ಕರ್ನಾಟಕದ ಕಲ್ಬುರ್ಗಿಯ ವೃದ್ಧ ಸಾವು : ಕರೋನಾ ವೈರಸ್ ಗೆ ಭಾರತದ ಮೊದಲ ಬಲಿ ?!
ವಿಶ್ವದ ಸಮಸ್ತ ನಾಗರಿಕ ಸಮಾಜವೇ ತತ್ತರಿಸಿ ಹೋಗುವಂತೆ ಕಾಡುತ್ತಿರುವ ಹೆಮ್ಮಾರಿ ಕರೋನ ವೈರಸ್ ಕರ್ನಾಟಕದಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಹಾಗೊಂದು ವೇಳೆ ಇವರು ಕೋರೋನಾ ವೈರಸ್ ನಿಂದಲೇ ತೀರಿಕೊಂಡಿದ್ದರೆ ಅದು ಕೋರೋನ ವೈರಸ್ ನಿಂದಾದ ಭಾರತದ ಮೊದಲ ಸಾವಾಗುತ್ತದೆ.
ಮೃತ ವ್ಯಕ್ತಿಯನ್ನು ಕಲಬುರಗಿಯ ನಿವಾಸಿ 75 ವರ್ಷದ ಮಹಮ್ಮದ್ ಸಿದ್ದೀಕಿ ಆಗಿದ್ದು ಅವರು ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದರು. ದುಬೈನಿಂದ ಆಗಮಿಸಿದ್ದ ಇವರಲ್ಲಿ ಶಂಕಿತ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದಿಂದಲೇ ನೇರವಾಗಿ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ 3 ದಿನಗಳ ಹಿಂದೆ ದಾಖಲಿಸಲಾಗಿತ್ತು.
ಇವತ್ತು ಆತನ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಆತನನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಆತ ಮೃತಪಟ್ಟಿದ್ದಾರೆ. ಅವರು 75 ವರ್ಷದ ವ್ಯಕ್ತಿಯಾಗಿದ್ದು ವಯೋಸಹಜ ಕಾರಣದಿಂದ ಮರಣ ಹೊಂದಿರುವ ಸಾಧ್ಯತೆಯೂ ಇದೆ. ಆದರೆ ಅವರಲ್ಲಿ ಕೋರೋನಾ ವೈರಸ್ಸಿನ ಬಾಧಿತರ ಎಲ್ಲ ಲಕ್ಷಣಗಳೂ ಇದ್ದವು. ಲ್ಯಾಬ್ ರಿಪೋರ್ಟ್ ಇನ್ನೂ ಬರಬೇಕಿದ್ದು, ಹಾಗೊಂದು ವೇಳೆ ಇವರು ಕೋರೋನಾ ವೈರಸ್ ನಿಂದಲೇ ತೀರಿಕೊಂಡಿದ್ದರೆ ಅದು ಕೋರೋನ ವೈರಸ್ ನಿಂದಾದ ಭಾರತದ ಮೊದಲ ಸಾವಾಗುತ್ತದೆ.
ಮಹಮ್ಮದ್ ಸಿದ್ದಿಕಿ ಅವರಿಗೆ COVID 19 ( ಕೋರೋನಾ) ಇರುವುದು ಖಚಿತವಾಗಿಲ್ಲ. ಕೇವಲ ಸಂಶಯ ಅಷ್ಟೇ. ಆದರೂ ಅವರ ಶವ ಸಂಸ್ಕಾರ ಮಾಡುವಲ್ಲಿ ಎಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗುವುದು.
ಸಚಿವ ಶ್ರೀರಾಮುಲು ಹೇಳಿಕೆ.