ಹಿಂದೂ ಹುಡುಗಿಯರೇ ಎಚ್ಚರ | ರಿಯಾಳನ್ನು ಕೊಂದದ್ದು ಬೇರೆ ಯಾರು ಕೂಡ ಅಲ್ಲ, ಅದು ಆಕೆಯ ನಂಬಿಕೆ !

  • ತುಕಾರಾಂ, ಬೆಳ್ತಂಗಡಿ.

ಪಶ್ಚಿಮ ಬಂಗಾಳದ ಹಲ್ದಿಯಾ ನಗರದಲ್ಲಿ ಸದ್ದಾಂ ಹುಸೇನ್ ಎಂಬ ವ್ಯಕ್ತಿ ಹಿಂದೂ ಹುಡುಗಿಯ ಪ್ರೀತಿಯ ನಾಟಕ ಆಡಿ ಆಕೆ ಆತನನ್ನು ಪ್ರೀತಿಸಿದ ತಪ್ಪಿಗೆ ಅಮ್ಮ-ಮಗಳು ಇಬ್ಬರನ್ನೂ ಸುಟ್ಟು ಹುರಿದು ಹಾಕಿದ್ದಾನೆ. ವಿವರಗಳಲ್ಲಿ ಓದಿಕೊಳ್ಳಿ.

 

ಆಕೆ ರಿಯಾ. ಆಕೆಯ ಹೆಸರೆಷ್ಟು ಆಕರ್ಷಕವಾಗಿದೆಯೋ, ಅದರ ನೂರು ಪಟ್ಟು ಸೌಂದರ್ಯವತಿ ಆಕೆ. ಒಂದು ಸಲ ಎಂತವರೂ ಅರೆಗಳಿಗೆ ಚಂಚಲಗೊಳ್ಳಬಲ್ಲ ವ್ಯಕ್ತಿತ್ವ ಆಕೆಯದು. ಆಕೆಗೆ ಅದು ಹೇಗೋ ಆತನ ಪರಿಚಯವಾಗುತ್ತದೆ. ಆತನೂ ಸುಂದರ, ಅಜಾನುಬಾಹು. ತನ್ನ ಊರಿನಲ್ಲಿ ಕಾಂಟ್ರಾಕ್ಟರ್, ಶ್ರೀಮಂತ ಹುಡುಗ. ಅವರಿಬ್ಬರಿಗೆ ಆಕರ್ಷಣೆ ಬೆಳೆಯುತ್ತದೆ. ಮಾಡರ್ನ್ ಲವ್ ಆಗುತ್ತದೆ. ಆಕೆ ಆತನ ಜತೆ ಓಡಾಡುತ್ತಾಳೆ. ಮೊದಲೇ ಅಪ್ಪನಿಲ್ಲದ ಮಗಳು. ಇನಿತು ಪ್ರೀತಿ, ಒಂದಷ್ಟು ಕನಿಕರ ಮತ್ತು ಮಗದೊಂದಷ್ಟು ಪ್ರೊಟೆಕ್ಷನ್ ತೋರಿಸಿದ ಗಂಡನ್ನು ಬಹುಬೇಗ ಹಚ್ಚಿಕೊಳ್ಳುತ್ತಾಳೆ.

ರಿಯಾಳ ತಾಯಿ ರಮಾ. ಚಿಕ್ಕಂದಿನಲ್ಲಿ ಗಂಡ ಕಳೆದುಕೊಂಡ ನತದೃಷ್ಠೆಗೆ ಈಗ ಜಸ್ಟ್ ನಲ್ವತ್ತರ ಹರೆಯವಷ್ಟೇ. ಮಗಳ ಮೊಗದಲ್ಲಿನ ಖುಷಿ, ಆತನ ಮೇಲಿನ ವಿಶ್ವಾಸ, ಆತನ ದುಬಾರಿ ಉಡುಗೊರೆಗಳ ಮೇಲಿನ ಆಸೆ, ಅವರಿಗಾಗಿ ಆತ ಖರ್ಚು ಮಾಡುತ್ತಿದ್ದ ಪರಿ ಕಂಡು ಭ್ರಮಿತಗೊಂಡ ಮನಸ್ಸು ಆತನ ಮೇಲೆ ಅಪರಿಮಿತ ನಂಬಿಕೆ ಬೆಳೆಸಿಕೊಳ್ಳುತ್ತದೆ.

ಆತನ ಹೆಸರು ಸದ್ದಾಮ್ ಹುಸೈನ್ ! ಆತನ ಹೆಸರು ಕೇಳಿದ ಕೂಡಲೇ ಆಕೆ ಸ್ವಲ್ಪ ಯೋಚನೆ ಮಾಡಬೇಕಿತ್ತು. ಇರಾಕ್ ನ ಸದ್ದಾಂ ಹುಸೈನ್ ನ ಕ್ರೌರ್ಯ ಆಕೆಯ ಕಣ್ಣ ಮುಂದೆ ಒಂದು ಬಾರಿ ಬಂದು ನಿಲ್ಲಬೇಕಿತ್ತು. ಆತನ ಧರ್ಮ ನೋಡಿ ಆಕೆ ಮತ್ತೊಂದಷ್ಟು ಚಿಂತಿಸಬೇಕಿತ್ತು. ಹಿಂದೆ ಎಷ್ಟೆಲ್ಲ ಹಿಂದೂ ಹೆಣ್ಣುಮಕ್ಕಳು ಇಂತವರ ಸಹವಾಸ ಮಾಡಿ ಕೊನೆಗೆ ಪ್ರಾಣಕಳೆದುಕೊಂಡ ಘಟನೆಗಳು ಆಕೆಗೆ ನೆನೆಪಿಗೆ ಬರಬೇಕಿತ್ತು. ಊಹೂಂ, ಆಕೆ ಪತಂಗದಂತೆ, ಸಾಯಲು ಹೊಂಚು ಕೂತು ಹೊರಟವಳಂತೆ ಬೆಂಕಿಯ ಸಂಗ ಮಾಡಿದಳು. ಕೆಲವು ಹಿಂದೂ ಹೆಣ್ಣುಮಕ್ಕಳು, ಅರ್ಧಂಬರ್ಧ ಅದೃಷ್ಟವಂತರು ಹೇಗೂ ಪ್ರಾಣ ಉಳಿಸಿಕೊಂಡು, ಡೈವೋರ್ಸು ಪಡೆದುಕೊಂಡೋ ಅಥವಾ ಹಾಗೆಯೋ ತಾಯಿ ಮನೆ ಸೇರಿಕೊಂಡದ್ದು ಅವಳಿಗೆ ಒಮ್ಮೆ ಮನಸ್ಸಿನಲ್ಲಿ ಸುಳಿದುಹೋಗಬೇಕಿತ್ತು. ಅವಳು ಬಿಡಿ ; ಆಕೆ ಇನ್ನೂ ಲೋಕದ ಕೃತ್ರಿಮ ತಿಳಿಯದ 19 ರ ಬಾಲೆ. ಹೋಗಲಿ, ಆಕೆಯ ತಾಯಿಯಾದರೂ ನಲ್ವತ್ತು ವರ್ಷ ಈ ಪ್ರಪಂಚವನ್ನು ಓದಿದವಳು. ಆಕೆಯ ತಲೆಯಲ್ಲಿಯಾದರೂ ಒಂದಿಷ್ಟು ಭಾಗದ ಮೆದುಳು ಸರಿಯಾದ ಇರಬೇಕಿತ್ತಲ್ಲವಾ ? ಪೂರ್ ಫೆಲ್ಲೋಸ್..

ರಿಯಾ, ಆಕೆಯ ತಾಯಿ ಮತ್ತು ಸದ್ದಾಮ್ ಹುಸೈನ್ ಜತೆ ಗೂಡಿ ಪಾರ್ಕು ಸುತ್ತುತ್ತಾರೆ. ಪದೇ ಪದೇ ಒಳ್ಳೊಳ್ಳೆಯ ರೆಸ್ಟೋರೆಂಟ್ ಗೆ ತೆರಳಿ ಗಡದ್ದು ಊಟ ಮಾಡುತ್ತಾರೆ. ಅಮ್ಮ ಮಗಳು ಇಬ್ಬರೂ ಆತನ ಜತೆ ಸ್ವಿಮ್ಮಿಂಗ್ ಪೂಲಿನಲ್ಲಿ ಆಟವಾಡುತ್ತಾರೆ. ಜೀವನ ಸುಂದರವಾಗಿದೆ, ಹಿತವಾಗಿದೆ, ಎಂದು ಆ ಇಬ್ಬರು ಅಮಾಯಕರು ಭ್ರಮಿಸಿದಂತಹಾ ಕಾಲವದು.

ಅಷ್ಟರಲ್ಲಾಗಲೇ, ಆಕೆಗೆ ಆತನ ಮೇಲೆ ಫುಲ್ಲು ನಂಬಿಕೆ ಬಂದಿರುತ್ತದೆ. ಆತ ಆಕೆಯನ್ನು ಬರಸೆಳೆದು ಬಳಸಿಕೊಳ್ಳುತ್ತಾನೆ. ಮದುವೆಗಿಂತ ಮುಂಚೆ ಇದೆಲ್ಲ ಬೇಡ ಅಂತ ಆಕೆ ಹೇಳುತ್ತಾಳೆ. ಹೇಗೂ ಮದುವೆಯಾಗುತ್ತೇವಲ್ಲ ಎಂದು ಆತ ಒಪ್ಪಿಸುತ್ತಾನೆ ಮದುವೆ ಹೇಗೂ ಆಗೇ ಆಗುತ್ತೇವಲ್ಲ ಎಂಬ ಬಲವಾದ ನಂಬಿಕೆ ಆಕೆಯದು.

ಅವಕಾಶಕ್ಕಾಗಿ ಹೊಂಚು ಹಾಕಿ ಕಾದು ಕೂತ ಬೇಟೆಗಾರ ಒಂದು ದಿನ ಆಕೆಯನ್ನು ಏಕಾಂತದಲ್ಲಿ ಭೇಟಿಯಾಗುತ್ತಾನೆ. ಆಕೆಯೂ ಸ್ಪಂದಿಸುತ್ತಾಳೆ. ಆಗಲೂ ಆಕೆ ನೆಚ್ಚಿಕೊಂಡದ್ದು ಕೇವಲ ನಂಬಿಕೆಯನ್ನು ! ಮುಂದೆ ಅವರಿಬ್ಬರೂ ಪದೇ ಪದೇ ಸೇರುತ್ತಾರೆ. ಆತನಿಗೆ ಬೋರು ಹೊಡೆಸುವಷ್ಟರ ಮಟ್ಟಿಗೆ : ಆಕೆಗೆ ಮತ್ತೆ ಮತ್ತೆ ಆತ ಬೇಕೆನಿಸುವಷ್ಟರ ಮಟ್ಟಿಗೆ. ಆಕೆ ಭಾವನಾತ್ಮಕವಾಗಿ ಆತನ ಸಂಗಾತಿಯೇ ಆಗಿ ಹೋಗುತ್ತಾಳೆ.

ಅಷ್ಟರಲ್ಲಿ ಆತನ ಎದೆಯ ಪೊಟರೆಯೊಳಗೆ ಅಡಗಿದ್ದ ಮಿಡಿ ನಾಗರನಲ್ಲಿ ಸಣ್ಣಗೆ ಮಿಸುಕಾಟ. ಆತ ತನ್ನ ಕೆಲಸ ಕಾರ್ಯ ಮುಗಿದ ಕಾರಣದಿಂದ ಆಕೆಯನ್ನು ಅವಾಯ್ಡ್ ಮಾಡಲು ಶುರುಮಾಡುತ್ತಾನೆ. ಬೇಗ ಮದುವೆ ಆಗುವಂತೆ ಆತನನ್ನು ಆಕೆ ಒತ್ತಾಯಿಸುತ್ತಾಳೆ. ಆತ ನೆಗ್ಲೆಕ್ಟ್ ಮಾಡುತ್ತಾನೆ. ಆಕೆ ಮತ್ತೆ ಮತ್ತೆ ಕಾಡುತ್ತಾಳೆ. ಆಕೆಯ ಒತ್ತಾಯ ಜಾಸ್ತಿಯಾಗುತ್ತದೆ. ಈಗ ಮಿಡಿನಾಗರ ಸಾಕಷ್ಟು ಉಂಡು ಬಲಿತಿದ್ದ. ಅದರ ಒಳಗೆ ಕಾರ್ಕೋಟಕ ವಿಷ ತುಂಬಿ ನಿಂತಿತ್ತು. ಅದೊಂದು ದಿನ ಆತ ಸರಕ್ಕನೆ ಹೆಡೆಯಗಲಿಬಿಡುತ್ತಾನೆ. ಎರಡು ನಿಷ್ಪಾಪಿ ಜೀವಿಗಳು ನಾಯಿ ನರಿಗಿಂತ ವಿಕಾರವಾಗಿ ಸತ್ತು ಹೋಗುತ್ತಾರೆ. ರಿಯಾ ಮತ್ತು ಆಕೆಯ ಅಮ್ಮನ ಸಾವಿಗೆ ಯಾರೂ ಕೂಡಾ ಕಾರಣರಲ್ಲ. ಆಕೆಯ ಸಾವಿಗೆ ಕಾರಣ – ನಂಬಿಕೆ ! ದಿ ಗ್ರೇಟ್ ಟ್ರಸ್ಟ್ !!

ಹಾಗೆ, ‘ ನಂಬಿಕೆ ‘ ಎನ್ನುವುದೊಂದು ಒಳ್ಳೆಯ ಗುಣವೆಂದು ನಾವು – ನೀವೆಲ್ಲ ಇಷ್ಟು ದಿನ ನಂಬಿಕೊಂಡು ಬಂದ ಅದೇ ನಂಬಿಕೆಗೆ ಎರಡು ಅಮಾಯಕ ಜೀವಗಳು ಪಶ್ಚಿಮ ಬಂಗಾಳದ ರೋಗಗ್ರಸ್ತ ರಾಜ್ಯದ ಖಿಜುರ್ಖಲಿ ಎಂಬ ವಿಚಿತ್ರ ಹೆಸರಿನ ನದಿಯ ದಂಡೆಯ ಮೇಲೆ ತಂದೂರಿಯ ಥರ ಬೆಂದು ಹೋಗಿದ್ದಾರೆ.

ಅದೊಂದು ದಿನ, ರಿಯಾಳನ್ನೂ ಆಕೆಯ ತಾಯಿಯನ್ನೂ ತನ್ನ ಮನೆಗೆ ಕರೆಸಿಕೊಂಡ ಸದ್ದಾಮ್ ಹುಸೈನ್ ಅವರಿಗೆ ಮತ್ತು ಬಾರಿಸುವ ಪಾನೀಯ ನೀಡಿದ್ದಾನೆ. ಅದನ್ನವರು ಕುಡಿದು ಪ್ರಜ್ಞೆ ತಪ್ಪುವುದಕ್ಕೆ ತಡವಿಲ್ಲ, ಅವರ ಜೀವಂತ ದೇಹಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿಯ ಕೆನ್ನಾಲಿಗೆಗಳು ಧಗಧಗಿಸುವ ಜತೆ ಜತೆಗೆ ಕ್ರೂರ ಮನಸ್ಸುಗಳು ಕೇಕೆ ಹಾಕಿ ಗಹಗಹಿಸಿವೆ.

ಪೊಲೀಸರು ಅಪರಾಧಿಗಳನ್ನು ಬಂಧಿಸುವುದು, ಕೇಸು, ಕೋರ್ಟು, ಸ್ವಲ್ಪ ದಿನ ಜೈಲು, ಜಾಮೀನು- ಎಲ್ಲ ನಾಟಕದ ಅಂಕಗಳು ಮತ್ತೆ ಪುನರಾವರ್ತನೆ ಆಗಲಿವೆ. ಹಿಂದೂ ಹೆಣ್ಣುಮಕ್ಕಳ ಮೇಲಿನ ಮೋಸ ಮತ್ತೆ ಮತ್ತೆ ಮರುಕಳಿಸಲಿದೆ. ಅದೇ, ಒಂದು ವೇಳೆ ಮುಸ್ಲಿಂ ಹುಡುಗಿಯನ್ನು ಆ ಥರ ಸುಲಭದಲ್ಲಿ ಮೋಸ ಮಾಡಲು ಆತನ ಮುಸ್ಲಿಂ ಸಮಾಜ ಬಿಡುವುದಿಲ್ಲ. ಅವರನ್ನು ಬುರ್ಕಾದ ಒಳಗಿಟ್ಟು ಅವರ ಸಮಾಜ ಸಾಕುತ್ತದೆ. ಆದ್ದರಿಂದ ಹಿಂದೂ ಹುಡುಗಿಯರು, ಅವರ ಪೋಷಕರು ಮತ್ತು ರಕ್ಷಕರು ಕಟ್ಟೆಚ್ಚರದಲ್ಲಿ ಇರುವುದು ಇಂದಿನ ಅಗತ್ಯ.

ಒಂದಂತು ನೆನಪಿಡಿ. ಕೇವಲ ಹುಟ್ಟಿಸಿದ ಕೂಡಲೇ ಆತ ಅಪ್ಪನಾಗೋದಿಲ್ಲ. ಹುಡುಗಿಯ ಹಿಂದೆ ಮುಂದೆ ಹುಟ್ಟಿದ ಕೂಡಲೇ ಆತ ತಮ್ಮ ಅಥವಾ ಅಣ್ಣನಾಗುವುದಿಲ್ಲ. ನಿಮ್ಮ ಕುಟುಂಬವನ್ನು ಮಿಲಿಟರಿ ಶ್ರದ್ಧೆಯಿಂದ ರಕ್ಷಣೆ ನೀಡಬೇಕಾದ್ದು ನಿಮ್ಮ ಜವಾಬ್ದಾರಿ. ನಿಮ್ಮ ಪೀಂಕನ್ ನೀವೇ ತೊಳಕೊಬೇಕು. ಅದನ್ನು ದಿನ ಮರೆತ ರಣ ಹದ್ದುಗಳು ಕೇಕೆ ಹಾಕಿ ನಗುತ್ತವೆ. ಇಲ್ಲದೆ ಹೋದರೆ ರಿಯಾಳಿಗೆ ಆದಂತೆ ನಮ್ಮ ಹೆಣ್ಣುಮಕ್ಕಳು ತಂದೂರಿಗಿಂತ ನಿಕೃಷ್ಟವಾಗಿ ಬೇಯುತ್ತಾರೆ….ಎಚ್ಚರ ಹಿಂದೂ ಎಚ್ಚರ !!

ಕೊನೆಯದಾಗಿ ಒಂದು ಮಾತು : ಪ್ರೀತಿ, ಮಮಕಾರ, ಕರುಣೆ, ದಾನ, ಸಹಾಯ, ಅನುಕಂಪ- ಇಂತಹಾ ಯಾವುದೇ ಮಾನವೀಯ ಗುಣಗಳನ್ನು ನೀವು ಬೆಳೆಸಿಕೊಳ್ಳಿ. ಮಮಕಾರ ತೋರಿ. ಪ್ರೀತಿಸಿ. ಕರುಣಾ ರಸವನ್ನು ಹರಿಸಿ. ಕೈಬಿಚ್ಚಿ ದಾನ ಮಾಡಿ. ಸಹಾಯ ಹಸ್ತ ಮುಂದೆ ಚಾಚಿ. ಆದರೆ, ಯಾವತ್ತಿಗೂ ಯಾರನ್ನೂ ನಂಬಬೇಡಿ. ಇದು ಮಾಡರ್ನ್ ಆಧ್ಯಾತ್ಮ !

Leave A Reply

Your email address will not be published.