ಪತ್ರಿಕಾ ಪ್ರಕಟಣೆ, ಅಪ್ಡೇಟ್ | ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿನ ಆಸಿಡ್ ದಾಳಿಯ ಪ್ರಕರಣ

ದಿನಾಂಕ 23-01-2020 ರಂದು ಸಮಯ ಸುಮಾರು 16-00 ಗಂಟೆಗೆ ಕಡಬ ಪೊಲೀಸ್ ಠಾಣಾ ವ್ಯಾಫ್ತಿಯ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿನ ನಿವಾಸಿಯಾಗಿರುವ ಪ್ರಕರಣದ ಫಿರ್ಯಾಧಿರವರ ವಾಸದ ಮನೆಯ ಅಂಗಳಕ್ಕೆಅದೇ ಗ್ರಾಮದ ಸದರಿಯವರ ಸಂಬಂಧಿ ಆರೋಪಿ ಜಯಾನಂದ ಎಂಬಾತನು ಅಕ್ರಮ ಪ್ರವೇಶ ಮಾಡಿ ಅವ್ಯಾಚ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿದೆ.

g

ನಂತರ ಆರೋಪಿಯು ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳ ತೆಗೆದು ಅದರಲ್ಲಿದ್ದ ಆಸಿಡ್ ಅನ್ನು ಪಿರ್ಯಾದಿಯ ಮುಖಕ್ಕೆ ಮನೆಯ ಹೊರಗಡೆಯಿಂದ ಕಿಟಕಿಯ ಮೂಲಕ ಎರಚಿದ್ದು ಪರಿಣಾಮವಾಗಿ ಪಿರ್ಯಾದಿರವರ ಮುಖಕ್ಕೆ, ಮತ್ತು ಕುತ್ತಿಗೆಗೆ ಹಾಗೂ ಕೈ ಮತ್ತು ಭುಜಕ್ಕೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಅಲ್ಲದೆ ಪಿರ್ಯಾದಿಯ ಜೊತೆಯಲ್ಲಿದ್ದ ಪಿರ್ಯಾದಿಯ ಮಗಳ ಮುಖಕ್ಕೆ ಮತ್ತು ಮೈಗೇ ತಾಗಿ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದೆ. ತಾಯಿ ಮತ್ತು ಮಗುವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ : 447,504,506,326(A) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಲಾಗಿದ್ದು. ಹಣಕಾಸಿಗೆ ಸಂಬಂಧಿಸಿದ ಮನಸ್ತಾಪವೇ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿರುತ್ತದೆ. ತನಿಖೆ ಪ್ರಗತಿಯಲ್ಲಿರುತ್ತದೆ.

Leave A Reply

Your email address will not be published.