೇತಿ ನೀಡುತ್ತೇವೆಯೋ ಅದೇ ರೀತಿ ವರ್ತನೆ ಮಾಡುತ್ತದೆ. ನಾವು ಏನು ಹೇಳುತ್ತೇವೆಯೋ ಅದನ್ನೇ ಅವರು ಮಾಡುತ್ತಾರೆ. ಬೆಕ್ಕಿಗೆ ಈ ರೀತಿಯ ತರಬೇತಿ ನೀಡಿ ಕಳ್ಳ ಕೆಲಸಕ್ಕೆ ಇದನ್ನು ಬಳಸಲಾಗುತ್ತದೆ.
Comments are closed.