ಕುದ್ಮಾರು – ಶಾಂತಿಮೊಗರು ರಸ್ತೆ ಕಾಮಗಾರಿ | ಮಾ 25ರೊಳಗೆ ಪೂರ್ಣಗೊಳಿಸುವ ಭರವಸೆ | ಮಾ.20ರ ಪ್ರತಿಭಟನೆ ಹಿಂತೆಗೆತ

ಸವಣೂರು : ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಕುದ್ಮಾರು- ಶಾಂತಿಮೊಗರು-ಆಲಂಕಾರು ಸಂಪರ್ಕ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಮಾ ೨೫ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಪಿಡಬ್ಲ್ಯೂಡಿ ಇಂಜೀನಿಯರ್ ರಾಜರಾಮ ,ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಅವರು ಮಾ 16ರಂದು ಸಂಜೆ ಕಾಮಗಾರಿಯನ್ನು ವೀಕ್ಷಿಸಿ ಸಾರ್ವಜನಿಕರೊಂದಿಗೆ ಮಾತನಾಡಿದರು.


Ad Widget

Ad Widget

ಕುದ್ಮಾರು- ಶಾಂತಿಮೊಗರು- ಅಲಂಕಾರು ಸಂಪರ್ಕ ರಸ್ತೆ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ .


Ad Widget

ಅಲ್ಲದೇ ಎ 3ರಿಂದ ಎ.8ರವರೆಗೆ ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಬ್ರಹ್ಮಕಲಶ ನಡೆಯಲಿದ್ದು, ಬ್ರಹ್ಮಕಲಶೋತ್ಸವದ ಮೊದಲು ಕಾಮಗಾರಿ ಮುಗಿಸಬೇಕು ಜೊತೆಗೆ ರಸ್ತೆಯ ಬದಿಯ ಕೆಲವೊಂದು ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಮಾ.20ರಂದು ಕುದ್ಮಾರು ಜಂಕ್ಷನ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ಮಾ 15ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಈ ನಿಟ್ಟಿನಲ್ಲಿ ರಸ್ತೆ ಕಾಮಗಾರಿಯ ಪರಿಶೀಲನೆ ನಡೆಸಿದ ಪಿಡಬ್ಲ್ಯೂಡಿ ಇಂಜಿನಿಯರ್ ರಾಜರಾಮ ,ಪ್ರಮೋದ್,ಎಲ್.ಸಿ. ಸಿಕ್ವೆರಾ ಅವರು ಮಾ 25ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.

Ad Widget

Ad Widget

Ad Widget

ಅಲ್ಲದೇ ಕುದ್ಮಾರು ಜಂಕ್ಷನ್‌ನಲ್ಲಿ ಶಾಂತಿಮೊಗರು ಭಾಗದಿಂದ ಹೋಗುವ ಎತ್ತರವಾಗಿರುವ ರಸ್ತೆಯನ್ನು ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯ ಸಮವಾಗಿ ಕಾಮಗಾರಿ ನಡೆಸಬೇಕು, ಅಲ್ಲದೇ ರಸ್ತೆ ಬದಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಾಮಗಾರಿ ನಡೆಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಸೇರಿದಂತೆ ಕುದ್ಮಾರಿನ ವಿವಿಧ ಸಂಘ ಸಂಸ್ಥೆಗಳ ಪದಾದಿಕಾರಿಗಳು, ಇಲಾಖಾಧಿಕಾರಿ, ಊರವರು ಈ ಸಂದರ್ಭದಲ್ಲಿದ್ದರು.

ಇಲಾಖಾಧಿಕಾರಿಗಳ ಭರವಸೆ- ಪ್ರತಿಭಟನೆ ಹಿಂತೆಗೆತ- ಸತೀಶ್ ಕುಮಾರ್ ಕೆಡೆಂಜಿ

ಕುದ್ಮಾರು – ಶಾಂತಿಮೊಗರು ಸಂಪರ್ಕ ರಸ್ತೆಯ ಕಾಮಗಾರಿಯನ್ನು ಮಾ 25ರೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಇಲಾಖಾಧಿಕಾರಿಗಳು ನೀಡಿದ್ದಾರೆ. ಶಾಂತಿಮೊಗರು ದೇಗುಲದ ಸಂಪರ್ಕ ರಸ್ತೆಗೆ ಡಾಮಾರೀಕರಣ ಗೊಳಿಸುವುದರೊಂದಿಗೆ ರಸ್ತೆಯ ಕೆಲವೊಂದು ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸುವುದಾಗಿ ಭರವಸೆಯನ್ನು ನೀಡಿರುವ ಹಿನ್ನಲೆಯಲ್ಲಿ ಮಾ 29ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಹಿಂತೆಗೆತುಕೊಳ್ಳಲಾಗಿದೆ. ಎ 3ರಿಂದ ಎ.8ರವರೆಗೆ ನಡೆಯಲಿರುವ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶದ ಮೊದಲು ಕಾಮಗಾರಿ ಪೂರ್ಣಗೊಳ್ಳುವ ಭರವಸೆಯಲ್ಲಿದ್ದೇವೆ.

-ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷರು, ಆಡಳಿತ ಸಮಿತಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು

error: Content is protected !!
Scroll to Top
%d bloggers like this: