ಅರ್ಜುನ್ ಜನ್ಯ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ । ಮೈಸೂರಿನ ಅಪೊಲೋ ಆಸ್ಪತ್ರೆಗೆ ದೌಡು

ಪ್ಲೇ ಬ್ಯಾಕ್ ಸಿಂಗರ್, ಕಾಂಪೋಸರ್ ಮತ್ತು ರಿಯಾಲಿಟಿ ಶೋ ಜಡ್ಜ್ ಅರ್ಜುನ್ಯ ಜನ್ಯ ಅವರಿಗೆ ತೀವ್ರ ಸ್ವರೂಪದ ಹಾರ್ಟ್ ಅಟ್ಟ್ಯಾಕ್ ಆಗಿದೆ.

2006 ರಲ್ಲಿ ಆಟೋಗ್ರಾಫ್ ಪ್ಲೀಸ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿದ್ದ ಅರ್ಜುನ್ ಜನ್ಯಾ ಲಕ್ಷಾಂತರ ಸಂಗೀತ ಪ್ರೇಮಿಗಳ ಹೃದಯ ಕದ್ದರು. ಕೇವಲ 40 ವಯಸ್ಸಿನ ಅರ್ಜುನ್ ಜನ್ಯ ಈಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರು ರಾತ್ರಿ ಮೈಸೂರಿನ ತಮ್ಮ ನಿವಾಸದಲ್ಲಿ ಊಟ ಮಾಡಿ ಮಲಗಿದ್ದರು. ಮಲಗಿದ್ದಲ್ಲೇ ಮಧ್ಯರಾತ್ರಿ ತೀವ್ರ ಸ್ವರೂಪದ ಹೃದಯಾಘಾತವಾಗಿತ್ತು.

ಅವರನ್ನು ಮೈಸೂರಿನ ಬಿ ಜಿ ಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನ್ಯ ಅವರಿಗೆ ಭಾನುವಾರವೇ ಮೈಕೈನೋವು, ಹೊಟ್ಟೆ ನೋವು, ತಲೆನೋವು, ಬೆನ್ನು ನೋವು ಮತ್ತು ಲೂಸ್ ಮೋಷನ್ ಇತ್ತು. ಅದಕ್ಕಾಗಿ ಅವರು ಅಪೊಲೊ ಆಸ್ಪತ್ರೆಗೆ ಹೋಗಿದ್ದರು. ಆಗ ಅವರಿಗೆ ಇಸಿಜಿ ಮಾಡಲಾಗಿತ್ತು. ಆ ಇಸಿಜಿ ನಾರ್ಮಲ್ ಆಗಿತ್ತು. ಆದರೆ ಇವೆಲ್ಲವಕ್ಕೆ ಟ್ರೀಟ್ಮೆಂಟ್ ತೆಗೆದುಕೊಂಡ ನಂತರ ಮತ್ತೊಂದು ಬಾರಿ ಇಸಿಜಿ ಮಾರಿದಾಗ, ಅದು ಬಾರ್ಡರ್ ಲೈನ್ ಅಂತ ತೋರಿಸುತ್ತಿತ್ತು. ಆ ಕೂಡಲೇ ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರು.

ಆದರೆ ನಿನ್ನೆ ಮಧ್ಯ ರಾತ್ರಿ ಅವರಿಗೆ ಒಮ್ಮೆಗೆ ತೀವ್ರ ಹೃದಯಾಘಾತವಾಗಿದೆ. ಆಮೇಲೆ ಆಂಜಿಯೋಗ್ರಾಫಿ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈಗ ಅವರ ತಲೆನೋವು, ಹೊಟ್ಟೆನೋವು ಮತ್ತು ಎದೆನೋವು ಹೋಗಿದ್ದು, ಅವರು ಔಟ್ ಆಫ್ ಡೇಂಜರ್ ಆಗಿದ್ದಾರೆಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಲೋಕೇಶ್ ಕುಮಾರ್ ಆಗಿದ್ದ ಹುಡುಗ ಅರ್ಜುನ್ ಜನ್ಯ ಆಗಿ ಹೆಸರು ಬದಲಿಸಿಕೊಂಡು ದೊಡ್ಡ ಮಟ್ಟಿಗೆ ಬೆಳೆದರು. ಅರ್ಜುನ್ ಜನ್ಯ ಅವರು ಬಿರುಗಾಳಿ, ಸಂಚಾರಿ, ಕೆಂಪೇಗೌಡ, ವರದನಾಯಕ, ವಿಕ್ಟರಿ, ವಜ್ರಕಾಯ, ಮುಕುಂದ ಮುರಾರಿ ಮುಂತಾದ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನು ಅವರು ಮಾಡಿದ್ದಾರೆ. 2012 ರಲ್ಲಿ ಅಲೆಮಾರಿ ಚಿತ್ರಕ್ಕೆ ಕರ್ನಾಟಕರಾಜ್ಯದಿಂದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಭಜರಂಗಿ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಮತ್ತು ಎಸ್ಐಐಎಮ್ಎ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ- ರೋಮಿಯೋ ಚಿತ್ರಕ್ಕೆ ಪಡೆದ ಪ್ರತಿಭಾವಂತ ಅರ್ಜುನ್ ಜನ್ಯಾ. ಅಲ್ಲದೆ, ಜನ್ಯ ಅವರು ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ನ ಜಡ್ಜುಗಳಲ್ಲೊಬ್ಬರು.

Leave A Reply

Your email address will not be published.