2020-21 ಸಾಲಿನ ಪ್ರಾಥಮಿಕ, ಪ್ರೌಢಶಾಲಾ ಶೈಕ್ಷಣಿಕ ಅವಧಿ ನಿಗದಿ

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಅವಧಿ, ಮಧ್ಯಂತರ ಮತ್ತು ಬೇಸಿಗೆ ರಜಾ ಅವಧಿಗಳನ್ನು ನಿಗದಿಪಡಿಸಿ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಮೊದಲ ಅವಧಿ ಮೇ 29ರಿಂದ ಅ.2, ಎರಡನೇ ಅವ ಧಿ ಅ.26- ಏ.14 ಆಗಿದೆ. ಅ.3- 25ರವರೆಗೆ ಮಧ್ಯಂತರ ರಜೆ, ಏ.15- ಮೇ 29ರವರೆಗೆ ಬೇಸಿಗೆ ರಜೆ ನಿಗದಿಪಡಿಸಲಾಗಿದೆ. ವಿವೇಚನಾ ರಜೆ ಒಟ್ಟು 244 ಇದ್ದು, ಅದರಲ್ಲಿ ನಾಲ್ಕನ್ನು ಕಳೆದರೆ 2020-21ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬೋಧನಾ ದಿನಗಳು 240 ದಿನಗಳನ್ನು ನಿರ್ಧರಿಸಲಾಗಿದೆ. ಪ್ರಾಥಮಿಕ ಶಾಲೆಗಳ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು 2021ಏ.13 ರಂದು, ಪ್ರೌಢಶಾಲೆಗಳಲ್ಲಿ 2021 ಏ.14ರಂದು ನಡೆಸಬೇಕು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2021ರ ಏ.14ರಂದು ನಡೆಯುವ ಅಂಬೇಡ್ಕರ್‌ ಜಯಂತಿಯನ್ನು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿ ಗ ಳೊಂದಿಗೆ ಕಡ್ಡಾಯವಾಗಿ ಆಚರಿಸಬೇಕು.

ಡಿಸೆಂಬರ್‌ ಮಾಹೆಯ ಕ್ರಿಸ್‌ಮಸ್‌ ರಜೆ ಬಯಸುವ ಸಂಸ್ಥೆಗಳು ಆಯಾ ಜಿಲ್ಲೆಗಳ ಡಿಡಿಪಿಐಗಳ ಮಟ್ಟದಲ್ಲಿ ಡಿಸೆಂಬರ್‌ನಲ್ಲಿ ರಜೆ ಪಡೆದು ಅಕ್ಟೋಬರ್‌ ರಜೆಯಲ್ಲಿ ಸರಿದೂಗಿಸಿಕೊಳ್ಳುವಂತೆ ತಿಳಿಸಲಾಗಿದೆ.

ಮುಷ್ಕರ, ಇನ್ನಿತರ ಅನಿರೀಕ್ಷಿತ ಕಾರಣಗಳಿಂದ ರಜೆ ಘೋಷಣೆಗಳು ಆದಲ್ಲಿ ಮುಂದಿನ ರಜಾ ದಿನ ಗಳಲ್ಲಿ ಶಾಲೆಗಳನ್ನು ನಡೆಸಿ ಶಾಲಾ ಕರ್ತವ್ಯದ ದಿನಗಳನ್ನು ಸರಿದೂಗಿಸಿ ಕೊಳ್ಳಬೇಕು. ಗಣರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ, ಮಹಾತ್ಮ ಗಾಂಧಿ  ಜಯಂತಿ ಮತ್ತು ನಾಡಹಬ್ಬಗಳಾದ ಕನ್ನಡ ರಾಜ್ಯೋತ್ಸವಗಳನ್ನು ಆಯಾ ದಿನಗಳಂದು ಕಡ್ಡಾಯವಾಗಿ ಆಚ ರಿಸುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್‌ ಆದೇಶ ಹೊರಡಿಸಿದ್ದಾರೆ.

ರಜೆ-ಬೋಧನಾಅವಧಿ ವಿವರ: 2020-21ನೇ ಶೈಕ್ಷಣಿಕ ಸಾಲಿನ ರಜೆ ಹಾಗೂ ಬೋಧನಾ ದಿನಗಳು ಇಂತಿವೆ. ತಿಂಗಳು ಒಟ್ಟು ದಿನಗಳು ಒಟ್ಟು ರಜೆ ಲಭ್ಯವಿರುವ ಶಾಲಾ ದಿನಗಳು ಈ ಕೆಳಗಿನಂತೆ ?

ಮೇ 2020 03 01 02

ಜೂನ್‌ 2020 30 04 26

ಜುಲೈ 2020 31 04 27

ಆಗಸ್ಟ್‌ 2020 31 07 24

ಸೆಪ್ಟೆಂಬರ್‌ 2020 30 05 25

ಅಕ್ಟೋಬರ್‌ 2020 31 26 05

ನವೆಂಬರ್‌ 2020 30 07 23

ಡಿಸೆಂಬರ್‌ 2020 31 06 25

ಜನವರಿ 2021 31 06 25

ಫೆಬ್ರವರಿ 2021 28 04 24

ಮಾರ್ಚ್‌ 2021 31 05 26

ಏಪ್ರಿಲ್‌ 2021 14 02 12

ಒಟ್ಟು 321 77 244

Leave A Reply

Your email address will not be published.