ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಕಡಬ ತಾಲೂಕು ಒಂದನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

0 7

ಕಡಬ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಡಬ  ತಾಲೂಕು ಘಟಕದ ಆಶ್ರಯದಲ್ಲಿ ಕಡಬ ತಾಲೂಕಿನ ಒಂದನೇ  ಕನ್ನಡ ಸಾಹಿತ್ಯ ಸಮ್ಮೇಳನ ವಿಶ್ವೇಶನಗರ  ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದ ಡಾ|ಎಂ.ಚಿದಾನಂದಮೂರ್ತಿ ,  ಅರ್ಬಿ  ರಾಜಮ್ಮ ಮತ್ತು ಶ್ರೀನಿವಾಸ ಭಟ್ಟ   ಸಭಾಂಗಣ , ಪರಮಪೂಜ್ಯ ವಿಶ್ವೇಶತೀರ್ಥ ವೇದಿಕೆಯಲ್ಲಿ  ಶುಕ್ರವಾರ ಬೆಳಿಗ್ಗೆಯಿಂದ ಆರಂಭಗೊಂಡಿತ್ತು.

     ಬೆಳಿಗ್ಗೆ    ಕಾಲೇಜಿನ ವಠಾರದಲ್ಲಿ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್ ಕೆ ಧ್ವಜರೋಹನಗೈದರು.  ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಉಪನ್ಯಾಸಕಿ ರಮ್ಯ  ತಾವೂರು ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಜಿ ಆರ್ ವಂದಿಸಿದರು. ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ  ಗೋಳಿತ್ತಡಿ ಸಮೀಪದ ಶಾರದ ನಗರದಲ್ಲಿ ಕನ್ನಡ ಭುವನೇಶ್ವರಿಯ ದಿಬ್ಬಣಕ್ಕೆ ತಾಲೂಕು  ಸದಸ್ಯೆ ಜಯಂತಿ ಆರ್ ಗೌಡ ಚಾಲನೆ ನೀಡಿದರು. ಉದ್ಯಮಿ ಎಸ್ ಕೆ ಆನಂದ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚಣೆಗೈದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾದ ಕಾರ್ಯದರ್ಶಿ ರಾಧಕೃಷ್ಣ ಕೆ ಎಸ್ ದೀಪ ಪ್ರಜ್ವಲನ ಮಾಡಿದರು. ಶರತ್ ಸ್ವಾಗತಿಸಿದರು. ಪ್ರೇಮಾ ವಂದಿಸಿದರು. ಪ್ರಫುಲ್ಲ ನಿರ್ವಹಿಸಿದರು.

  ಬಳಿಕ ಕಾಲೇಜು ಆವರಣದಲ್ಲಿ  ಕಸಾಪ ದ.ಕ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ  ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿದರು.  ಕಡಬ ತಾಲೂಕು ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಸಮ್ಮೇಳನ ಧ್ವಜಾರೋಹಣ ನೆರವೇರಿಸಿದರು. ರಾಧಕೃಷ್ಣ ಎಂ ಸ್ವಾಗತಿಸಿದರು. ವಾಸಪ್ಪ ವಂದಿಸಿದರು. ಹೇಮಲತಾ ಬಾಕಿಲ ನಿರ್ವಹಿಸಿದರು.   

ಸಮ್ಮೇಳನ

  ಬದಲಾವಣೆಯ ಕಾಲ ಘಟ್ಟದಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿ ಉಳಿದುಕೊಳ್ಳುವ ಯೋಚನೆ ಯೋಜನೆ ರೂಪಿಸಬೇಕು. ಸಾಹಿತ್ಯ ಸಮ್ಮೇಳನಗಳು ಆ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸಿವೆ. ಇದರಿಂದ ಕನ್ನಡದ ಬಗೆಗಿನ ಸಂಕುಚಿತ ದೃಷ್ಟಿಕೋನ ಬದಲಾಗಿದೆ ಸಮ್ಮೇಳನ ಅಧ್ಯಕ್ಷ ಟಿ ನಾರಾಯಣ ಭಟ್ ಹೇಳಿದರು.

    ಸಾಯಂಕಾಲ ನಡೆದ ಸಮ್ಮೇಳನ ಉದ್ಘಾಟನ ಕಾರ್ಯಕ್ರಮದಲ್ಲಿ  ಅಧ್ಯಕ್ಷಿಯ ಭಾಷಣ ಮಾಡಿದ ಅವರು,  ಕನ್ನಡ ಎನ್ನುವುದು ಭಾಷೆ.  ಕನ್ನಡವನ್ನು ಪ್ರೀತಿಸುವ , ಅಕ್ಷರವನ್ನು ಗೌರವಿಸುವ ಮನಸ್ಸುಗಳು ಅಧಿಕವಾಗಬೇಕು. ಭಾಷೆ ಬದುಕಾಗಬೇಕು. ನಿತ್ಯ ಉಸಿರಾಗಬೇಕು. ಬದುಕಿನೊಂದಿಗೆ ಭಾಷೆ ಮಿಳಿತವಾದಾಗ ಕನ್ನಡ ಭಾಷೆ ಉಳಿಯುತ್ತದೆ.   ಮಾದರಿ ಕನ್ನಡ ಶಾಲೆಗಳೆಂದರೆ ಹೆಸರಲ್ಲಿ ಮಾತ್ರ ಉಳಿದಿದೆ.  ಇಂದಿಗೂ ಕನ್ನಡದಲ್ಲಿ ಉತ್ತಮ ಪಾಠ ಪ್ರವಚನ ನಡೆಯುತ್ತಿರುವ  ಕಡಬ ತಾಲೂಕಿನ ರಾಮಕುಂಜೇಶ್ವರ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಸರಸ್ವತಿ ವಿದ್ಯಾಸಂಸ್ಥೆಗಳು, ಸೈಂಟ್ ಜೋಕಿಂ ಕಡಬ, ಕೆಲವು ಸರಕಾರಿ ಶಾಲೆಗಳು ಇವೆಲ್ಲ ಇಂದಿಗೂ ಮಕ್ಕಳ ಸಂಖ್ಯೆಯಲ್ಲಿ ಹಿಂದುಳಿದಿಲ್ಲ. ಆದರೆ ಸರಕಾರದ ಪ್ರೋತ್ಸಾಹ ಕಡಿಮೆಯಾಗುತ್ತಿದೆ ಎಂದರು.

    ಸಮ್ಮೇಳನ ಉದ್ಘಾಟನೆ ನಡೆಸಿದ  ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ಸಾಹಿತಿಗಳು ಮತ್ತು ಸಾಹಿತ್ಯ ಸಮಾಜದ ಎರಡು ಕಣ್ಣುಗಳು.  ಸಾಹಿತಿಯು ಸಮಾಜವನ್ನು ಕಟ್ಟುವ ಆಸಕ್ತಿಯನ್ನು ಹೊಂದಿದ್ದಾನೆ. ಅನ್ಯ ಭಾಷೆ, ಸಂಸ್ಕೃತಿಗಳು ನಮ್ಮ ಭಾಷೆಯನ್ನು  ತುಳಿಯುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಕನ್ನಡ  ನೆಲದಲ್ಲಿ ಕನ್ನಡವನ್ನು ಉಳಿಸಿ ಬೆಳಸಬೇಕಾದ ಅನಿವಾರ್ಯತೆಯಿದೆ.   ಈ ಹಿನ್ನೆಲೆಯಲ್ಲಿ ಬಾಲ್ಯಶಿಕ್ಷಣನ್ನು ಮಾತೃಭಾಷೆಯಲ್ಲಿ ಕೊಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

  ಆರ್ಶೀವಚನ ನೀಡಿದ  ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ , ಸಾಹಿತ್ಯ , ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಪೂರಕವಾಗಬೇಕು.  ನಾಡಿನ ನೆಲ ಜಲವನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಜನಾಂಗಕ್ಕೆ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು , ಹಿರಿಯರು ಮಾರ್ಗದರ್ಶನ ನೀಡಿದಾಗ ಸಹಜವಾಗಿಯೇ ಕನ್ನಡದ ಮೇಲೆ ಒಳವು ಮೂಡುತ್ತದೆ. ನಮ್ಮ ಭಾಷೆ ಉಳಿವಿಗೆ ಪಣ ತೋಡಬೇಕು ಎಂದರು. 

    ಸುಳ್ಯ ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಭಾಷೆ ಯಾವೂದಾದರೂ ಭಾವನೆಗಳು ಒಂದೇ ಆಗಿರಬೇಕು  ನಮ್ಮ ಹಿರಿಯರು ಜಾತಿ , ಭಾಷೆ ಬೇದ ಮರೆತು ಆಂಗ್ಲರ ವಿರುದ್ದ ಹೋರಾಡಿದ ಪರಿಣಾಮವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಈ ಹಿನ್ನೆಲೆಯಂತೆ ನಾಡು ನುಡಿಯ ಬಗ್ಗೆ ಅಪಚಾರವಾದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

  ಕಸಾಪ ಜಿಲ್ಲಾಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣ ಮಾಡಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾದ ಅಧ್ಯಕ್ಷ ಇ.ಕೃಷ್ಣಮೂರ್ತಿ ವಿಜ್ಞಾನ ಪ್ರದರ್ಶನ  ಉದ್ಘಾಟಿಸಿದರು. ಬಿ.ವಿ ಅರ್ತಿಕಜೆ ಕಲಾ ಪ್ರದರ್ಶನ ಉದ್ಘಾಟಿಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.  ಪ್ರಾಚ್ಯ ವಸ್ತು ಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಪಿ ಪಿ ವರ್ಗಿಸ್  ಉದ್ಘಾಟಿಸಿದರು.  ತಾ.ಪಂ ಸದಸ್ಯೆಯರಾದ , ಜಯಂತಿ ಆರ್ ಗೌಡ,  ತೇಜಸ್ವಿನಿ ಕಟ್ಟಪುಣಿ , ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಕಡಬ ತಹಶಿಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ , ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೊತ್ತಮ ಗೌಡ , ಉದ್ಯಮಿ ಎಸ್ ಕೆ ಆನಂದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪಾಧಿಕಾರಿಗಳಾದ ಐತ್ತಪ್ಪ ನಾಯ್ಕ, ವಿಜಯ ಲಕ್ಷ್ಮೀ ಬಿ ಶೆಟ್ಟಿ , ಪೂರ್ಣಿಮ ರಾವ್ ಪೇಜಾವರ, ಸ್ವಾಗತ ಸಮಿತಿ ಪದಾದಿಕಾರಿಗಳಾದ ಡಾ. ಸಂಕೀರ್ತ್ ಹೆಬ್ಬಾರ್, ಸತೀಶ್ ನಾಕ್,ಎಂ ಸತೀಶ್ ಭಟ್, ಡಾ. ಶ್ರೀಧರ್ ಎಚ್, ಕೆ. ಎಸ್ ರಾಧಕೃಷ್ಣ ಮೊದಲಾದವರು  ಉಪಸ್ಥಿತರಿದ್ದರು.

ಅರ್ತಿಕಜೆ ಕಲಾ ಪ್ರದರ್ಶನ ಉದ್ಘಾಟಿಸಿದರು.

  ಕ.ಸಾ.ಪ. ಕಡಬ ತಾಲೂಕು ಘಟಕಾಧ್ಯಕ್ಷ ಜನಾರ್ದನ ಗೌಡ ಪ್ರಸ್ತಾವಿಸಿದರು. ಸ್ವಾಗತ ಸಮಿತಿ ಕೋಶಾಧಿಕಾರಿ ಸೇಸಪ್ಪ ರೈ ಸ್ವಾಗತಸಿದರು. ಶಿಕ್ಷಕಿ ಮಲ್ಲಿಕಾ ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು.     ಐತ್ತಪ್ಪ ನಾಯ್ಕ ಉದ್ಘಾಟಕರನ್ನು ಪರಿಚಯಿಸಿದರು.  ಲಕ್ಷ್ಮೀ ನಾರಾಯಣ ರಾವ್ ಆತೂರು ವಂದಿಸಿದರು. ಗಣರಾಜ ಕುಂಬ್ಲೆ, ಮಮತಾ ಕೆ ನಿರ್ವಹಿಸಿದರು.  ಬಳಿಕ ಪದವಿ    ಕಾಲೇಜಿನ  ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು

ಶಾರದನಗರದಿಂದ ಆರಂಭಗೊಂಡ ಕನ್ನಡ ಭುವನೇಶ್ವರಿ ಮೆರವಣಿಗೆಯಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾಕ್ಕೆ ಒಳಪಟ್ಟ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ , ಪದವಿಪೂರ್ವ  ಕಾಲೇಜು, ಪದವಿ ಕಾಲೇಜಿನ ವಿದ್ಯಾರ್ಥಿಗಳು , ಸ್ಥಳಿಯ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗಿಯಾದರು.  ಶ್ರೀ ರಾಮಕುಂಜೇಶ್ವರ ವಿದ್ಯಾ ವರ್ದಕ ಸಭಾದ ಸುಮಾರು ೧೭೫ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆ ತೊಟ್ಟು, ಸುಮಾರು ೨೦೦ ಕ್ಕೂ ಹಚ್ಚು ವಿದ್ಯಾರ್ಥಿಗಳು ಪಂಚೆ ಧರಿಸಿ ಮೆರಗು ನೀಡಿದರು. ಸಿಂಗಾರಿ ಮೇಳದ ಚೆಂಡೆ ನಾದ, ಗೊಂಬೆ ವೇಷಗಳು ಮೆರವಣಿಗೆಯಲ್ಲಿ ಆಕರ್ಸಿತವಾಗಿಸಿತ್ತು. ಪದವಿ ಕಾಲೇಜಿನ ವಿದ್ಯಾರ್ಥಿನಿ ಆಶಿತಾ ರೈ  ಭುವನೇಶ್ವರಿ ದೇವಿಯ ವೇಷ ಧರಿಸಿದ್ದರು. ವಿದ್ಯಾರ್ಥಿನಿಯರಾದ ಪ್ರತಿಕಾ , ಶೃತಿ ಜೊತೆಗಿದ್ದರು.

Leave A Reply