ಕ್ವಾಲಿಟಿಗೆ ಹೆಸರಾದ ‘ ಮುಳಿಯ ‘ ಬ್ರಾಂಡ್ ನಿಂದ ಪುತ್ತೂರಿನ ಹೃದಯ ಭಾಗದಲ್ಲಿ ಆತ್ಯಾಧುನಿಕ ‘ ಕೃಷಿಕೇಶ ಲೇಔಟ್ ‘ ಗೆ ಚಾಲನೆ
ಪುತ್ತೂರು ಮುಳಿಯ ಪ್ರಾಪರ್ಟೀಸ್ ವತಿಯಿಂದ ಪುತ್ತೂರಿನಲ್ಲಿ ಆತ್ಯಾಧುನಿಕ, ಸುಸಜ್ಜಿತ ವಸತಿ ನಿವೇಶನ ” ಕೃಷಿಕೇಶ ” ಲೇಔಟ್ ನ ಭೂಮಿ ಪೂಜೆಯು ಪುತ್ತೂರು ಸಮೀಪದ ಪಾಂಗಲೈಯಲ್ಲಿ ನಡೆಯಿತು.
ಪುರೋಹಿತ ಕೃಷ್ಣಕುಮಾರ್ ಉಪಾಧ್ಯಾಯ ಅವರು ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು. ಪರ್ಲಡ್ಕ ವಾರ್ಡಿನ ಕೌನ್ಸಿಲರ್ ವಿದ್ಯಾ ಗೌರಿ ಇವರು ಹಾಲೆರೆದು ಭೂಮಿ ಪೂಜೆ ನೆರವೇರಿಸಿದರು.
ಖ್ಯಾತ ವಕೀಲರಾದ ಮಹೇಶ್ ಕಜೆಯವರು ” ಕೃಷಿಕೇಶ ” ಲೇಔಟ್ ನ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗಣ್ಯರಾದ ಭಾವಿನ್ ಶೇಟ್, ಸೇಡಿಯಾಪು ಜನಾರ್ಧನ ಭಟ್, ಆರ್ಟಿಟೆಕ್ ಸಚ್ಚಿದಾನಂದ, ಮುಳಿಯ ಗೋವಿಂದ ಭಟ್, ಮಾಜಿ ಕೌನ್ಸಿಲರ್ ವಿನಯ್ ಭಂಡಾರಿ ಮುಂತಾದವರು ಭಾಗವಸಿದ್ದರು.
ಪುತ್ತೂರು ಬಸ್ಟ್ಯಾಂಡ್ ಸಮೀಪದ ಪಂಗಳಾಯಿಯಲ್ಲಿ ಇರುವ ಈ ನಿವೇಶನ ಬಸ್ ಸ್ಟಾಂಡ್ ನಿಂದ ಕೇವಲ 600 ಮೀಟರ್ ಅಂತರದಲ್ಲಿದೆ. ಬದುಕಿನ ಅವಿಭಾಜ್ಯ ಅಂಗಗಳಾದ ದೇವಸ್ಥಾನ, ಚರ್ಚ್, ಶಾಲೆ ಹಾಗೂ ಮಾರುಕಟ್ಟೆಗಳು ಮುಳಿಯದ ಉದ್ದೇಶಿತ ವಸತಿ ನಿವೇಶನ ” ಕೃಷಿಕೇಶ ” ಲೇಔಟ್ ಗಿಂತ 1 ಕಿಮೀ ಗಿಂತಲೂ ಹತ್ತಿರ ಇದೆ. ಪುತ್ತೂರು ದೊಡ್ಡ ನಗರವಾಗಿ ಬೆಳೆಯುತ್ತಿದ್ದು, ಯಾವುದೇ ಕ್ಷಣದಲ್ಲೂ ಜಿಲ್ಲಾ ಕೇಂದ್ರವಾಗುವತ್ತ ಸಾಗುತ್ತಿದೆ. ಇಂತಹ ಹೊತ್ತಿನಲ್ಲಿ, ಮುಂದಕ್ಕೆ ಬಹುದೊಡ್ಡ ವಾಣಿಜ್ಯ ಕೇಂದ್ರವಾಗಿ ಬೆಳೆಯಲಿರುವ ಪುತ್ತೂರಿನ ಭವಿಷ್ಯದ ಅವಶ್ಯಕತೆಗಳನ್ನು ಮನಗಂಡ ಮುಳಿಯ ಬ್ರಾಂಡ್ ಸುಸಜ್ಜಿತ ವಸತಿ ನಿವೇಶನ ” ಕೃಷಿಕೇಶ ” ಲೇಔಟ್ ಗಳ ನಿರ್ಮಾಣಕ್ಕೆ ಸಮಯೋಚಿತವಾಗಿ ಕೈ ಹಾಕಿದೆ.
ಬೆಳೆಯುತ್ಹಿರುವ ಪುತ್ತೂರು ನಗರದಲ್ಲಿ ಈ ನಿವೇಶನಗಳು ಜನಪ್ರಿಯವಾಗಿದ್ದು, ಸುವ್ಯಸ್ಥಿತ ಅನುಕೂಲತೆಯೊಂದಿಗೆ ಇದ್ದು , ಹಾಗೆಯೇ ಇದು ಒಂದು ಇನ್ವೆಸ್ಟ್ಮೆಂಟ್ ಕೂಡ ಹೌದು – ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ
ಒಟ್ಟು 1 ಎಕರೆಯಲ್ಲಿ 13 ನಿವೇಶನಗಳಿದ್ದು 30 ಫೀಟ್ ನ ರಸ್ತೆ , ಪಾರ್ಕ್, ಮಕ್ಕಳ ಆಟದ ಜಾಗ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯನ್ನು ಈ ಆಧುನಿಕ ಲೇಔಟ್ ಹೊಂದಿದೆ. ಆಸಕ್ತರು ಮುಳಿಯವನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಂಸ್ಥೆಯ ದಿಗ್ದರ್ಶಕರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಹಾಗೂ ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.