ಶಬರಿಮಲೆಯಲ್ಲಿ ಸಕಲ ಸಿದ್ಧತೆ | ಸ್ವಚ್ಛ ಶಬರಿಮಲೆಗೆ ಆದ್ಯತೆ, ಪ್ಲಾಸ್ಟಿಕ್ ನಿಷೇಧ

ಸ್ಪೆಷಲ್ ರಿಪೋರ್ಟ್: ಪ್ರವೀಣ್ ಚೆನ್ನಾವರ

ಶಬರಿಮಲೆ : ಸ್ವಾಮಿಯೇ ಶರಣಂ ಅಯ್ಯಪ್ಪ…… ಘೋಷಣೆ ಎಲ್ಲೆಡೆಯಿಂದ ಕೇಳಲು ಶುರುವಾಗಿದೆ. ಶಬರಿಮಲೆ ಯಾತ್ರೆಗೆ ಭಕ್ತಾದಿಗಳು ಹೊರಡುತ್ತಿದ್ದಾರೆ. ಈಗಾಗಲೇ ಶಬರಿಮಲೆಯಲ್ಲಿ ಸಕಲ ಸಿದ್ಧತೆ ನಡೆದಿದ್ದು, ಈ ಬಾರಿ ಸ್ವಚ್ಛ ಶಬರಿಮಲೆಗೆ ಆದ್ಯತೆ ನೀಡಲಾಗಿದೆ. ಭಕ್ತಾದಿಗಳ ಸಂಖ್ಯೆ ಹೆಚ್ಚು ಬರುವ ನಿರೀಕ್ಷೆ ಇರುವುದರಿಂದ ವಾಹನ ಪಾರ್ಕಿಂಗ್ ಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಪಂಪಾದಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಕೇರಳದ ಪಟ್ಟಾನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೇ ಸ್ವಾಮಿ ಅಯ್ಯಪ್ಪನ ಸನ್ನಿದಾನ ಮಕರವಿಳಕ್ಕು ಉತ್ಸವಕ್ಕಾಗಿ ಡಿ.30ರಂದು ಸಂಜೆ 5 ಗಂಟೆಗೆ ತೆರೆದುಕೊಂಡಿದೆ. ನ.16 ರಿಂದ ಆರಂಭಗೊಂಡಿದ್ದ ಮಂಡಲ ಉತ್ಸವ ಡಿ.27 ರ ತನಕ ನಡೆದು ಶಬರಿಮಲೆ ಬಾಗಿಲು ಮುಚ್ಚಲಾಗಿತ್ತು.ನಂತರ 21 ದಿನಗಳ ಮಕರ ಉತ್ಸವಕ್ಕಾಗಿ ಡಿ.30 ರಂದು ತೆರದುಕೊಂಡಿದೆ.ಈ ಹಿನ್ನೆಲೆಯಲ್ಲಿ ಪಂಪಾ, ಶಬರಿಗಿರಿ ಮತ್ತು ಶಬರಿಮಲೆ ದೇಗುಲದ ಸುತ್ತಮುತ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಕನ್ನಡಿಗರಿಗಾಗಿ ಪಂಪಾ ನದಿಯ ತಟದಲ್ಲಿರುವ ಗಣಪತಿ ದೇವಸ್ಥಾನದ ಸಮೀಪ ಬೃಹತ್ ಭೋಜನಾಲಯವನ್ನು ನಿರ್ಮಿಸಲಾಗಿದೆ. ಕರ್ನಾಟಕದಿಂದ ತೆರಳುವ ಸಾವಿರಾರು ಮಾಲಾಧಾರಿಗಳಿಗೆ ಇದು ಸಹಕಾರಿಯಾಗಲಿದೆ. ಇಲ್ಲಿ ಕನ್ನಡದಲ್ಲಿಯೇ ಅಗತ್ಯ ಸೂಚನೆ, ಮಾರ್ಗದರ್ಶನ ನೀಡಲಾಗುತ್ತಿದೆ. ವಿಶೇಷ ಸೌಲಭ್ಯಗಳಿಂದಾಗಿ ಈ ವರ್ಷ ರಾಜ್ಯದ ಭಕ್ತರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದೆ.

ಮಕರವಿಳಕ್ಕು ಪುಣ್ಯ ಕಾಲದಲ್ಲಿ ಮುಂಜಾನೆ 4 ರಿಂದ ಮಧ್ಯಾಹ್ನ 1.30 ರವರೆಗೂ, ಸಂಜೆ 4 ರಿಂದ ರಾತ್ರಿ 11 ರವರೆಗೆ ಅಯ್ಯಪ್ಪ ದರ್ಶನ ಮಾಡಬಹುದಾಗಿದೆ. ಉಳಿದಂತೆ ಉಷಾ ಪೂಜೆ ಮತ್ತಿತರೆ ವಿಶೇಷ ಸಂದರ್ಭಗಳಲ್ಲಿ ಕೊಂಚ ಬದಲಾವಣೆ ಇರುತ್ತದೆ.
ಹತ್ತು ವರ್ಷಕ್ಕೂ ಮೇಲ್ಪಟ್ಟ 50 ವರ್ಷಕ್ಕೆ ಒಳಗಿನ ವಯೋಮಿತಿಯ ಮಹಿಳೆಯರಿಗೆ ಅಯ್ಯಪ್ಪ ದರ್ಶನದ ವಿವಾದದ ಹಿನ್ನೆಲೆಯಲ್ಲಿ ಕಳೆದ ವರ್ಷ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಕಾರಣ ನಿಲಕ್ಕಲ್, ಪಂಪ ಹಾಗೂ ಶಬರಿಗಿರಿಯಲ್ಲಿ ಭಾರೀ ಭದ್ರತೆ ಮಾಡಲು ನಿರ್ಧರಿಸಲಾಗಿದೆ.ಯಾವುದೇ ಕಾರಣಕ್ಕೆ ಒಂದು ಸಣ್ಣ ಅಹಿತಕರ ಘಟನೆಗೂ ಅವಕಾಶ ಇಲ್ಲದಂತೆ ವಾರ್ಷಿಕ ಮಂಡಲೋತ್ಸವವನ್ನು ಪೂರೈಸಲು ನಿರ್ಧರಿಸಲಾಗಿದೆ.ಅಲ್ಲದೆ ಈ ಬಾರಿ ಶಬರಿಮಲೆ ಪ್ರವೇಶಿಸುವ 10 ರಿಂದ 50 ವಯೋಮಾನದ ಮಹಿಳೆಯರಿಗೆ ಭದ್ರತೆ ನೀಡಲು ಕೇರಳ ಸರಕಾರ ನಿರಾಕರಿಸಿರುವುದರಿಂದ ಈ ಬಾರಿ ಮಲೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಪಂಪಾದಲ್ಲಿ ವಾಹನ ಪಾರ್ಕಿಂಗ್‍ಗೆ ನಿರ್ಬಂಧ:ಈ ವರ್ಷ ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ ಪಂಪಾದಲ್ಲಿ ಪಾರ್ಕಿಂಗ್ ನಿಷೇ„ಸಲಾಗಿದೆ. ಕೇರಳ ಸರಕಾರದ ಸಾರಿಗೆ ಬಸ್‍ಗಳು ಮಾತ್ರ ಅಲ್ಲಿವರೆಗೆ ಹೋಗಲಿವೆ. ಉಳಿದಂತೆ ಭಕ್ತರ ವಾಹನಗಳನ್ನು ನಿಲಕ್ಕಲ್ ಶಿವ ದೇವಸ್ಥಾನದ ಪಕ್ಕದ ಹತ್ತಿರವಿರುವ ವಿಶಾಲವಾದ ಜಾಗದಲ್ಲಿ ನಿಲುಗಡೆ ಮಾಡಬೇಕಿದೆ.ಈ ವ್ಯವಸ್ಥೆಯನ್ನು ನಿರ್ವಹಿಸಲು ಪೊಲೀಸ್ ಮತ್ತು ಸಾರಿಗೆ ಇಲಾಖೆ ವತಿಯಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ. ವಾಹನ ನಿಲುಗಡೆಗೆ 1 ರಿಂದ 12 ವಿಭಾಗಗಳನ್ನು ಮಾಡಲಾಗಿದೆ.

ಸ್ವಚ್ಛ ಶಬರಿಮಲೆ : ಪ್ಲಾಸ್ಟಿಕ್ ಸಂಪೂರ್ಣ ನಿರ್ಬಂಧ. ಶಬರಿಮಲೆಯಲ್ಲಿ ಈ ವರ್ಷ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಪ್ಲಾಸ್ಟಿಕ್ ಅನ್ನು ಕಡ್ಡಾಯವಾಗಿ ನಿಷೇಧಿ ಸಲಾಗಿದ್ದು, ಬಟ್ಟೆ ಬ್ಯಾಗುಗಳನ್ನು ಬಳಸುವಂತೆ ಅಂಗಡಿ ಮಾಲೀಕರಿಗೆ ತಾಕೀತು ಮಾಡಲಾಗಿದೆ.

ನೀಲಕ್ಕಲ್ ವಾಹನ ನಿಲುಗಡೆ ಸ್ಥಳದಿಂದ ಆರಂಭವಾಗಿ ಶಬರಿಗಿರಿಯವರೆಗೂ ಪ್ಲಾಸ್ಟಿಕ್ ಕಾಣುವಂತೆಯೇ ಇಲ್ಲ ಎಂದು ಸರಕಾರ ಆದೇಶಿಸಿದೆ. ಹೆಜ್ಜೆ ಹೆಜ್ಜೆಗೂ ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ.

ಆನ್‍ಲೈನ್ ಬುಕ್ಕಿಂಗ್ : ಭಕ್ತರಿಗೆ ಆದಷ್ಟು ಸುಲಭವಾಗಿ ಸ್ವಾಮಿಯ ದರ್ಶನ ಭಾಗ್ಯ ಸಿಗಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗೆ ಆನ್‍ಲೈನ್ ಲ್ಲಿ ತಮ್ಮನ್ನುನೋಂದಾಯಿಸಿಕೊಳ್ಳಬಹುದು. ಇವರು ಪ್ರತ್ಯೇಕ ಸಾಲಿನಲ್ಲಿ ದರ್ಶನ ಪಡೆಯಬಹುದು ಹಾಗೂ ಪ್ರಸಾದವನ್ನೂ ತೆಗೆದುಕೊಳ್ಳಬಹುದಾಗಿದೆ. ಸಾಮಾನ್ಯ ಕ್ಯೂನಲ್ಲಿ ಬಂದರೆ ದರ್ಶನಕ್ಕೆ 4 ರಿಂದ 5 ಗಂಟೆ ಸಮಯ ಹಿಡಿಯುತ್ತದೆ.

ಆನ್ಲೈನ್ ಬುಕಿಂಗ್ ಮಾಡಿಕೊಂಡರೆ ಎರಡೂವರೆ ಗಂಟೆಯಲ್ಲಿ ದರ್ಶನ ಮಾಡಬಹುದು. ತುಪ್ಪಾಭಿಷೇಕ ಸೇರಿದಂತೆ ಇತರ ಸೇವೆಗಳಿಗೂ ಮುಂಗಡವಾಗಿ ಕಾದಿರಿಸಬಹುದು. ದಿನವೊಂದಕ್ಕೆ ಮೂರು ಸಾವಿರ ಭಕ್ತರು ಆನ್‍ಲೈನ್ ಮೂಲಕ ದರ್ಶನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಸಂಖ್ಯೆ 7025800100 ಇಲ್ಲಿ ಕರೆ ಮಾಡಬಹುದು.

Leave A Reply

Your email address will not be published.