ಬೆಂಗಳೂರಿನ ವೈಟ್ ಫೀಲ್ಡ್ | ಕೋರೋನಾ ವೈರಸ್ ಭಾದಿತ ವಾಸವಿದ್ದ 8 ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ ಘೋಷಣೆ

ಬೆಂಗಳೂರು/ ಮಾ.10 : ಬೆಂಗಳೂರಿನ ಕೋರೋನಾ ವೈರಸ್ ಭಾದಿತ ವಾಸವಿದ್ದ ವೈಟ್ ಫೀಲ್ಡ್ ನ 8 ಕಿ. ಮೀ. ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮಹಾಮಾರಿಯಾಗಿ ಹಬ್ಬುತ್ತಿರುವ ಕೋರೋನಾ ವೈರಸ್ ನಿಂದ ಸೋಂಕಿಗೆ ಒಳಗಾದ ವ್ಯಕ್ತಿ ವೈಟ್ ಫೀಲ್ಡ್ ಪ್ರದೇಶದಲ್ಲಿ ವಾಸವಾಗಿದ್ದ ಕಾರಣ ವೈಟ್ ಫೀಲ್ಡ್ ನ ಎಂಟು ಕಿಲೋಮೀಟರ್ ವಿಸ್ತೀರ್ಣವನ್ನು ಹೈ ಅಲರ್ಟ್ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲದೆ ವ್ಯಕ್ತಿ ವಾಸವಿದ್ದ ಮೂರು ಕಿಲೋಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಕೋರೋನಾ ವೈರಸ್ ಗಾಳಿಯ ಮೂಲಕ ಹರಡಿದರೆ ಎಂಬ ಭಯದಿಂದ ಈ ಘೋಷಣೆ ಮಾಡಲಾಗಿದೆ. ಸರಕಾರ ಯಾವುದೇ ರೀತಿಯಿಂದಲೂ ರಿಸ್ಕ್ ತಗೊಳ್ಳಲು ರೆಡಿ ಇಲ್ಲ ಎಂಬಂತೆ ಕಾರ್ಯಾಚರಣೆ ನಡೆಸುತ್ತಿದೆ.

ಅಲ್ಲದೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರದೇಶದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಿಬಿಎಂಪಿ ಹಮ್ಮಿಕೊಂಡಿದೆ.

ಮೂಲಗಳ ಪ್ರಕಾರ ಸೋಂಕು ತಗುಲಿದ ನಂತರ ಈ ವ್ಯಕ್ತಿಯು ತಮ್ಮ ಮನೆಯಲ್ಲಿ ಹಲವು ದಿನಗಳ ಕಾಲ ಉಳಿದುಕೊಂಡಿದ್ದ. ಆ ಕಾರಣ ಯಾರಿಗಾದರೂ ಸೋಂಕು ತಗುಲಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಅಲ್ಲಿ ವಾಸವಿರುವ ಎಲ್ಲರನ್ನೂ ತಪಾಸಣೆಗೊಳಪಡಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಬೆಳಗಿನಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಚಿಕಿತ್ಸೆ ಮುಂದುವರಿಕೆ, ಆರೋಗ್ಯದಲ್ಲಿ ಚೇತರಿಕೆ : 

ಇನ್ನು ಅಮೆರಿಕದಿಂದ ಹಿಂತಿರುಗಿ ಕೊರೋನಾ ವೈರಸ್ ಅಂಟಿಸಿಕೊಂಡ ಕಾರಣ ಬೆಂಗಳೂರಿನ ರಾಜೀವ್‍ಗಾಂಧಿ ವಿಜ್ಞಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಫ್ಟ್ ವೇರ್ ಉದ್ಯೋಗಿಯ ಮತ್ತು ಆತನ ಪತ್ನಿ ಮತ್ತು ಮಗುವಿನ ಆರೋಗ್ಯದಲ್ಲಿ ತುಂಬಾ ಸುಧಾರಣೆ ಕಂಡಿದೆ. ಈ ಮೂವರಿಗೂ ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ನುರಿತ ವೈದ್ಯರ ತಂಡವೊಂದು ಆಸ್ಪತ್ರೆಯಲ್ಲಿಯೇ ಬೀಡು ಬಿಟ್ಟು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ತೀವ್ರ ನಿಗಾ ಇರಿಸಿದೆ.

Leave A Reply

Your email address will not be published.