ನೋಡಾ…ನೋಡಾ… ಕೋಡಿಂಬಾಡಿ ಉಗ್ಗಪ್ಪ ಶೆಟ್ರ ಅಂಗಡಿಯಲ್ಲಿ ಈಗ್ಲೂ ಇದೆ ಗೋಲಿ ಸೋಡಾ !

ಲೇಖಕರು : ಆದರ್ಶ್ ಶೆಟ್ಟಿ ಕಜೆಕ್ಕಾರ್, ಉಪ್ಪಿನಂಗಡಿ.

ಬೇಸಿಗೆ ಕಾಲ ಬಂತೆಂದರೆ ಸಾಕು ಜನರು ತಂಪು ಪಾನೀಯದ ಮೊರೆ ಹೋಗುವುದು ಸರ್ವೇ ಸಾಮಾನ್ಯ ಸಂಗತಿ. ಆಧುನಿಕ ಕಾಲದಲ್ಲಿ ವಿವಿಧ ಬಗೆಯ ತಂಪು ಪಾನೀಯಗಳು ಮಾರುಕಟ್ಟೆ, ಅಂಗಡಿಗಳಲ್ಲಿ ಎಲ್ಲೆಡೆ ಕಾಣಸಿಗುತ್ತಿದೆ. ಇವುಗಳಿಗೆ ರಾಸಾಯನಿಕ, ಬಣ್ಣಗಳ ಮಿಶ್ರಣದಿಂದ ಆರೋಗ್ಯಕ್ಕೂ ಅತೀ ಅಪಾಯಕಾರಿ ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ.

ನಮ್ಮ ಹಿರಿಯರ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗೋಲಿ ಸೋಡಾಗಳು ಆಧುನಿಕತೆಯ ಸೋಗಿನಲ್ಲಿ ಇಂದು ಮರೆಯಾಗುತ್ತಿದೆ. ಗೋಲಿ ಸೋಡಾವನ್ನು ತೆರೆಯುವುದೇ ಒಂದು ಮಜಾವೆಂಬಂತಿತ್ತು. ಆರೋಗ್ಯಕ್ಕೂ ಉತ್ತಮವೆನಿಸುವ ಗ್ಯಾಸ್ ಟ್ರಬಲ್, ಅಜೀರ್ಣದಂತಹ ಸಮಸ್ಯೆಗಳಿಗೆ ರಾಮಬಾಣವೆನಿಸುವ ಮತ್ತು ಬಹಳ ಹಿತಕರವಾಗಿರುವ ಗೋಲಿ ಸೋಡಾಗಳ ಬಗ್ಗೆ ನವ ಪೀಳಿಗೆಗೆ ಅರಿವಿರಲು ಸಾಧ್ಯವಿಲ್ಲ. ಆಧುನಿಕ ಯುಗದ ಥಳುಕು ಬಳುಕು ಜೀವನ ಶೈಲಿಗೆ ಮಾರು ಹೋದ ಜನರಿಗೂ ಗೋಲಿ ಸೋಡಾದ ಬಗ್ಗೆ ತಾತ್ಸಾರವಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಅಲ್ಲೋ ಇಲ್ಲೋ ಎಂಬಂತಹ ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ಕಾಣಸಿಗುವ ಈ ಗೋಲಿ ಸೋಡಾಗಳು ಇಂದು ಅಳಿವಿನಂಚಿಗೆ ತಲುಪಿರುವ ಹೊತ್ತಿನಲ್ಲಿ ಕಳೆದ 45 ವರ್ಷಗಳಿಂದ ಉಪ್ಪಿನಂಗಡಿ ಸಮೀಪದ ಗಾಂಧೀ ಪಾರ್ಕ್ ನಲ್ಲಿ ಗೋಲಿ ಸೋಡಾದ ವ್ಯಾಪಾರವನ್ನು ಆರಂಭಿಸಿ, ಬಳಿಕ ಪ್ರಸ್ತುತ ಇದೀಗ ಕೋಡಿಂಬಾಡಿಯ ಮಹಿಷಮರ್ದಿನಿ ದೇವಾಲಯದ ದ್ವಾರದ ಬಳಿಯಿರುವ ತನ್ನ ಉಗ್ಗಪ್ಪ ಶೆಟ್ಟಿ ಸ್ಟೋರ್ ನಲ್ಲಿ ಉಗ್ಗಪ್ಪ ಶೆಟ್ಟಿಯವರು ಗೋಲಿ ಸೋಡಾದ ವ್ಯಾಪಾರವನ್ನು ಮುಂದುವರಿಸಿದ್ದಾರೆ.

ಈ ಗೋಲಿ ಸೋಡಾದ ಬಾಟಲಿಯು ಕೂಡ ಸ್ಥಳೀಯವಾಗಿ ಎಲ್ಲೂ ದೊರಕದೆ ಇರುವುದರಿಂದ ಈ ಬಾಟಲಿಯನ್ನು ಪಡೆಯಬೇಕಾದರೆ ದೂರದ ತಮಿಳುನಾಡನ್ನು ಅವಲಂಬಿಸಬೇಕಾದ ಅನಿವಾರ್ಯತೆ ಅಂಗಡಿ ಮಾಲಕರಾದ ಉಗ್ಗಪ್ಪ ಶೆಟ್ಟಿಯವರಿಗಿದೆ. ಆದರೂ ತನ್ನ ಹಿರಿಯರ ಕಾಲದಿಂದ ನಡೆಸಿಕೊಂಡು ಬಂದ ಗೋಲಿ ಸೋಡಾ ವ್ಯಾಪಾರವನ್ನು ನಷ್ಟವಾಗಲಿ ಅಥವಾ ಲಾಭವಾಗಲಿ ಇದನ್ನು ನಿಲ್ಲಿಸದೆ ಇಂದಿಗೂ ಮುನ್ನಡೆಸುತ್ತಾ ಬಂದಿದ್ದಾರೆ.

ಕೋಡಿಂಬಾಡಿಯ ವಿನಾಯಕ ನಗರದ ಮಹಿಷಮರ್ದಿನಿ ದೇವಾಲಯದ ದ್ವಾರದ ಅಣತಿ ದೂರದಲ್ಲಿ ಕಾಣಸಿಗುವ ಉಗ್ಗಪ್ಪ ಶೆಟ್ಟಿಯವರ ಅಂಗಡಿಯಲ್ಲಿ ಗೋಲಿ ಸೋಡಾ, ಸೋಡಾ, ಶರಬತ್ತ್, ಲಿಂಬೆ ಶರಬತ್ತ್ ನಂತಹ ಪಾನೀಯಗಳು ಅತ್ಯಂತ ಸಮದಾನಕರ ಬೆಲೆಯಲ್ಲಿ ಇಂದಿಗೂ ದೊರಕುತ್ತಿದೆ. ಈ ಗೋಲಿ ಸೋಡಾಕ್ಕೆ ಅನಿಲವನ್ನು ತುಂಬಿಸುವುದು ಒಂದು ರೀತಿಯಲ್ಲಿ ಅಪಾಯದ ಕೆಲಸವಾಗಿದ್ದು, ಒಂದು ಬಾಟಲ್ ಗೆ ಇಂತಿಷ್ಟೇ ಅನಿಲವನ್ನು ತುಂಬಿಸಬೇಕೆಂಬ ನಿಯಮವಿದೆ. ಕೊಂಚ ಯಾಮಾರಿದರೂ ಬಾಟಲ್ ಒಡೆದು ಅನಾಹುತ ಸಂಭವಿಸುವ ಸಾಧ್ಯತೆಗಳು ಕೂಡ ಹೆಚ್ಚಿರುವುದರಿಂದ ಬಹಳ ಎಚ್ಚರ ವಹಿಸಬೇಕಾದ ಅಗತ್ಯವೂ ಅಂಗಡಿ ಮಾಲಕರಿಗಿದೆ.

ಇಷ್ಟೆಲ್ಲಾ ಸವಾಲುಗಳ ಮಧ್ಯೆಯೂ ಗೋಲಿ ಸೋಡಾ ವ್ಯಾಪಾರವನ್ನು ನಿತ್ಯನಿರಂತರವಾಗಿ ಮುಂದುವರಿಸುತ್ತಾ ಬಂದಿರುವ ಉಗ್ಗಪ್ಪ ಶೆಟ್ಟಿಯವರ ಸಾರ್ಥಕತೆಯ ಮತ್ತು ಪರಿಶ್ರಮದ ಬದುಕು ಕೂಡ ಅಡಕವಾಗಿದೆ. ಗೋಲಿ ಸೋಡಾ ತಯಾರಿಸಿ ಬದುಕಿನ ಬಂಡಿ ಎಳೆಯುತ್ತಿದ್ದ ಅದೆಷ್ಟೋ ಕುಟುಂಬಗಳು ಈ ಹಿಂದೆ ಕಾಣಸಿಗುತ್ತಿದ್ದವು.

ಆದರೆ ಆಧುನಿಕ ಪಾನೀಯಗಳಿಂದ ಮೂಲ ವೃತ್ತಿ ಬಿಡಬೇಕಾದ ಅನಿವಾರ್ಯತೆಯೂ ಕೆಲ ಅಂಗಡಿ ಮಾಲಕರಿಗೆ ಎದುರಾಗಿದೆಯೆಂದರೂ ತಪ್ಪಾಗಲಾರದು. ಏನೇ ಅಗಲಿ ಸಮಸ್ಯೆ, ಸವಾಲುಗಳ ಮಧ್ಯೆಯೂ ಪುರಾತನ ವೃತ್ತಿಯನ್ನು ನಡೆಸಿಕೊಂಡು ಬರುತ್ತಿರುವ ಉಗ್ಗಪ್ಪ ಶೆಟ್ಟಿಯವರಿಗೊಂದ ಹ್ಯಾಟ್ಸಾಪ್ ಅನ್ನಲೇಬೇಕು.

ಲೇಖಕರು : ಆದರ್ಶ್ ಶೆಟ್ಟಿ ಕಜೆಕ್ಕಾರ್, ಉಪ್ಪಿನಂಗಡಿ.

0 thoughts on “ನೋಡಾ…ನೋಡಾ… ಕೋಡಿಂಬಾಡಿ ಉಗ್ಗಪ್ಪ ಶೆಟ್ರ ಅಂಗಡಿಯಲ್ಲಿ ಈಗ್ಲೂ ಇದೆ ಗೋಲಿ ಸೋಡಾ !”

  1. Pingback: ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಕುದ್ಮಾರಿನ ಅಬ್ದುಲ್ಲಾ ಅಂಗಡಿಗೆ ಬೆಂಕಿ! - ಹೊಸ ಕನ್ನಡ

  2. Pingback: ಅಡ್ಕಾರು -ಗುಂಡ್ಯಡ್ಕ : ಅಬ್ಬಾಸ್ ಫೈಝಿ ಅವರ ಮನೆಯಿಂದ ಲಕ್ಷಾಂತರ ನಗದು ಕಳವು - ಹೊಸ ಕನ್ನಡ

  3. Pingback: ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಕೆ.ಸುರೇಂದ್ರನ್ ಆಯ್ಕೆ - ಹೊಸ ಕನ್ನಡ

Leave a Reply

error: Content is protected !!
Scroll to Top
%d bloggers like this: