ರಚಿತಾ ರಾಮ್ ಲಿಪ್ಪು-ಟು ಲಿಪ್ಪು ದೃಶ್ಯದಲ್ಲಿ । ಇಂತಹ ಪಾತ್ರ ಮಾಡಲ್ಲ ಅಂತ ಪ್ರಾಮಿಸ್ ಮಾಡಿದ್ದಳು । ಎಲ್ಲ ಬಿಗ್ ಬ್ರೀಫ್ ಕೇಸ್ ಮಹಿಮೆ ಬಾಸ್ !

ನಿಮಗೆ ನೆನಪಿರಬಹುದು : ಕೆಲವೇ ತಿಂಗಳುಗಳ ಹಿಂದೆ ಉಪೇಂದ್ರ ಅಭಿನಯಿಸಿದ ಐ ಲವ್ ಯೂ ಸಿನಿಮಾ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಐ ಲವ್ ಯು ಚಿತ್ರದ ನಟಿ ರಚಿತಾ ರಾಮ್ ವಿರುದ್ಧ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರು ಗರಂ ಆಗಿದ್ದರು. ಯಾಕೆಂದರೆ ರಚಿತಾ ರಾಮ್ ಅವರು ಆ ಚಿತ್ರದಲ್ಲಿ ಮೈಚಳಿ ಕೊಡವಿಕೊಂಡು ನಟಿಸಿದ್ದರು. ಅಷ್ಟೇ ಅಲ್ಲದೆ, ಅವರ ಈ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅವರ ಅಭಿಮಾನಿ ಬಳಗದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.

ಅದಕ್ಕಿಂತ ಹೆಚ್ಚಾಗಿ ಅವರ ಸ್ವಂತ ತಂದೆ ” ನಾನು ನನ್ನ ಮಗಳನ್ನು ಈ ರೀತಿಯಾಗಿ ನೋಡಲು ಇಚ್ಛಿಸುವುದಿಲ್ಲ” ಎಂದು ಹೇಳಿಕೆ ನೀಡಿದ್ದರು ಹೇಳಿಕೆ ಬೆನ್ನಲ್ಲೇ ರಚಿತಾರಾಮ್ ಕೊಡಗಟ್ಟಲೆ ಕಣ್ಣೀರು ಕೆಡವಿಕೊಂಡು ಇನ್ನು ಮುಂದೆ ಇಂತಹ ಪಾತ್ರ ಮಾಡುವುದಿಲ್ಲ ನನ್ನನ್ನು ಕ್ಷಮಿಸಿಬಿಡಿ ಎಂದು ಗೋಳೋ ಅಂತ ಪತ್ರಿಕಾಗೋಷ್ಠಿ ಕರೆದು ಭೋರ್ಗರೆದಿದ್ದಳು. ಆಗ ಆಕೆಯ ಅಭಿಮಾನಿಗಳು ಕೂಡ ಬೇಜಾರು ಮಾಡಿಕೊಂಡು ಕ್ಷಮಿಸಿದ್ದರು.

ಈಗ ಮತ್ತೆ ಅಂತಹುದೇ ಪಾತ್ರದಲ್ಲಿ ರಚಿತಾ ನಟಿಸಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಬ್ಯಾನರಿನಲ್ಲಿ ರಕ್ಷಿತಾಳ ತಮ್ಮರಾಣಾ ನಾಯಕನಾಗಿ ನಟಿಸಿರುವ ಏಕ್ ಲವ್ ಯಾ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಜ್ವರದ ಥರ ಹರಡುತ್ತಿದೆ. ರಚಿತಾ ಸಿಗರೇಟ್ ಸೇದಿ, ಹೀರೋಗೆ ಲಿಪ್ಪು-ಟು ಲಿಪ್ಪು ಕಿಸ್ ಕೊಟ್ಟ ದೃಶ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ ಇನ್ನಷ್ಟು ಸ್ಪೋಟಕ ದೃಶ್ಯಗಳಿವೆ ಎಂದು ಹೇಳಲಾಗುತ್ತಿದೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ ಎಂದು ಖುದ್ದು ಪ್ರೇಮ್ ಹೇಳಿದ್ದಾರೆ.

ಈ ಹಿಂದೆ ಇಂತಹ ಪಾತ್ರ ಮಾಡಲ್ಲ, ಅಪ್ಪನಿಗೆ ನೋವು ಮಾಡಲ್ಲ ಅಂತ ಕಣ್ಣೀರ ಬರ್ಸ ಸುರಿಸಿದ್ದ ರಚಿತಾ ರಾಮ್ ಮತ್ತೆ ಯಾಕೆ ಇದಕ್ಕೆ ಒಪ್ಪಿಕೊಂಡರು ?

ಉತ್ತರಕ್ಕಾಗಿ ನೀವು ಜಾಸ್ತಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಎಲ್ಲವೂ ಭಾರವಾದ ಬ್ರೀಫ್ ಕೇಸಿನ ಮಹಿಮೆ ! ದುಡ್ಡು ಎಲ್ಲವನ್ನು ಮ್ಯಾನೇಜ್ ಮಾಡುತ್ತದೆ. ಮತ್ತೆ ಅಪ್ಪ ಬೇಜಾರು ಮಾಡಿಕೊಂಡರೆ,

ಇದ್ದೇ ಇದ್ಯಲ್ಲ ಇನ್ನೊಂದು ಪತ್ರಿಕಾಗೋಷ್ಠಿ, ಮತ್ತಷ್ಟು ಕಣ್ಣೀರು, ಕ್ಷಮಿಸಲು ಅಭಿಮಾನಿಗಳು ಮತ್ತು ರಿಪೋರ್ಟ್ ಮಾಡಲು ನಾವು !

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿದ್ದು, ಟೀಸರ್ ಆರಂಭದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಲಾಗಿದೆ.ಇದೊಂದು ನಾಟಕ ಬಾಕಿ ಇತ್ತು !

Leave A Reply