ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದಬೆ೯ ಪುತ್ತೂರು ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಶಾಲಾ ಸಂಚಾಲಕಿ ಭಗಿನಿ ಮೋರಿನ್ ಬಿ.ಎಸ್. ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಸಿಟಿ ಆಸ್ಪತ್ರೆಯ ಮನಶಾಸ್ತ್ರಜ್ಞರಾದ ಶ್ರೀಮತಿ ನಳಿನಾಕ್ಷಿ ವಿದ್ಯಾಥಿ೯ಗಳಲ್ಲಿ ವೈಜ್ಞಾನಿಕ ಅನ್ವೇಷಣೆ, ವಿದ್ಯಾಥಿ೯ಗಳ ಮೇಲಾಗುವ ಒಳಿತು ಮತ್ತು ಕೆಡುಕುಗಳ ಬಗ್ಗೆ ಸಂವಹನ ನಡೆಸಿದರು.

ವೇದಿಕೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಮೇಶ್ ಕೆ.ವಿ. , ಪೋಷಕರಾದ ಡಾ. ಶ್ರೀಪ್ರಕಾಶ್ ಹಾಗೂ ಶಾಲಾ ಮುಖ್ಯಶಿಕ್ಷಕಿ ಭಗಿನಿ ಪ್ರಶಾಂತಿ ಬಿ.ಎಸ್. ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಭಗಿನಿ ಪ್ರಶಾಂತಿ ಬಿ. ಎಸ್. ಸ್ವಾಗತಿಸಿ ವಿದ್ಯಾಥಿ೯ ಗಗನ್ ಧನ್ಯವಾದ ಸಮಪಿ೯ಸಿ ಕುಮಾರಿ ಶ್ರೀಮಾ ಕಾಯ೯ಕ್ರಮ ನಿರೂಪಿಸಿ ಬಳಿಕ ವಿದ್ಯಾಥಿ೯ಗಳಿಂದ ವಿಜ್ಞಾನ ಮಾದರಿ ಪ್ರದಶ೯ನ ನಡೆಯಿತು.