ಸಂಘಟನಾ ಚತುರನ ಮುಡಿಗೆ ಇನ್ನೊಂದು ಗರಿ| ಸುರೇಶ್ ರೈ ಸೂಡಿಮುಳ್ಳು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಜ.26 ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಪ್ರವೀಣ್ ಚೆನ್ನಾವರ

ಸವಣೂರು : ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ 2019-20 ನೇ ಸಾಲಿನ ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಸುರೇಶ್ ರೈ ಸೂಡಿಮುಳ್ಳು ಅವರು 2019-20ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಪ್ರಶಸ್ತಿ ಪ್ರದಾನ ಸಮಾರಂಭವು ಜ.26ರಂದು ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆಯಲಿದೆ.ನ.1 ರಂದು ಕನ್ನಡ ರಾಜ್ಯೋತ್ಸವದಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಪ್ರಶಸ್ತಿ ಘೋಷಣೆ ಹಾಗೂ ಪ್ರದಾನ ಸಮಾರಂಭ ನಡೆದಿರಲಿಲ್ಲ.ಜ.25ರಂದು ಜಿಲ್ಲಾದಿಕಾರಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದರು.

ಸುರೇಶ್ ರೈ ಸೂಡಿಮುಳ್ಳು ಅವರು 2004-05 ನೇ ಸಾಲಿನಲ್ಲಿ ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿದ್ದ ಅವಽಯಲ್ಲಿ 572 ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ರಾಜ್ಯದ ಗಮನಸೆಳೆದಿದ್ದರು.ಈ ಅವಽಯಲ್ಲಿ ಸವಣೂರು ಯುವಕ ಮಂಡಲಕ್ಕೆ ಜಿಲ್ಲಾ ಅತ್ಯುತ್ತಮ ಸಾಂಘಿಕ ಪ್ರಶಸ್ತಿ ಹಾಗೂ ಸುರೇಶ್ ರೈ ಅವರಿಗೆ ವೈಯಕ್ತಿಕ ಜಿಲ್ಲಾ ಯುವ ಪ್ರಶಸ್ತಿ ಮತ್ತು ಯುವಕ ಮಂಡಲಕ್ಕೆ ಕರ್ನಾಟಕ ಸರಕಾರದ ರಾಜ್ಯ ಅತ್ಯುತ್ತಮ ಸಾಂಘಿಕ ಪ್ರಶಸ್ತಿ,ಸುರೇಶ್ ರೈ ಅವರಿಗೆ ರಾಜ್ಯ ಯುವ ಪ್ರಶಸ್ತಿ ದೊರಕಿತ್ತು.

2007ರಲ್ಲಿ ಬೆಂಗಳೂರಿನ ಕುಂಬಳಗೋಡಿನಲ್ಲಿ ನಡೆದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತೃಭೂಮಿ ಸಂಸ್ಥೆಯಿಂದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ದೊರಕಿತ್ತು.

ನೆಲ್ಯಾಡಿ ಅಮ್ಮುಂಜೆ ನಾರಾಯಣ ರೈ ಮತ್ತು ರಾಮಕ್ಕೆ ದಂಪತಿಯ ಪುತ್ರನಾಗಿ 1-7-1971ರಂದು ಜನಿಸಿದರು.ಪುಣ್ಚಪ್ಪಾಡಿ ,ಸವಣೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,ಸವಣೂರು ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು.ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಕ್ಕೆ ಸೇರಿ ನಂತರ,ಜೀಪು ಚಾಲಕನಾಗಿ ಸವಣೂರಿನಲ್ಲಿ ವೃತ್ತಿ ಜೀವನ ಆರಂಬಿಸಿದರು.

2008ರಲ್ಲಿ ನರಿಮೊಗರು ಜೆಸಿಐನ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.ಈ ಅವಧಿಯಲ್ಲಿ ವಲಯ ಜೂನಿಯರ್ ಜೇಸಿ ಸಮ್ಮೇಳನ ಜೇನುಗೂಡು ಕಾರ್ಯಕ್ರಮ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದರು.ಈ ಅವಧಿಯಲ್ಲಿ ನರಿಮೊಗರು ಜೆಸಿಐಗೆ ಅತ್ಯುತ್ತಮ ಘಟಕ ಪ್ರಶಸ್ತಿ,ಜೆಜೆಸಿ ಸಮ್ಮೇಳನದಲ್ಲಿ ಉತ್ತಮ ಘಟಕ ಪ್ರಶಸ್ತಿ,ಜೆಸಿರೇಟ್ ಸಮ್ಮೇಳನದಲ್ಲೂ ಉತ್ತಮ ಜೇಸಿರೇಟ್ ಘಟಕ,ವ್ಯವಹಾರ ವಿಭಾಗದಲ್ಲಿ 4ನೇ ಸ್ಥಾನ,ವಲಯ ಸಮ್ಮೇಳನದಲ್ಲಿ ಅಂಕಗಳ ಆದಾರದಲ್ಲಿ ರಾಷ್ಟ್ರೀಯ ಪ್ರಶಸ್ತಿ,ಸಮುದಾಯ ಅಭಿವೃದ್ದಿ ಅತ್ಯುತ್ತಮ ಘಟಕ ಸೇರಿದಂತೆ 20 ಕ್ಕೂ ಅಧಿಕ ಪ್ರಶಸ್ತಿಗಳು ದೊರಕಿತ್ತು.

ಯುವಕ ಮಂಡಲದ ಕಾರ್ಯ ಚಟುವಟಿಕೆಗಳ ಮೂಲಕ ಸಂಘಟನಾತ್ಮಕವಾಗಿ ತೊಡಗಿಸಿಕೊಂಡ ಇವರು ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿ ತಾಲೂಕು ಯುವಜನ ಮೇಳಗಳಲ್ಲಿ ಯುವ ಪ್ರಶಸ್ತಿಗಳನ್ನು ಒಕ್ಕೂಟದ ವತಿಯಿಂದ ನೀಡಿ ಹಲವು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದರು.ಅಲ್ಲದೇ ತಾಲೂಕು ಯುವಜನ ಮೇಳಗಳಲ್ಲಿ ಭಾಗವಹಿಸಿದವರಿಗೆ ನಗದು ಪ್ರೋತ್ಸಾಹಧನ ನೀಡುವ ಮೂಲಕ ರಾಜ್ಯದಲ್ಲಿಯೇ ದಾಖಲೆಯ ಸ್ಪಽಗಳು ತಾಲೂಕು ಯುವಜನ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು.

ಜಿಲ್ಲಾ ಯುವಜನ ಒಕ್ಕೂಟದ ಕಾರ್ಯದರ್ಶಿಯಾದ ಬಳಿಕ ಜಿಲ್ಲಾಧ್ಯಾಂತ ಯುವಕ ಮಂಡಲಗಳ ನೊಂದಾವಣೆ ಮಾಡಿಸಿದ್ದರು.ಬಳಿಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾದ ಬಳಿಕ ಪುತ್ತೂರಿನ ಸುದಾನ ಶಾಲೆಯಲ್ಲಿ ರಾಜ್ಯಮಟ್ಟದ ಯುವಜನ ಮೇಳ ಆಯೋಜಿಸಿ ರಾಜ್ಯದ30 ಜಿಲ್ಲೆಗಳಿಂದ ಸುಮಾರು ಆರು ಸಾವಿರ ಕಲಾವಿದರನ್ನು ಸೇರಿಸಿ ದಾಖಲೆಯಾಗಿತ್ತು.
ಅಲ್ಲದೆ 2019-20 ನೇ ಸಾಲಿನ ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಸ್ವೀಕರಿಸಿದ್ಧರು.

2019 ಜನವರಿಯಲ್ಲಿ ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ರಾಜ್ಯ ಯುವ ಸಮ್ಮೇಳನ ರಾಜ್ಯ ಯುವ ಮತ್ತು ಸಾಂಘಿಕ ಪ್ರಶಸ್ತಿ ಪ್ರದಾನ ,ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದರು.

ಅಲ್ಲದೆ ಸವಣೂರಿನಲ್ಲಿ ಹಲವು ತಾಲೂಕು,ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸುವಲ್ಲಿಯೂ ಇವರ ಪಾತ್ರ ಮಹತ್ವದ್ದು.

ಸವಣೂರು ಎಸ್.ಜೆ.ಸಿ.ಯ ಅಧ್ಯಕ್ಷರಾಗಿ ,ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ, ಸವಣೂರು ಹಿಂದೂಜಾಗರಣ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸವಣೂರು ವರ್ತಕರ ಸಂಘದ ಕಾರ್ಯದರ್ಶಿಯಾಗಿ,ಪುತ್ತೂರು ತಾಲೂಕು ದ್ವನಿ,ಬೆಳಕು ಮತ್ತು ಶಾಮಿಯಾನ ಒಕ್ಕೂಟದ ಅಧ್ಯಕ್ಷರಾಗಿ,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾಗಿ,ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಗೌರವ ಸಲಹೆಗಾರರಾಗಿ,ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: