ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಇನ್ನೂ ಹಲವೆಡೆ ಅನಿರೀಕ್ಷಿತ ಮಳೆ । ಇಂದೇಕೋ ಸ್ವಲ್ಪ ಹಿತವೆನಿಸಿದೆ !

ಬಿಸಿಲಿನಿಂದ ಭಣಗುಡುತ್ತಿರುವ, ಕಾದ ಕಾವಲಿಯಂತೆ ಸುಡುತ್ತಿರುವ ನೆಲ, ಬೆವರಿ ಬೆವರಿ ಹೈರಾಣಾದ ಉಪ್ಪಿನಂಗಡಿ ವಿಟ್ಲ ಪುತ್ತೂರಿಗರಿಗೆ ಒಂದಷ್ಟು ತಂಪಾಗಿದೆ. ನೀರಿಗಾಗಿ ಹಂಬಲಿಸುತ್ತಿರುವ ನಮ್ಮ ಜೀವದ ಬೆಳೆ ಅಡಿಕೆಯ ಚಿಗುರೆಲೆಗಳಲ್ಲಿಯೂ ಮೂಡಿದೆ ಮಂದಹಾಸ.
ಇಂದು ಮುಂಜಾನೆ 5:45 ರ ಸುಮಾರಿಗೆ ಸಣ್ಣಗೆ ಪ್ರಾರಂಭವಾದ ತುಂತುರು ಹನಿಗಳು ಸ್ವಲ್ಪ ಹೊತ್ತು ಹನಿದು ನೀರು ಹರಿದು ಹೋಗುವಷ್ಟು ಬಂದಿದೆ.

ವಿಟ್ಲ ಮತ್ತು ಉಪ್ಪಿನಂಗಡಿಯಲ್ಲಿ ದೊಡ್ಡ ಮಳೆಯಾಗಿದೆ. ತೋಡುಗಳಲ್ಲಿ ನೀರು ಹರಿದು ಹೋಗುತ್ತಿದೆ. ಯಾವ ಮಳೆಯ ಭಯವೂ ಇಲ್ಲದೆ ಅಂಗಳದಲ್ಲಿ ಹಾಕಿದ ಅಡಿಕೆ ಎಲ್ಲಾ ಒದ್ದೆಯಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ವಿಟ್ಲ ಸುತ್ತ ಮುತ್ತ ಭಾರಿ ಮಳೆಯಾಗುತ್ತಿರುವುದು

ಪುತ್ತೂರು ಪಟ್ಟಣ ಹೃದಯ ಭಾಗದಲ್ಲಿ

ವಿಟ್ಲ ಸುತ್ತ ಮುತ್ತ ತೋಡಿನಲ್ಲಿ ಕೆಂಪು ನೀರು

ಉಪ್ಪಿನಂಗಡಿಯ ಅಂಗಡಿಗಳ ಮುಂದೆ ನೀರು ನಿಂತಿರುವುದು

ಬೆಳ್ತಂಗಡಿ, ಗುರುವಾಯನಕೆರೆಯ ಕಡೆ ಮಳೆಯಾಗಿಲ್ಲ. ಆದರೆ ಮೋಡ ಕವಿದ ವಾತಾವರಣವಿದೆ. ಮಳೆ ಬೀಳುವ ಲಕ್ಷಣ ಕಂಡುಬರುತ್ತಿದೆ.

ಮಂಗಳೂರು ಉಡುಪಿಯಲ್ಲಿ ಮಳೆಯಿಲ್ಲ. ದೂರದ ಆಂಧ್ರದಲ್ಲೂ ಹಲವು ಕಡೆ ಮಳೆ ಜೋರಾಗಿ ಬಿದ್ದಿದೆ.

ನರಿಮೊಗರು, ಸವಣೂರು, ಕಡಬದ ಕೆಲವು ಭಾಗಗಳಲ್ಲೂ ಅನಿರೀಕ್ಷಿತ ಮಳೆ ಬಿದ್ದಿದೆ. ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನಕ್ಕೆ ಒಂದಷ್ಟು ಹಾಯ್ ಎನಿಸಿದೆ. ಉಪ್ಪಿನಂಗಡಿ ವಿಟ್ಲದಲ್ಲಿ ಇನ್ನೂ ಮಳೆ ಹನಿಯುತ್ತಿದೆ.

ಶಿರ್ವ ಫಾದರ್ ಆತ್ಮಹತ್ಯೆ ಪ್ರಕರಣ । ಕಂಡೋರ ಹೆಂಡತಿಗೆ ಮೆಸೇಜು ಮಾಡಿದ್ದೇ ಪ್ರಾಣಕ್ಕೆ ಮುಳುವಾಯ್ತು ?!

0 thoughts on “ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಇನ್ನೂ ಹಲವೆಡೆ ಅನಿರೀಕ್ಷಿತ ಮಳೆ । ಇಂದೇಕೋ ಸ್ವಲ್ಪ ಹಿತವೆನಿಸಿದೆ !”

  1. Pingback: ಶಿರ್ವ ಫಾದರ್ ಆತ್ಮಹತ್ಯೆ ಪ್ರಕರಣ । ಕಂಡೋರ ಹೆಂಡತಿಗೆ ಮೆಸೇಜು ಮಾಡಿದ್ದೇ ಪ್ರಾಣಕ್ಕೆ ಮುಳುವಾಯ್ತು ?!

error: Content is protected !!
Scroll to Top
%d bloggers like this: