ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಟವೇರಾಕ್ಕೆ ಡಿಕ್ಕಿ | 13 ಸಾವು, ಅಪಘಾತದ ತೀವ್ರತೆಗೆ ಜನ ತಲ್ಲಣ

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಣ್ಣ ಕಾರೊಂದು ಬರುತ್ತಿತ್ತು. ಅದರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಕಾರು ಕುಣಿಗಲ್ ನ ಸಮೀಪದ ಬ್ಯಾಲದಕೆರೆ ಪಕ್ಕ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿದೆ. ಆನಂತರ ಎದುರಿನಿಂದ ಬರುತ್ತಿದ್ದ (ಧರ್ಮಸ್ಥಳದ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದ) ಟವೇರ ವಾಹನ ಅದಕ್ಕೆ ಢಿಕ್ಕಿಯಾಗಿ ಟವೇರಾದಲ್ಲಿದ್ದ ಹತ್ತು ಜನ ಹಾಗೂ ಕಾರಿನಲ್ಲಿದ್ದ ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಮೃತರನ್ನು ಸುಂದರರಾಜ್ (48), ರಾಜೇಂದ್ರ (27), ಮಂಜುನಾಥ್ (35),  ಸರಳ (32), ತನುಜ (25), ಗೌರಮ್ಮ (60), ರತ್ನಮ್ಮ (52),   ಪ್ರಶನ್ಯಾ (14), ಬೆಂಗಳೂರಿನ ದೊಡ್ಡ ಆಲದಮರ ಮೂಲದ ಲಕ್ಷ್ಮೀಕಾಂತ್ (24), ಸಂದೀಪ (36), ಮಧು (28) ಎಂದು ಗುರುತಿಸಲಾಗಿದೆ. ಸತ್ತವರಲ್ಲಿ ಎಂಟು ಜನ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಅಪಘಾತದಲ್ಲಿ ಇನ್ನೂ ನಾಲ್ವರು ತೀವ್ರವಾಗಿ
ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಕಾರುಗಳು ಪರಸ್ಪರ ಢಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಜ್ಜಿ ಹೋಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದು ಅವರ ತಲೆ ಚಿಪ್ಪುಗಳು ಹೊರ ಬಂದಿದ್ದು ಒಟ್ಟಾರೆ ಅಪಘಾತದ ಸ್ಥಳವು ಹೃದಯ ವಿದ್ರಾವಕ ವಾತಾವರಣವನ್ನು ಸೃಷ್ಟಿಸಿದೆ. ಅಪಘಾತದಿಂದ ಮರಣ ಹೊಂದಿದ ಒಂದೂವರೆ ವರ್ಷದ ಮಗುವಿನ ಶವ ನೋಡಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಣಿ ಯೊಬ್ಬರು ಬಿಕ್ಕಿ ಬಿಕ್ಕಿ ಅತ್ತರು.

ಅಪಘಾತವು ನಸುಕಿನಲ್ಲಿ ನಡೆದಿದೆ ಮತ್ತು ವೇಗದ ಚಾಲನೆಯೂ ಇಷ್ಟು ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

error: Content is protected !!
Scroll to Top
%d bloggers like this: