ಐತಿಹಾಸಿಕ ಮಿನುಂಗೂರು ದುರ್ಗಾಪರಮೇಶ್ವರಿ ದೇವಳದ ಜಾತ್ರೋತ್ಸವ ಸಂಪನ್ನ

0 18

ಸುಳ್ಯ : ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಜಾತ್ರೋತ್ಸವ ಸಂಪನ್ನಗೊಂಡಿದೆ. ಜಾತ್ರೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ದೇವಾಲಯದ ಸಂಪ್ರದಾಯದಂತೆ ದೇವಿಯ ಮೂಲಸ್ಥಾನವಾದ ಮಿನುಂಗೂರು ಮಲೆಗೆ ತೆರಳಿ ಫೆ.9ರಂದು ಪೂಜೆ ಸಲ್ಲಿಸಲಾಯಿತು.

ಇಲ್ಲಿ ಪೂಜೆ ನಡೆಸಿದ ಬಳಿಕ ತರುವ ತೀರ್ಥವನ್ನು ದೇವಿಗೆ ಅಭಿಷೇಕ ಮಾಡಲಾಗುತ್ತದೆ. ಫೆ.11ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀಕೃಷ್ಣ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ನಡೆಯಿತು.

ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.ಸಂಜೆ ಇತರ ವೈಧಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ತೆಲಿಪಾಲೆ ಖ್ಯಾತಿಯ ಕಲಾವಿದರಿಂದ ತುಳು ಹಾಸ್ಯ ಪ್ರಹಸನ ನಡೆಯಿತು.

ಫೆ.12 ರಂದು ರಾತ್ರಿ ನೃತ್ಯ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ ನಡೆಯಿತು.

ನಂತರ ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಪ್ರಸಾದ ವಿತರಣೆ ನಡೆಯಿತು.

Leave A Reply