ಕೊಯಿಲ ಗ್ರಾ.ಪಂ. | ಅಲ್ಪಸಂಖ್ಯಾತ ಕಾಲೋನಿಗೆ ಮಂಜೂರಾದ ಅನುದಾನ ನಿಗದಿತ ಜಾಗದಿಂದ ಬೇರೆಡೆ ಬಳಕೆ ಆರೋಪ ನಿರಾಧಾರ, ದುರುದ್ದೇಶ ಪೂರಿತ- ಹೇಮಾ ಮೋಹನದಾಸ್ ಶೆಟ್ಟಿ

ಕಡಬ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೊೈಲ ಗ್ರಾಮದ ಆತೂರು ಬೈಲು ಹಾಗೂ ಕೆಮ್ಮಾರ – ಬಡಿಲ ರಸ್ತೆ ಅಭಿವೃದ್ದಿಗೆ ಮಂಜೂರಾದ ಅನುದಾನವನ್ನು ನಿಗದಿತ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಿ ಅಭಿವೃದ್ಧಿ ಮಾಡಲಾಗಿದೆ ಎಂದು ಕೊೈಲ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ.ಸುಲೈಮಾನ್ ಅವರ ಅರೋಪ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಸ್ಥಳಿಯರ ಬೇಡಿಕೆಯಿದ್ದ ಸ್ಥಳದಲ್ಲಿ ರಸ್ತೆಗೆ ಕಾಂಕ್ರಿಟಕರಣ ಮಾಡಲಾಗಿದೆ. ಈ ಬಗ್ಗೆ ಯಾವೂದೆ ತನಿಖೆಗೂ ಸಿದ್ದ ಎಂದು ಕೊೈಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಮೋಹನದಾಸ್ ಶೆಟ್ಟಿ ಹೇಳಿದರು.

ಕೊೈಲ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಳ್ಯ ವಿಧಾನ ಸಭಾ ಕ್ಷೇತ್ರದ ಈ ರಸ್ತೆಗೆ ಅಲ್ಪಸಂಖ್ಯಾತರ ಇಲಾಖೆಯಿಂದ ಶಾಸಕ ಎಸ್ ಅಂಗಾರ ಅವರ ಶಿಫಾರಿಸ್ಸಿನ ಮೇರೆಗೆ ಅನುದಾನ ಮಂಜೂರಾಗಿ ರಸ್ತೆ ಕಾಂಕ್ರಿಟಿಕರಣವಾಗಿದೆ. ಆತೂರು ಬೈಲು ರಸ್ತೆಯ ನೆತ್ತರ್‍ಕೆರೆ ಎಂಬಲ್ಲಿ ಅತೀ ಮುಖ್ಯವಾಗಿ ಅಭಿವೃದ್ದಿಯಾಗಬೇಕಾಗಿದೆ ಎಂದು ಈ ಭಾಗದ ಸ್ಥಳಿಯರು ಸಂಬಂದಪಟ್ಟವರಿಗೆ ಮನವಿ ಸಲ್ಲಿಸಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಹಿಂದೆ ಶಾಸಕರು ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಕೆಮ್ಮಾರ- ಬಡಿಲ ರಸ್ತೆಯ ಬೇಡಿಯಿದ್ದ ಸ್ಥಳದಿಂದಲೇ ಕಾಂಕ್ರಿಟಿಕರಣ ಮಾಡಲಾಗಿದೆ. ಈ ಎರಡು ರಸ್ತೆಗೆ ಅತೀ ಹೆಚ್ಚು ಅಲ್ಪಸಂಖ್ಯಾತರು ಫಲಾನುಭವಿಗಳಾಗಿದ್ದಾರೆ.

ಸುಲೈಮಾನ್ ಐದು ಭಾರಿ ಗ್ರಾಮ ಪಂಚಾಯಿತಿ ಸದಸ್ಯರಾದರೂ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯ ಮಾಡದೇ ಅಲ್ಪ ಸಂಖ್ಯಾತರಲ್ಲಿ ವಿಶ್ವಾಸವೇ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಹಿನ್ನಡೆಯಾಗಲಿದೆ ಎಂದು ಭಾವಿಸಿ ಪಾರದರ್ಶಕ ಅಭಿವೃದ್ದಿ ಕಾರ್ಯದಲ್ಲಿ ಆರೋಪಿಸುತ್ತಿರುವುದು ಹಿರಿಯ ಸದಸ್ಯನಾಗಿ ಶೋಭೆ ತರುವಂತದಲ್ಲ. ರಸ್ತೆ ಅಭಿವೃದ್ದಿ ಅನುದಾನ ದುರ್ಬಳಕೆಯಾಗಿದೆ ಎನ್ನುವ ಅವರ ಅಧಾರ ರಹಿತ ಆರೋಪ ಸಾಭಿತು ಮಾಡಲು ಸಂಬಂದಪಟ್ಟ ಇಲಾಖೆ ತನಿಖೆ ನಡೆಸುವುದಾದರೆ ಯಾವತ್ತು ಸಿದ್ದ ಎಂದು ಅಧ್ಯಕ್ಷೆ ಹೇಮಾ ಎಂ. ಶೆಟ್ಟಿ ಸವಾಲು ಹಾಕಿದರು. ಪತ್ರೀಕಾಗೋಷ್ಟಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ, ಕೊೈಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯ ಶೇಖರ ಅಂಬಾ, ಸದಸ್ಯರಾದ ವಿನೋಧರ ಮಾಳ, ಲಲಿತಾ, ಬಿಪಾತುಮ್ಮ ಉಪಸ್ಥಿತರಿದ್ದರು.

error: Content is protected !!
Scroll to Top
%d bloggers like this: