ಶಾಂತಿಮುಗೇರು ಸುಬ್ರಹ್ಮಣ್ಯೇಶ್ವರ ದೇವಸ್ಥಾನ,ಕುದ್ಮಾರು ಬ್ರಹ್ಮಕಲಶೋತ್ಸವ | ಧಾರ್ಮಿಕ ದತ್ತಿ ಸಚಿವ ಕೋಟಾ ಅವರಿಗೆ ಮಠಂದೂರು ಸಮ್ಮುಖದಲ್ಲಿ ಆಹ್ವಾನ

ಬೆಂಗಳೂರು, ಮಾ.17 : ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರ ಸಮ್ಮುಖದಲ್ಲಿ ಇವತ್ತು ಮಾರ್ಚ್ 17 ರಂದು ಶ್ರೀ ಶಾಂತಿಮುಗೇರು ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕುದ್ಮಾರು ಇದರ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ದಕ್ಷಿಣಕನ್ನಡದ ಧಾರ್ಮಿಕ ದತ್ತಿ ಮತ್ತು ಉಸ್ತುವಾರಿ ಸಚಿವರಿಗೆ ಬ್ರಹ್ಮಕಲಶೋತ್ಸವದ ಕರಪತ್ರವನ್ನು ನೀಡುವ ಮೂಲಕ ಆಹ್ವಾನಿಸಲಾಯಿತು.

ಕುಮಾರಧಾರ ತಟದಲ್ಲಿರುವ ಶ್ರೀ ಕ್ಷೇತ್ರಕ್ಕೆ ಸಾವಿರ ವರ್ಷದ ಇತಿಹಾಸವಿದೆ. ಈಗ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವ ಸಂಬಂಧಿಸಿದ ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲು ಆರ್ಥಿಕ ಸಹಾಯ ಬೇಕಿದ್ದು, ಅದನ್ನು ಸರಕಾರದ ಕಡೆಯಿಂದ ಪೂರೈಸಿ ಕೊಡಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ್ ಅವರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಭರತ್ ನಡುಮನೆ, ಎವಿಜಿ ಅಸೋಸಿಯೇಟ್ಸ್ ನ ಮಾಲಕರಾದ ಎವಿ ನಾರಾಯಣ ಗೌಡ, ಬ್ರಹ್ಮಕಲಶೋತ್ಸವದ ಕಾರ್ಯಕಾರಿ ಸಮಿತಿಯ ಸದಸ್ಯ ನಾಗೇಶ್ ಕೆಡೆಂಜಿ ಅವರು ಹಾಜರಿದ್ದರು.

Leave A Reply

Your email address will not be published.