ಪುಣ್ಚಪ್ಪಾಡಿ ಸಾರಕರೆ ಶ್ರೀ ಧರ್ಮ ಅರಸು ಉಳ್ಳಾಕುಲು ದೈವಸ್ಥಾನದಲ್ಲಿ ಜಾತ್ರೆ ದಿನದ ತಂಬಿಲ

ಸವಣೂರು: ಪುಣ್ಚಪ್ಪಾಡಿ ಸಾರಕರೆ ಶ್ರೀ ಧರ್ಮ ಅರಸು ಉಳ್ಳಾಕುಲು ದೈವಸ್ಥಾನದಲ್ಲಿ ಜಾತ್ರೆ ದಿನದ ತಂಬಿಲ ಫೆ.15ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಪುಣ್ಚಪ್ಪಾಡಿ ಗ್ರಾಮದ ‘ಸಾರಕರೆ’ ಸಿರಿಸಮೃದ್ಧಿಯಿಂದ ಕೂಡಿದ ದೈವ ದೇವರುಗಳ ನೆಲೆ. ಇಂಥ ಪವಿತ್ರ ನೆಲದಲ್ಲಿ ‘ಶ್ರೀ ಧರ್ಮ ಅರಸು ಉಳ್ಳಾಕುಲು’ ಅನಾದಿ ಕಾಲದಿಂದ ನೆಲೆಗೊಂಡರು ಎಂಬ ನಂಬಿಕೆಯಿದೆ. ಶತಮಾನಗಳ ಇತಿಹಾಸ ಹೊಂದಿರುವ ‘ಶ್ರೀ ಧರ್ಮ ಅರಸು ಉಳ್ಳಾಕುಲು ದೈವಸ್ಥಾನದ’ ಬೃಹತ್ ಕಲ್ಲಮಾಡ ಶಿಥಿಲ ಗೊಂಡಿದ್ದು, ಅಜೀರ್ಣಾವಸ್ಥೆಯಲ್ಲಿತ್ತು. ಹಿಂದಿನ ಹಿರಿಯರಾಗಿದ್ದ ದಿ| ನಾರಾಯಣ ರೈ ಸಾರಕರೆ ಮತ್ತು ಅವರ ಮಕ್ಕಳು ಬಂಧುಗಳು ಈ ದೈವ-ದೇವರನ್ನು ನಂಬಿಕೊಂಡು ಬಂದವರಾಗಿದ್ದು, ನಂತರ ದಿ.ನಾರಾಯಣ ರೈ ಸಾರಕೆರೆಯವರ ಅಳಿಯ ನ್ಯಾಯವಾದಿ, ಮಹಾಬಲ ಶೆಟ್ಟಿ ಕೊಮ್ಮಂಡ ಅವರು ಶ್ರೀ ಜ್ಯೋತಿಷ್ಯ ಶಿರೋಮಣಿ ಮಾಡಾವು ವೆಂಕಟ್ರಮಣ ಭಟ್ ಅವರ ಮಾರ್ಗದರ್ಶನದಲ್ಲಿ, ಶ್ರೀ ವೇ|ಮೂ|ಅನಂತ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ‘ಚಿಂತನೆ’ ಮಾಡಿದ ಫಲವಾಗಿ, ಊರ-ಪರವೂರ ಹತ್ತು ಸಮಸ್ತರು ಬಂಧುಗಳ ನೆರವಿನೊಂದಿಗೆ ‘ಶ್ರೀ ಧರ್ಮ ಅರಸು ಉಳ್ಳಾಕುಲು’ ದೈವಸ್ಥಾನದ ಶಿಥಿಲಗೊಂಡಿರುವ ಬೃಹತ್ ಕಲ್ಲಮಾಡವನ್ನು ಪುನಃ ನವೀಕರಣಗೊಳಿಸಿ ದೈವಗಳಿಗೆ ಸಮರ್ಪಣೆಯನ್ನು ಮಾಡುತ್ತಿದ್ದಾರೆ.

2011ನೇ ಫೆ.15ರಿಂದ 17ರ ವರೆಗೆ ‘ಶ್ರೀ ಧರ್ಮ ಅರಸು ಉಳ್ಳಾಕುಲು’ ದೈವಸ್ಥಾನದ ಪುನಃ ನವೀಕರಣಗೊಂಡ ಕಲ್ಲ ಮಾಡದ ದೈವಾರ್ಪಣೆ ಮತ್ತು ಶ್ರೀ ಧರ್ಮಅರಸು ಉಳ್ಳಾಕುಲು ದೈವಗಳ ಹಾಗೂ ಪರಿವಾರ ದೈವಗಳಾದ ಕಿನ್ನಿಮಾಣಿ ದೈವ, ಪೂಮಾಣಿ ದೈವ, ಮಹಿಷಂದಾಯ, ಕೊಡಮಣಿತ್ತಾಯ ದೈವ, ಗುಳಿಗ ದೈವಗಳ ಧರ್ಮನಡಾವಳಿಯು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದಿದೆ.

ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ನೋಟರಿ ನ್ಯಾಯವಾದಿ, ಮಹಾಬಲ ಶೆಟ್ಟಿ ಕೊಮ್ಮಂಡ, ಸಾರಕರೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಹಾಬಲ ಶೆಟ್ಟಿ ಕೊಮ್ಮಂಡ
Leave A Reply

Your email address will not be published.