‘ ಒಂದು ಗಂಟೆಯ ಕಥೆ ‘ ಚಿತ್ರದ ಟ್ರೈಲರ್ ಯೂ ಟ್ಯೂಬಿನಲ್ಲಿ ಇಂದು ಬಿಡುಗಡೆ

‘ ಒಂದು ಮುತ್ತಿನ ಕಥೆ ‘ ಆಯಿತು. ‘ ಒಂದು ಮೊಟ್ಟೆಯ ಕತೇ’ ನೂ ಹೇಳಿ ಆಯಿತು. ಈಗ ನಿರ್ದೇಶಕರು ‘ ಒಂದು ಗಂಟೆಯ ಕಥೆ ‘ ಹೇಳಲು ಹೊರಟಿದ್ದಾರೆ. ಗಂಟೆ ಅಂದ್ರೆ ಇಲ್ಲಿ ಏನು ? ಸಮಯ ಸೂಚಕ ಗಂಟೇನಾ? ಅಥವಾ ‘ ಢಣ್ ಢಣ್ ‘ ಗಂಟೇನಾ ? ಅಥವಾ ಡಬ್ಬಲ್ ಮೀನಿಂಗ್ ” ಗಣ ಗಣ ” ಗಂಟೇನಾ ? ನಮಗೆ ಗೊತ್ತಿಲ್ಲ ! ಗಂಟೆ ಆಡಲು ಶುರುವಾದರೆ ಸ್ವಲ್ಪ ಕ್ಲೂ ಸಿಗಬಹುದು. ಇವತ್ತು ಚಿತ್ರದ ಟ್ರೈಲರ್ ಯೂ ಟ್ಯೂಬ್ ನಲ್ಲಿ ಬಿಡುಗಡೆ. ಹಾಗಾಗಿ ಚಿತ್ರದ ಹೂರಣದ ಬಗ್ಗೆ ಹೆಚ್ಚು ತಿಳಿಯಲಿದೆ.

ನೈಜ ಘಟನೆ ಆಧಾರಿತ ‘ ಒಂದು ಗಂಟೆಯ ಕಥೆ ‘ ಸಿನಿಮಾ ಟ್ರೈಲರ್ ಇತ್ತೀಚೆಗಷ್ಟೇ ನಟ ದುನಿಯಾ ವಿಜಯ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಪ್ರಧಾನ ಚಿತ್ರ.
ಹಲವು ತಿರುವುಗಳಿರುವ ಈ ಚಿತ್ರದಲ್ಲಿ ಸಾಲು ಸಾಲು ಕಾಮಿಡಿ ಕ್ಯಾರೆಕ್ಟರುಗಳಿದ್ದಾರೆ. ಮಿಮಿಕ್ರಿ ಗೋಪಿ ‘ ಮುಂಡಾ ಮೊಚ್ತು ” ಅನ್ನುತ್ತಾ ಬ್ರಹ್ಮಾಂಡ ಗುರೂಜಿಯ ಹೋಲಿಕೆಯ ಪಾತ್ರ ಮಾಡಿದ್ದಾರೆ. ಸರ್ವ ಗುರುಗಳ ಮಹಾ ಗುರು ನಿತ್ಯಾನಂದ ಮಹಾಸ್ವಾಮಿ ಇದ್ದಾರೆ. ” ಸರ್ವಂ ತೈಲ ಮಯಂ ” ಗುರೂಜಿ ಇದ್ದಾರೆ. ಮಜಾ ಟಾಕೀಸ್ ಖ್ಯಾತಿಯ ರೆಮೋ ಇದ್ದಾರೆ. ಕೇರಳ, ಆಂಧ್ರಪ್ರದೇಶ, ಮಡಿಕೇರಿ ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ.

ಉಳಿದಂತೆ ಅಜಯ್ ರಾಜ್ (ನಂಜುಂಡ), ಶನಾಯ ಕಾಟ್ವೆ, ಸ್ವಾತಿ ಶರ್ಮ, ಪುಟ್ಟಗೌರಿ ಖ್ಯಾತಿಯ ಚಂದ್ರಕಲಾ, ಚಿದಾನಂದ್, ಪ್ರಶಾಂತ್ ಸಿದ್ಧಿ, ಯಶವಂತ್ ಸರ್​ದೇಶಪಾಂಡೆ, ನಾಗೇಂದ್ರ ಷಾ, ಸಿಲ್ಲಿ-ಲಲ್ಲಿ ಆನಂದ್, ಕುಳ್ಳ ಸೋಮು, ರುಕ್ಮಿಣಿ ಸೇರಿ ಕಲಾವಿದರ ಬಳಗವೇ ಇದೆ. ಒಟ್ಟು130 ಮಂದಿ ಕಲಾವಿದರು ನಟಿಸಿದ್ದಾರೆ.
ದ್ವಾರ್ಕಿ ರಾಘವ್ ಚಿತ್ರಕತೆ, ಸಾಹಿತ್ಯ ಬರೆಯುವ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಿರ್ಮಾಪಕ ಕಶ್ಯಪ್ ದಾಕೋಜು. ಚಿತ್ರಕ್ಕೆ ಸೂರ್ಯಕಾಂತ್ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಸಂಗೀತ, ಗಣೇಶ್ ಸಂಕಲನವಿದೆ.

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು !

Leave A Reply