ಜೇಸಿಐ ಸುಳ್ಯ ಪಯಸ್ವಿನಿ, ಜೇಸಿರೆಟ್ ವಿಭಾಗದ ವತಿಯಿಂದ ಶ್ರೀ ನಿಧಿ ಮಹಿಳಾ ಮಂಡಲ ಸಹಯೋಗ | ಮಹಿಳಾ ದಿನಾಚರಣೆ ಮತ್ತು ನಾಯಕತ್ವ ತರಬೇತಿ

ಜೇಸಿಐ ಸುಳ್ಯ ಪಯಸ್ವಿನಿ, ಜೇಸಿರೆಟ್ ವಿಭಾಗದ ವತಿಯಿಂದ ಶ್ರೀ ನಿಧಿ ಮಹಿಳಾ ಮಂಡಲ ಇವುಗಳ ಸಹಯೋಗದಲ್ಲಿ ದಿನಾಂಕ ಮಾರ್ಚ್ 14 ರಂದು ಸೂರ್ತಿಲ ಮಹಿಳಾ ಮಂಡಲದ ಸಭಾಭವನದಲ್ಲಿ ಸಭೆ ನಡೆಯಿತು.

ಮಹಿಳಾ ದಿನಾಚರಣೆ ಮತ್ತು ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ದ.ಕ ಜಿಲ್ಲಾ ಮಹಿಳಾ ಮಂಡಲದ ಜಿಲ್ಲಾ ಅಧ್ಯಕ್ಷೆ ಜೇಸಿರೆಟ್ ಹರಿಣಿ ಸದಾಶಿವ ಇವರಿಗೆ ಸನ್ಮಾನ ಹಾಗೂ ಮಹಿಳಾ ಮಂಡಲದ ಸದಸ್ಯರುಗಳಿಗಾಗಿ ನಾಯಕತ್ವ ಮತ್ತು ಸಭಾಕಂಪನ ಇವುಗಳಲ್ಲಿ ತರಬೇತಿ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹರಿಣಿ ಸದಾಶಿವ ರವರು ಮಾಡಿದರು. ತರಬೇತಿಯನ್ನು ಜೇಸಿಐ ಭಾರತದ ರಾಷ್ಟ್ರೀಯ CHALLENGE ಪತ್ರಿಕೆ ಸದಸ್ಯ ಹಾಗೂ ವಲಯ ತರಬೇತುದಾರರಾದ ಜೇಸಿ ದಾಮೋದರ ಪಾಟಳಿ ನಡೆಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿರೆಟ್ ಚೈತನ್ಯ ದೇವರಾಜ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಮತಿ ಪವಿತ ಪ್ರಶಾಂತ್ ಸದಸ್ಯರು ನಗರ ಪಂಚಾಯಿತಿ ಸುಳ್ಯ , ಮಹಿಳಾ ಮಂಡಲದ ಶ್ರೀ ಮತಿ ಜಯಕೃಷ್ಣ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀ ಮತಿ ಲತಾರಾಧಕೃಷ್ಣ, ಸಂಪನ್ಮೂಲ ವ್ಯಕ್ತಿ ಜೇಸಿ ದಾಮೋದರ ಪಾಟಳಿ ಮತ್ತು ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೇಸಿಐ ರಾಷ್ಟ್ರೀಯ ಸಂಯೋಜಕರಾದ ಜೇಸಿಐ ಅಶೋಕ ಚೂಂತಾರ್, ಪೂರ್ವ ಅಧ್ಯಕ್ಷರುಗಳಾದ ಜೇಸಿ ಮನಮೋಹನ್ ಬಳ್ಳಡ್ಕ, ಜೇಸಿ ತೀರ್ಥವರ್ಣ , ಜೇಸಿ ಚಂದ್ರಶೇಖರ್ ಕನಕಮಜಲು, ಮತ್ತು ಜೇಸಿಐ ಸುಳ್ಯ ಪಯಸ್ವಿನಿಯ ಸದಸ್ಯರುಗಳಾದ ಜೇಸಿ ಚೇತನ ಅಮೇಮನೆ, ಬಷೀರ್ ಯು ಪಿ, ಜೇಸಿರೆಟ್ ಶೃತಿ ತೀರ್ಥ ವರ್ಣ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.