ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವರ ಮಾಧುರ್ಯ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಸ್ವರ ಮಾಧುರ್ಯ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್. ರೈ ಅವರು ವಹಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ರಥಬೀದಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಮುಕುಂದರಾಜ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಾಹಿತ್ಯ ಸಂಘದ ಸಂಘಟಕರಾದ  ಎಂ.. ಶೇಷಗಿರಿ,  ರಶ್ಮಿ ಕೆ, ಕಾರ್ಯದರ್ಶಿ ಶ್ರಾವ್ಯ ಎನ್ ಕೆ  ಹಾಗೂ ಜತೆಕಾರ್ಯದರ್ಶಿ ಚೈತನ್ಯ ಕೆ   ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಆಶಯ ಗೀತೆಯನ್ನು ಹಾಡಿದರು.  ಆಂಗ್ಲಭಾಷಾ ಶಿಕ್ಷಕಿ  ರಶ್ಮಿ ಕೆ ಸ್ವಾಗತಿಸಿ ವಂದಿಸಿದರು.

Leave A Reply