ಕುದ್ಮಾರು : ಅತ್ಯಾಚಾರ ಯತ್ನ ಆರೋಪಿಯ ಅಂಗಡಿಗೆ ಬೆಂಕಿ : ಮೂವರ ಬಂಧನ

ಅತ್ಯಾಚಾರ ಯತ್ನ ಆರೋಪಿಯ ಅಂಗಡಿಗೆ ಬೆಂಕಿ: ಮೂವರ ಬಂಧನ

ಸುಳ್ಯ: ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಬೆಳ್ಳಾರೆ ಪೊಲೀಸರ ವಶದಲ್ಲಿರುವ ಕುದ್ಮಾರು ಗ್ರಾಮದ ಅಬ್ದುಲ್ಲಾನ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದು ಪಡೆದುಕೊಂಡಿದ್ದಾರೆ.

2 ಮದುವೆಯಾಗಿ 6 ಮಕ್ಕಳಿರುವ ಅಬ್ದುಲ್ಲಾ ಅವರು 5ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು,ಫೋಕ್ಸೋ ಕಾಯ್ದೆಯ ಅನ್ವಯ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈತನಿಗೆ ಕುದ್ಮಾರು ರಸ್ತೆ ಬದಿಯಲ್ಲಿ ಅಂಗಡಿಯೊಂದಿದ್ದು, ಇದಕ್ಕೆ ಫೆ.14 ರಂದು ಬೆಂಕಿ ಹಚ್ಚಿ ಸಂಪೂರ್ಣ ಭಸ್ಮ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೂವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.